ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ಗೊಂದಲ : ಸಿದ್ದರಾಮಯ್ಯ ಟ್ವೀಟ್

|
Google Oneindia Kannada News

ಬೆಂಗಳೂರು, ಮೇ 05 : ಇಂದು ನಡೆಯಲಿರುವ ನೀಟ್ ಪರೀಕ್ಷೆ ಹಲವು ಗೊಂದಲಕ್ಕೆ ಕಾರಣವಾಗಿದೆ. ಒಂದು ಕಡೆ ರೈಲಿನ ಮಾರ್ಗ ಬದಲಾವಣೆಯಾಗಿದ್ದು, ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಲಿದ್ದಾರೆ.

ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ಆದರೆ, ಪರೀಕ್ಷೆ ಬಗ್ಗೆ ಹಲವು ಗೊಂದಲಗಳು ಉಂಟಾಗಿದ್ದು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

ನೀಟ್‌ ರ‍್ಯಾಂಕಿಂಗ್‌ ಆಧರಿಸಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಚಾಲನೆನೀಟ್‌ ರ‍್ಯಾಂಕಿಂಗ್‌ ಆಧರಿಸಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಚಾಲನೆ

ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಆಗಮಿಸುತ್ತಿದ್ದಾರೆ. ಆದರೆ, ರೈಲ್ವೆ ಇಲಾಖೆ ಮಾರ್ಗ ಬದಲಾವಣೆ ಮಾಡಿದ್ದು, ಅರಸೀಕೆರೆ ಮೂಲಕ ರೈಲು ಬೆಂಗಳೂರಿಗೆ ಆಗಮಿಸಬೇಕಿದೆ.

ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್

Siddaramaiah tweet about NEET exam

ಮಾರ್ಗ ಬದಲಾವಣೆಯಿಂದಾಗಿ ರೈಲು ಬೆಂಗಳೂರು ತಲುಪುವುದು ತಡವಾಗಲಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪರೀಕ್ಷಾ ಕೇಂದ್ರ ಬದಲಾವಣೆ : ಕೊನೆ ಕ್ಷಣದಲ್ಲಿ ಬೆಂಗಳೂರಿನಲ್ಲಿ ನೀಟ್ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಲಾಗಿದೆ. ಯಲಹಂಕದಲ್ಲಿದ್ದ ಕೇಂದ್ರವನ್ನು ಚುನಾವಣಾ ನೆಪ ಹೇಳಿ ದಯಾನಂದ ಸಾಗರ್ ಕಾಲೇಜಿಗೆ ಬದಲಾಯಿಸಲಾಗಿದೆ.

ಯಲಹಂಕದಿಂದ ದಯಾನಂದ ಸಾಗರ್ ಕಾಲೇಜಿಗೆ ಪ್ರಯಾಣ ಮಾಡಲು 32 ಕಿ.ಮೀ. ದೂರವಿದ್ದು, ಅಲ್ಲಿಗೆ ಪ್ರಯಾಣಿಸಲು ಒಂದೂವರೆ ಗಂಟೆ ಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ.

English summary
Hundreds of students in Karnataka may not be able to take up NEET because of delay in the train services. Tweeted Former Chief Minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X