ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ, ಭಗವಾ ಧ್ವಜಕ್ಕೋ?- ಆರ್‌ಎಸ್‌ಎಸ್ ನಾಯಕರಿಗೆ ಸಿದ್ದರಾಮಯ್ಯ ಸವಾಲು

|
Google Oneindia Kannada News

ಬೆಂಗಳೂರು, ಮೇ 28: ಆರ್‌ಎಸ್‌ಎಸ್ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಬಿಜೆಪಿಗರ ನಡುವೆ ವಾಗ್‌ಸಮರ ಮುಂದುವರಿದಿದೆ. RSS ಮೂಲವನ್ನು ಕೆದಕಿದ್ದ ಸಿದ್ದರಾಮಯ್ಯ ಇದೀಗ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿಗರನ್ನು ಬಿಟ್ಟು ಆರೆಸ್ಸೆಸ್ ನಾಯಕರಿಗೆ ಹಲವು ಸವಾಲುಗಳನ್ನು ಹಾಕಿದ್ದಾರೆ, ಪ್ರಶ್ನೆಗಳನ್ನು ಕೇಳಿದ್ಧಾರೆ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ, ಭಗವಾ ಧ್ವಜಕ್ಕೋ ಹೇಳಿ ಎಂದು ಆರೆಸ್ಸೆಸ್ ನಾಯಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಆರ್.ಎಸ್.ಎಸ್ ನಾಯಕರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ? ಭಗವಾ ಧ್ವಜಕ್ಕೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ ? ಮನುಸ್ಮೃತಿಗೋ? ನಿಮ್ಮ ನಿಷ್ಠೆ ಗಾಂಧೀಜಿಗೋ? ಗೋಡ್ಸೆಗೋ?" ಎಂದು ಇಂದು ಶನಿವಾರ ತಮ್ಮ ಒಂದು ಟ್ವೀಟ್‌ನಲ್ಲಿ ಅವರು ಬರೆದಿದ್ದಾರೆ. ಕುತೂಹಲವೆಂದರೆ ಸಿದ್ದರಾಮಯ್ಯ ತಮ್ಮ 12 ಟ್ವೀಟ್‌ಗಳಲ್ಲಿ #AryanRSS ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ರಾಜಸ್ಥಾನ: 'ಬಿಜೆಪಿ-ಆರ್‌ಎಸ್‌ಎಸ್ ನೀತಿಗಳು ದೇಶಕ್ಕೆ ಸವಾಲು' ಸೋನಿಯಾರಾಜಸ್ಥಾನ: 'ಬಿಜೆಪಿ-ಆರ್‌ಎಸ್‌ಎಸ್ ನೀತಿಗಳು ದೇಶಕ್ಕೆ ಸವಾಲು' ಸೋನಿಯಾ

ಆರೆಸ್ಸೆಸ್‌ನವರೇ ಉತ್ತರಿಸಲಿ

ಸಿದ್ದರಾಮಯ್ಯ ಆರ್‌ಎಸ್‌ಎಸ್ ಮೂಲ ಕೆದಕಿದಾಗ ರಾಜ್ಯ ಬಿಜೆಪಿ ಮುಖಂಡರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದರು. ಈ ಬಗ್ಗೆ ಚಕಾರ ಎತ್ತಿರುವ ಸಿದ್ದರಾಮಯ್ಯ, ತಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್. ಎಂಬ ಸಂಸ್ಥೆಯನ್ನು. ಅದಕ್ಕೆ ಉತ್ತರಿಸುತ್ತಿರುವವರು ಬಿಜೆಪಿ ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರ್‌ಎಸ್‌ಎಸ್ ನಾಯಕರು ಓದು ಬರಹ ಗೊತ್ತಿಲ್ಲದವರೇ ಎಂದು ಪ್ರಶ್ನೆ ಮಾಡಿದ್ದಾರೆ.

"ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿಬಂದಂತೆ ಮಾತನಾಡುತ್ತಿರುವ ಆರ್.ಎಸ್.ಎಸ್. ನಾಯಕರು ಬೆಂಬಲಿಸುತ್ತಿರುವುದು ಮಾತ್ರ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು. ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ?

"ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರ್.ಎಸ್.ಎಸ್. ತೀರ್ಮಾನಿಸಿದೆ? ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು?

"ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನ ಏನು? ಹಿಂದೂ ಆಗಲು ಹಿಂದೂ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದರೆ ಸಾಕಾ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷದ ಸದಸ್ಯರಾಗಬೇಕಾ?" ಎಂದು ಸಿದ್ದರಾಮಯ್ಯ ತಮ್ಮ ಟ್ವೀಟ್‌ಗಳಲ್ಲಿ ನೇರವಾಗಿ ಕೇಳಿದ್ದಾರೆ.

ಹಿಂದೂ ಆಗಲು ಬ್ಲೂ ಫಿಲ್ಮ್ ನೋಡಬೇಕಾ?

ಹಿಂದೂ ಆಗಲು ಬ್ಲೂ ಫಿಲ್ಮ್ ನೋಡಬೇಕಾ?

ಆರ್.ಎಸ್.ಎಸ್.ಗೆ ಬಿಜೆಪಿಗರು ಮಾತ್ರವೇ ಹಿಂದೂಗಳಾ ಎಂಬ ತಮ್ಮ ಮೂಲ ಪ್ರಶ್ನೆಯನ್ನು ಬೆಳೆಸಿದ ಸಿದ್ದರಾಮಯ್ಯ, "ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದೂ ಅಗಲು ೪೦ ಪರ್ಸೆಂಟ್ ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್‌ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು ಹೇಳಿಬಿಡಿ" ಎಂದು ರಾಜ್ಯ ಬಿಜೆಪಿಗೆ ಮೆತ್ತಿಕೊಂಡಿರುವ ಕಳಂಕವನ್ನು ಮತ್ತೆ ಕೆದಕಿದ್ದಾರೆ.

ದಲಿತರಿಗೆ ಏನು ಸ್ಥಾನಮಾನ

"ಆರ್.ಎಸ್.ಎಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರ್.ಎಸ್.ಎಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳಲ್ಲವೇ?

"ಹಸಿದ ಹೊಟ್ಟೆಗೆ ಅನ್ನ, ಎಳೆಯ ಮಕ್ಕಳಿಗೆ ಹಾಲು, ರೈತರ ಬೆಳೆಗೆ ನ್ಯಾಯದ ಬೆಲೆ, ಯುವಜನರಿಗೆ ಉದ್ಯೋಗ, ಅವಕಾಶ ವಂಚಿತರಿಗೆ ಸಮಾನ ಅವಕಾಶ, ಜಾತಿ ತಾರತಮ್ಯದಿಂದ ಅನ್ಯಾಯಕ್ಕೀಡಾದವರಿಗೆ ಸಾಮಾಜಿಕ ನ್ಯಾಯ.. ಹಿಂದೂ ಆಗಲು ಇಷ್ಟು ಅರ್ಹತೆ ಸಾಲದೇ?" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅಸ್ಪೃಶ್ಯತೆ ಬಗ್ಗೆ ಯಾಕೆ ಮಾತನಾಡಲ್ಲ?

ಅಸ್ಪೃಶ್ಯತೆ ಬಗ್ಗೆ ಯಾಕೆ ಮಾತನಾಡಲ್ಲ?

ಅಸ್ಪೃಶ್ಯತೆ ಬಗ್ಗೆ ಯಾಕೆ ಮಾತನಾಡಲ್ಲ?
"ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ತನ್ನ ಸಂಘಟನೆಯ ಪದಾಧಿಕಾರಗಳನ್ನೆಲ್ಲಾ ಯಾಕೆ ಒಂದು ಜಾತಿಗೆ ಮೀಸಲಿಟ್ಟಿದೆ? ಆರ್.ಎಸ್.ಎಸ್ ನ ಪದಾಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಹಿಂದುಳಿದ ಜಾತಿಯವರಿದ್ದಾರೆ?

"ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ಯಾಕೆ ಹಿಂದೂ ಧರ್ಮದ ಅನಿಷ್ಠಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಢ ನಂಬಿಕೆ, ಕಂದಾಚಾರಗಳ ಬಗ್ಗೆ ಮಾತನಾಡುತ್ತಿಲ್ಲ?" ಎಂದು ಮಾಜಿ ಮುಖ್ಯಮಂತ್ರಿಗಳು ಕೇಳಿದ್ದಾರೆ.

ಸಂವಿಧಾನಕ್ಕೋ ಮನುಸ್ಮೃತಿಗೋ ನಿಮ್ಮ ನಿಷ್ಠೆ?

"ಹಿಂದೂ ಧರ್ಮದೊಳಗಿನ ಅನಿಷ‍್ಠಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನನ್ನಂತಹವರು ಹಿಂದೂ ವಿರೋಧಿ ಆಗುವುದಾದರೆ? ಇದೇ ಕೆಲಸ ಮಾಡಿರುವ ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರುಗಳನ್ನು ಏನೆಂದು ಕರೆಯುತ್ತೀರಿ?

"ಆರ್.ಎಸ್.ಎಸ್ ನಾಯಕರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ? ಭಗವಾ ಧ್ವಜಕ್ಕೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ ? ಮನುಸ್ಮೃತಿಗೋ? ನಿಮ್ಮ ನಿಷ್ಠೆ ಗಾಂಧೀಜಿಗೋ? ಗೋಡ್ಸೆಗೋ?" ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರಿಗೆ ಸಿದ್ದರಾಮಯ್ಯ ಪ್ರಶ್ನೆ ಹಾಕಿದ್ದಾರೆ.

ರಾಜಕೀಯಕ್ಕೆ ಬಂದು ನೇರ ಎದುರಿಸಿ

ರಾಜಕೀಯಕ್ಕೆ ಬಂದು ನೇರ ಎದುರಿಸಿ

ಇದೇ ವೇಳೆ, ನೇರವಾಗಿ ರಾಜಕೀಯಕ್ಕೆ ಬರುವಂತೆ ಆರೆಸ್ಸೆಸ್‌ಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. "ಆರ್.ಎಸ್.ಎಸ್ ನಾಯಕರೇ, ಈ ರಿಮೋಟ್ ಕಂಟ್ರೋಲ್ ರಾಜಕೀಯ ಬಿಟ್ಟು ಬಿಡಿ. ನಿಮ್ಮ ತತ್ವ-ಸಿದ್ದಾಂತದ ಬಗ್ಗೆ ಅಷ್ಟೊಂದು ವಿಶ್ವಾಸ ನಿಮಗಿದ್ದರೆ ಈ ಹಿಂಬಾಗಿಲ ರಾಜಕೀಯ ಮಾಡದೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಡಿ, ಗೆಲುವು ಕೋಮುವಾದದ್ದೋ? ಜಾತ್ಯತೀತತೆಯದ್ದೋ? ನೋಡಿಯೇ ಬಿಡೋಣ" ಎಂದು ಚಾಲೆಂಜ್ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Siddaramaiah has taken his dig on RSS to another level and has put several questions and challenges to RSS in his series of 12 tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X