ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆ ಕಂಡು ಭಾವುಕರಾದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಯುರೋಪ್ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಡನ್‌ ತಲುಪಿದ್ದಾರೆ.

ಲಂಡನ್‌ನ ಥೇಮ್ಸ್ ಪಾರ್ಕ್‌ನಲ್ಲಿರುವ ಬಸವೇಶ್ವರರ ಪುತ್ಥಳಿ ಮುಂದೆ ನಿಂತಿರುವ ಚಿತ್ರವನ್ನು ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ಹಂಚಿಕೊಂಡಿದ್ದಾರೆ.

ಬಸವಣ್ಣ ಅವರ ಪುತ್ಥಳಿಯನ್ನು ಕಂಡು ಭಾವುಕರಾಗಿದ್ದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ಸಿದ್ದರಾಮಯ್ಯ ವಾಪಸ್ ಬರಲು ಮೂರೇ ದಿನ, ಮುಂದೇನಾಗುತ್ತೆ?ಸಿದ್ದರಾಮಯ್ಯ ವಾಪಸ್ ಬರಲು ಮೂರೇ ದಿನ, ಮುಂದೇನಾಗುತ್ತೆ?

ಲಂಡನ್‌ನ ಥೇಮ್ಸ್ ಪಾರ್ಕ್‌ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ಣುತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ ಎಂದು ಅವರು ಬಸವಣ್ಣನನ್ನು ಕೊಂಡಾಡಿದ್ದಾರೆ.

siddaramaiah shared photo of basavanna statue in london

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಬಿ.ಆರ್. ಪಾಟೀಲ್, 'ಬಸವಣ್ಣನವರ ಆಶಯಗಳ ಮೇಲೆ 5 ವರ್ಷ ಆಡಳಿತ ನೀಡಿದ ಗೆಳೆಯನಿಗೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.

ಹಲವು ದಶಕಗಳ ಬಿಡುವಿಲ್ಲದ ನಿಮ್ಮ ಕಾರ್ಯಗಳ ನಡುವೆ ನಿಮಗೆ ವಿರಾಮ ಬೇಕಿತ್ತು. ನೀವು ರಜೆಯ ಮೇಲೆ ತೆರಳಿರುವುದು ಖುಷಿ ನೀಡಿದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಜಾರಕಿಹೊಳಿ ಬ್ರದರ್ಸ್ ಗೆ ವಿದೇಶದಿಂದ ಬಂತು ಸಿದ್ದರಾಮಯ್ಯ ಸಂದೇಶ!ಜಾರಕಿಹೊಳಿ ಬ್ರದರ್ಸ್ ಗೆ ವಿದೇಶದಿಂದ ಬಂತು ಸಿದ್ದರಾಮಯ್ಯ ಸಂದೇಶ!

ಕುಟುಂಬದವರೊಂದಿಗೆ ಸೆ. 3ರಂದು ಯುರೋಪ್ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ, ಭಾನುವಾರ ಬೆಂಗಳೂರಿಗೆ ಮರಳುವ ನಿರೀಕ್ಷೆಯಿದೆ.

ರಷ್ಯಾಕ್ಕೆ ತೆರಳಿದ್ದ ಸಿದ್ದರಾಮಯ್ಯ, ಮಾಸ್ಕೋದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಕಳೆದ ಕ್ಷಣಗಳ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

ಸಮ್ಮಿಶ್ರ ಸರ್ಕಾರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದರಿಂದ ಸಿದ್ದರಾಮಯ್ಯ ಅವರು ಸೆ.16ರಂದು ಮರಳಿ ಬರುವ ದಿನಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಸೂಟು, ಬೂಟು, ಕೂಲಿಂಗ್ ಗ್ಲಾಸು, ಸಿದ್ದರಾಮಯ್ಯ ಫುಲ್ ಚೇಂಜ್‌ಸೂಟು, ಬೂಟು, ಕೂಲಿಂಗ್ ಗ್ಲಾಸು, ಸಿದ್ದರಾಮಯ್ಯ ಫುಲ್ ಚೇಂಜ್‌

ಸೆ. 17ರ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ವಿದ್ಯಮಾನಗಳು ಜರುಗಲಿವೆ ಎಂಬ ಹೇಳಿಕೆಗಳು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಭಾರಿ ಬದಲಾವಣೆಗಳಾಗಲಿವೆ ಎಂಬ ಊಹಾಪೋಹಗಳನ್ನು ಸೃಷ್ಟಿಸಿವೆ. ಸಿದ್ದರಾಮಯ್ಯ ಅವರ ನಡೆಯ ಮೇಲೆ ಸರ್ಕಾರದ ಅಳಿವು-ಉಳಿವು ನಿಂತಿದೆ ಎನ್ನಲಾಗಿದೆ.

English summary
Siddaramaiah visited London's Thames park Basaveshwara statue and shared photo in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X