ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮೇಶ್ವರ್ ನಾನು ಅಣ್ಣ-ತಮ್ಮ, ಈ ಬಾರಿ ಆತ ಗೆಲ್ಲಬೇಕು:ಸಿಎಂ

By Manjunatha
|
Google Oneindia Kannada News

Recommended Video

ಸಿದ್ದರಾಮಯ್ಯನವರಿಗೆ ಜಿ ಪರಮೇಶ್ವರ್ ತಮ್ಮ ಇದ್ದ ಹಾಗೆ | Oneindia Kannada

ಕೊರಟಗೆರೆ, ಮಾರ್ಚ್ 11: 'ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಬಾರಿ ಗೆಲ್ಲಲೇಬೇಕು. ಪರಮೇಶ್ವರ್ ಗೆದ್ದರೆ ರಾಹುಲ್ ಗಾಂಧಿ ಗೆದ್ದ ಹಾಗೆ. ರಾಹುಲ್ ಗಾಂಧಿ ಗೆದ್ದರೆ ನಾನು ಗೆದ್ದ ಹಾಗೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೊರಟಗೆರೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಪರಮೇಶ್ವರ್ ಸೋಲ ಕೂಡದು. ಏಳು ವರ್ಷ ನಮ್ಮ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾನು ಮತ್ತು ಪರಮೇಶ್ಚರ್ ಅಣ್ಣ ತಮ್ಮಂದಿರಂತೆ ಇದ್ದೇವೆ. ಒಂದೇ ಒಂದು ಭಿನ್ನಾಭಿಪ್ರಾಯ ಕೂಡಾ ಇಲ್ಲ ಎಂದರು.

ಕಾಂಗ್ರೆಸ್ ಟಿಕೆಟ್ ರಾಜಕೀಯ : 224 ಕ್ಷೇತ್ರಕ್ಕೆ 1,004 ಅರ್ಜಿಗಳುಕಾಂಗ್ರೆಸ್ ಟಿಕೆಟ್ ರಾಜಕೀಯ : 224 ಕ್ಷೇತ್ರಕ್ಕೆ 1,004 ಅರ್ಜಿಗಳು

ಯಾರೊ ಕೆಲವರು ರಾಜಕೀಯ ಲಾಭಕ್ಕಾಗಿ ಸುಮ್ಮನೆ ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಅಭ್ಯರ್ಥಿಗಳ ಆಯ್ಕೆಯಲ್ಲಿ, ಮಂತ್ರಿಮಂಡಲ ರಚನೆ ಹೀಗೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು. ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Siddaramaiah said Parmeshwar is like his brother

ಯಾರನ್ನೂ ಕೇಳದೆ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ: ಖರ್ಗೆಯಾರನ್ನೂ ಕೇಳದೆ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ: ಖರ್ಗೆ

ಖರ್ಗೆ ಅವರೊಂದಿಗೆ ಮಾತನಾಡುತ್ತೇನೆ
ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿಕೊಂಡಿರುವ ಬಗ್ಗೆ ಖರ್ಗೆ ಅವರು ಅಸಮಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಸಿದ ಮುಖ್ಯಮಂತ್ರಿಗಳು 'ಖೇಣಿ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಖರ್ಗೆ ಅವರು ಏನು ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಅವರೊಂದಿಗೆ ಮಾತನಾಡುತ್ತೇನೆ' ಎಂದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

English summary
CM Siddaramaiah said G.Parameshwar must win this time in Karatgere. He also said Parmeshwar is like his brother. If Parameshwar wins this time its the win of Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X