ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಐಎಎಸ್ ಅಧಿಕಾರಿ ಅಮಾನತು: ಮೋದಿಯನ್ನು ಟೀಕಿಸಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಒಡಿಸ್ಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡಿಗ ಐಎಎಸ್ ಅಧಿಕಾರಿ ಒಬ್ಬರನ್ನು ಚುನಾವಣಾ ಆಯೋಗ ಅಮಾನತು ಮಾಡಿರುವುದನ್ನು ಖಂಡಿಸಿರುವ ಸಿದ್ದರಾಮಯ್ಯ, ಇದಕ್ಕೆ ಮೋದಿ ಅವರನ್ನು ಹೊಣೆ ಮಾಡಿ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಒಡಿಸ್ಸಾದ ಸಂಬಾಲ್‌ಪುರನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕದ ಮೊಹಮ್ಮದ್ ಮೋಹ್ಸಿನ್ ಅವರು ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಿದ್ದರು, ಇದರಿಂದಾಗಿ ಅವರನ್ನು ಅಮಾನತು ಮಾಡಲಾಗಿತ್ತು.

ಮೋದಿ ಬೆಂಗಾವಲು ವಾಹನ ಪರಿಶೀಲನೆ; ಕರ್ನಾಟಕ ಕೇಡರ್ ಅಧಿಕಾರಿ ಸಸ್ಪೆಂಡ್ಮೋದಿ ಬೆಂಗಾವಲು ವಾಹನ ಪರಿಶೀಲನೆ; ಕರ್ನಾಟಕ ಕೇಡರ್ ಅಧಿಕಾರಿ ಸಸ್ಪೆಂಡ್

ಈ ಅಮಾನತ್ತನ್ನು ಖಂಡಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಮೋದಿ ಅವರ ವಾಹನವನ್ನು ಪರಿಶೀಲನೆ ಮಾಡುವ ಧೈರ್ಯ ತೋರಿದ್ದಕ್ಕೆ ಈ ಶಿಕ್ಷೆಯಾ? ಬಚ್ಚಿಟ್ಟುಕೊಳ್ಳಲು ಏನೂ ಇಲ್ಲದಿವಾದರೆ ಮೋದಿ ಅವರಿಗೆ ಈ ಅಭದ್ರತೆ ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.

Siddaramaiah tweet about suspending Karnataka cadre IAS officer

1996ರ ಬ್ಯಾಚ್‌ನ ಕರ್ನಾಟಕದ ಮೊಹಮ್ಮದ್ ಮೊಹ್ಸಿನ್ ಅವರು ಒಡಿಸ್ಸಾದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಸಂಬಾಲ್‌ಪುರದಲ್ಲಿ ಸಮಾವೇಶಕ್ಕೆ ಮೋದಿ ಅವರು ಬಂದಿದ್ದಾಗ ಅವರ ಹೆಲಿಕಾಪ್ಟರ್‌ ಅನ್ನು ಮೊಹ್ಸಿನ್ ಅವರು ತಪಾಸಣೆಗೆ ಒಳಪಡಿಸಿದ್ದರು.

ನರೇಂದ್ರ ಮೋದಿಗೆ ಟ್ವೀಟ್‌ ಮೂಲಕ ತಿರುಗೇಟು ಕೊಟ್ಟ ಎಚ್‌ಡಿಕೆನರೇಂದ್ರ ಮೋದಿಗೆ ಟ್ವೀಟ್‌ ಮೂಲಕ ತಿರುಗೇಟು ಕೊಟ್ಟ ಎಚ್‌ಡಿಕೆ

ತಪಾಸಣೆ ನಡೆಸಲು ಮೊದಲು ಮೋದಿ ಅವರ ಭದ್ರತಾ ಇಲಾಖೆ ಎಸ್‌ಜಿಪಿ ಪ್ರತಿರೋಧ ವ್ಯಕ್ತಪಡಿಸಿತ್ತು, ಆದರೆ ಮೊಹ್ಸಿನ್ ಅವರು ತಪಾಸಣೆ ಮಾಡಿದ್ದರು. ಇದರಿಂದ ಮೋದಿ ಅವರು ಮುಂದಿನ ಕಾರ್ಯಕ್ರಮಕ್ಕೆ ತೆರಳಲು ತಡವಾಗಿತ್ತು. ಇದು ಮೋದಿ ಅವರಿಗೆ ಸಿಟ್ಟು ತರಿಸಿತ್ತು ಎನ್ನಲಾಗಿತ್ತು.

ಘಟನೆ ನಡೆದ ಮರುದಿನವೇ ಚುನಾವಣಾ ಆಯೋಗವು ಮೊಹಮ್ಮದ್ ಮೊಹ್ಸಿನ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿತ್ತು. ಇದನ್ನು ಕಾಂಗ್ರೆಸ್ ವಿರೋಧಿಸಿತ್ತು, ಇದೀಗ ಸಿದ್ದರಾಮಯ್ಯ ಅವರು ಸಹ ಐಎಎಸ್ ಅಧಿಕಾರಿಯ ಅಮಾನತ್ತನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ.

English summary
Siddaramaiah condemns Narendra Modi for suspending Karnataka cadre IAS officer Mohammed Mohsin. He checks the chopper of Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X