• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಜ್ರ ಖಚಿತ ಊಬ್ಲೋ ವಾಚ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

|
   ಹುಬ್ಲೋಟ್ ವಾಚ್ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

   ಬೆಂಗಳೂರು, ನವೆಂಬರ್ 05 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಊಬ್ಲೋ ವಾಚ್ ವಿವಾದ ಮತ್ತೆ ಕಾಡಲಿದೆಯೇ?. 2016ರಲ್ಲಿ ವಜ್ರ ಖಚಿತ ಊಬ್ಲೋ ವಾಚ್ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಬಳಿಕ ಎಸಿಬಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

   ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕೈಯಲ್ಲಿ ಇದ್ದ ಊಬ್ಲೋ ವಾಚ್ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆದಿತ್ತು. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿತ್ತು.

   ಆದರೆ, ಆಗ ಕ್ಲೀನ್ ಚಿಟ್ ಸಿಕ್ಕಿತ್ತು.

   ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!

   ಈಗ ಪುನಃ ಊಬ್ಲೋ ವಾಚ್ ಬಗ್ಗೆ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಡಾ.ಗಿರೀಶ್‌ಚಂದ್ರ ವರ್ಮಾ ಅವರು ನನಗೆ ವಾಚ್ ಉಡುಗೊರೆ ನೀಡಿದ್ದರು ಎಂದು ಹೇಳಿದ್ದರು. ಡಾ.ಗಿರೀಶ್‌ಚಂದ್ರ ವರ್ಮಾ ಅವರು ಸಹ ಎಸಿಬಿ ವಿಚಾರಣೆ ಎದುರಿಸಿ ಅಗತ್ಯ ದಾಖಲೆ ನೀಡಿದ್ದರು.

   ಊಬ್ಲೋ ವಾಚ್ ಪ್ರಕರಣ: ಸಿದ್ದರಾಮಯ್ಯಗೆ ಎಸಿಬಿ ಕ್ಲೀನ್ ಚಿಟ್

   ಆದರೆ, ಈಗ ಡಾ.ಗಿರೀಶ್‌ಚಂದ್ರ ವರ್ಮಾ ಅವರು ಎಸಿಬಿಗೆ ನೀಡಿರುವ ದಾಖಲೆ ನಕಲಿ ಎಂಬ ಅಂಶ ಬಹಿರಂಗವಾಗಿದೆ. ಆದ್ದರಿಂದ, ಸಿದ್ದರಾಮಯ್ಯ ವಿರುದ್ಧ ಪುನಃ ತನಿಖೆ ನಡೆಯಲಿದೆಯೇ? ಎಂಬ ಪ್ರಶ್ನೆ ಎದ್ದಿದೆ....

   ಸದನದಲ್ಲಿ ವಾಚ್ ವಾರ್ : ಯಾರು, ಏನು ಹೇಳಿದರು?

   ಸಿದ್ದರಾಮಯ್ಯ ಟ್ವೀಟ್

   ನನಗೆ ಉಡುಗೊರೆಯಾಗಿ ದೊರೆತ ವಾಚ್‌ಗೆ ಸಂಬಂಧಿಸಿದಂತೆ ಎಸಿಬಿ ಕೂಲಂಕುಷ ತನಿಖೆ ಮಾಡಿ 'ಬಿ' ರಿಪೋರ್ಟ್ ಕೊಟ್ಟಾಗಿದೆ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

   ಎಸಿಬಿಗೆ ದೂರು

   ಎಸಿಬಿಗೆ ದೂರು

   ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ಬಗ್ಗೆ 2016ರಲ್ಲಿ ಎಸಿಬಿಗೆ ನಟರಾಜ ಶರ್ಮಾ, ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ, ಆರ್‌ಟಿಐ ಕಾರ್ಯಕರ್ತ ರಾಮಮೂರ್ತಿ ಗೌಡ ಅವರು ದೂರು ನೀಡಿದ್ದರು. ದೂರಿನ ಕುರಿತು ವಿಚಾರಣೆ ನಡೆಸಿದ ಎಸಿಬಿ ಸಿದ್ದರಾಮಯ್ಯ ಅವರಿಗೆ 2017ರ ಮಾರ್ಚ್‌ನಲ್ಲಿ ಕ್ಲೀನ್ ಚಿಟ್ ನೀಡಿತ್ತು.

   ಸಿದ್ದರಾಮಯ್ಯ ಸ್ನೇಹಿತರ ಹೇಳಿಕೆ

   ಸಿದ್ದರಾಮಯ್ಯ ಸ್ನೇಹಿತರ ಹೇಳಿಕೆ

   ಸಿದ್ದರಾಮಯ್ಯ ಅವರು ಡಾ.ಗಿರೀಶ್‌ಚಂದ್ರ ವರ್ಮಾ ಅವರು ನನಗೆ ಊಬ್ಲೋ ವಾಚ್ ಉಡುಗೊರೆ ನೀಡಿದ್ದರು ಎಂದು ಹೇಳಿದ್ದರು. ಎಸಿಬಿ ಮುಂದೆ ಹಾಜರಾಗಿದ್ದ ದುಬೈನಲ್ಲಿ ನೆಲೆಸಿರುವ ಡಾ.ಗಿರೀಶ್‌ಚಂದ್ರ ವರ್ಮಾ ಅವರು 70 ಲಕ್ಷ ಬೆಲೆಬಾಳುವ ವಾಚ್‌ ಅನ್ನು ನಾನು ಉಡುಗೊರೆ ನೀಡಿದ್ದೆ ಎಂದು ಹೇಳಿಕೆ ನೀಡಿದ್ದರು. ವಾಚ್ ಖರೀದಿ ಮಾಡಿದ ಬಗ್ಗೆ ದಾಖಲೆಗಳನ್ನು ನೀಡಿದ್ದರು.

   ಊಬ್ಲೋ ವಾಚ್ ಸರ್ಕಾರದ ಆಸ್ತಿ

   ಊಬ್ಲೋ ವಾಚ್ ಸರ್ಕಾರದ ಆಸ್ತಿ

   2016ರಲ್ಲಿ ವಜ್ರಖಚಿತ ವಾಚ್‌ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಆಗ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿ 'ಡಾ.ಗಿರೀಶ್‌ಚಂದ್ರ ವರ್ಮಾ ಅವರು ನನಗೆ 2015ರ ಜುಲೈನಲ್ಲಿ ನೀಡಿದ ಊಬ್ಲೋ ಬಿಗ್ ಬ್ಯಾಂಗ್ 301-ಎಂ ವಾಚ್‌ ಅನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡುತ್ತಿದ್ದೇನೆ ಎಂದು ಅಫಿಡೆವಿಟ್ ಸಲ್ಲಿಸಿ, ವಾಚ್‌ಅನ್ನು ಅಂದಿನ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮೂಲಕ ಸರ್ಕಾರಕ್ಕೆ ನೀಡಿದ್ದರು.

   ಎಚ್.ಡಿ.ಕುಮಾರಸ್ವಾಮಿ

   ಎಚ್.ಡಿ.ಕುಮಾರಸ್ವಾಮಿ

   ಸಿದ್ದರಾಮಯ್ಯ ಅವರು ವಜ್ರ ಖಚಿತ ಊಬ್ಲೋ ವಾಚ್ ಕಟ್ಟುತ್ತಿದ್ದಾರೆ ಎಂದು ಅಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮೊದಲು ಆರೋಪ ಮಾಡಿದ್ದರು. ಈಗ ಅವರೇ ರಾಜ್ಯದ ಮುಖ್ಯಮಂತ್ರಿ. ಆದ್ದರಿಂದ, ವಾಚ್ ಬಗ್ಗೆ ಮತ್ತೆ ತನಿಖೆ ನಡೆಯಲಿದೆಯೇ? ಕಾದು ನೋಡಬೇಕು.

   English summary
   The Anti-Corruption Bureau (ACB) has given a clean chit to Former Chief Minister Siddaramaiah in the Hublot watch case. Hublot watch gifted to Siddaramaiah by his friend Dr.Girish Chandra Varma. Now Siddaramaiah tweet about Hublot watch case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X