ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಹಂತಕರು ಯಾರು? ಯೋಗಿಗೆ ಸಿದ್ದು ಛೂಬಾಣ!

|
Google Oneindia Kannada News

Recommended Video

ಯೋಗಿ ಆದಿತ್ಯನಾಥ್ ರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಮಾರ್ಚ್ 07: ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಲೇವಡಿ ಮಾಡಿದ್ದಾರೆ.

ಇದಕ್ಕೂ ಮುನ್ನ ಯೋಗಿ ಕರ್ನಾಟಕಕ್ಕೆ ಆಗಮಿಸಿದಾಗಲೆಲ್ಲ ಸಿದ್ದರಾಮಯ್ಯ ಮತ್ತು ಯೋಗಿ ನಡುವೆ ಟ್ವಿಟ್ಟರ್ ವಾರ್ ನಡೆಯುತ್ತಲೇ ಇದ್ದಿದ್ದು ಹೊಸವಿಷಯವಲ್ಲ. ನಿನ್ನೆ(ಮಾ.06) ಮಂಗಳೂರಿನಲ್ಲಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್, ಕರ್ನಾಟಕದ ಕಾಂಗ್ರೆಸ್ ಸರಕಾರದ್ದು ಅಮಾಯಕರ ಹತ್ಯೆಯೇ ಅಜೆಂಡಾ ಅಗಿದೆ. ಇಲ್ಲಿ ಹಿಂದೂ ಕಾರ್ಯಕರ್ತರೇ ಸುರಕ್ಷಿತರಿಲ್ಲ ಮತ್ತೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದರು. ಸಿದ್ದು ಸರ್ಕಾರವನ್ನು ನರಹಂತಕ ಸರ್ಕಾರ ಎಂದಿದ್ದರು.

ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ : ಯೋಗಿ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ : ಯೋಗಿ

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್, ನಿಜವಾಗಯೂ ನರಹಂತಕರು ಯಾರು ಎಂದು ಪ್ರಶ್ನಿಸಿದ್ದಾರೆ. ಅವರ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ.

ಯಾರನ್ನು ನರಹಂತಕ ಎಂದು ಕರೆಯೋಣ ?

ಯಾರನ್ನು ನರಹಂತಕ ಎಂದು ಕರೆಯೋಣ ?

ಯೋಗಿ ಆದಿತ್ಯನಾಥ್ ಅವರೇ, ನಿಮ್ಮ ಸ್ವಂತ ಕ್ಷೇತ್ರ ಗೋರಖ್ಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀವು ಅಧಿಕಾರಕ್ಕೆ ಬಂದ ದಿನದಿಂದ 1250ಕ್ಕೂ ಹೆಚ್ಚು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ. ಯಾರನ್ನು ನರಹಂತಕ ಎಂದು ಕರೆಯೋಣ!

ಮೋದಿ ಕಾಲ್ಗುಣ ಚೆನ್ನಾಗಿದೆ!

ಮೋದಿ ಕಾಲ್ಗುಣ ಚೆನ್ನಾಗಿದೆ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿಯವರು ವ್ಯಾಪಕ ಪ್ರಚಾರ ನಡೆಸಿದ್ದರೂ ಅಲ್ಲಿನ ಎಂಟು ಕ್ಷೇತ್ರಗಳಲ್ಲಿ ಏಳನ್ನು ಕಾಂಗ್ರೆಸ್ ಗೆದ್ದಿತ್ತು. ಅವರ 'ಕಾಲ್ಗುಣ' ಚೆನ್ನಾಗಿತ್ತು, ಅದೇ ನಿರೀಕ್ಷೆಯಲ್ಲಿ.

ಬಿಜೆಪಿ ಮಾನ ಉಳಿಸಿದ್ದು ಆಡ್ವಾಣಿ, ವಾಜಪೇಯಿ ಮೌನ!

ಬಿಜೆಪಿ ಮಾನ ಉಳಿಸಿದ್ದು ಆಡ್ವಾಣಿ, ವಾಜಪೇಯಿ ಮೌನ!

ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಮಾತನಾಡಲು ಅಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿ ಇದ್ದಿದ್ದರೆ, ವಕಾಶ ನೀಡಿದರೆ 'ನರಹಂತಕರು'? ಯಾರು ಎಂದು ಅವರೇ ಹೇಳುತ್ತಿದ್ದರು. ಇಬ್ಬರು ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಕಿಡಿಕಾರಿದ್ದಾರೆ ಸಿದ್ದರಾಮಯ್ಯ.

ನಾನು ಬಿಜೆಪಿ ನಾಯಕರಂತೆ ಕೀಳುಮಟ್ಟಕ್ಕೆ ಹೋಗಲಾರೆ!

ಬಿಜೆಪಿ ನಾಯಕರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾನು ಅವರಂತೆ ಕೀಳುಮಟ್ಟಕ್ಕೆ ಹೋಗುವುದಕ್ಕೆ ಸಾಧ್ಯವಿಲ್ಲ. ಆದರೆ ನಾನು ಬಸವಣ್ಣನವರ ವಚನವನ್ನು ಮಾಗತ್ರ ಹೇಳಬಲ್ಲೆ:
ಕಳ‌ಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

English summary
Karnataka chief minsister Siddaramaiah blames Uttar Pradesh chief minister Yogi Adityanath, who visited Mangaluru for BJP's Janasuraksha Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X