ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 2+1 ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್‌ ಪ್ರತಿಕ್ರಿಯೆ

By Manjunatha
|
Google Oneindia Kannada News

Recommended Video

ನರೇಂದ್ರ ಮೋದಿಯವರ 2+1 ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಸಿದ್ದು ಪ್ರತಿಕ್ರಿಯೆ | Oneindia Kannada

ನರೇಂದ್ರ ಮೋದಿ ಅವರು ಇಂದು ಚಾಮರಾಜನಗರದಲ್ಲಿ, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಹಾಗೂ ಅವರ ಮಗ ಯತೀಂದ್ರ ಅವರಿಗೆ ವರುಣಾದಿಂದ ಟಿಕೆಟ್ ಕೊಡಿಸಿರುವ ಕುರಿತು 2+1 ಸಂಸ್ಕೃತಿ ಎಂದು ಟೀಕಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯೆಯನ್ನೂ ನಿಡಿದ್ದಾರೆ.

ಮೋದಿ ಅವರ ಹೇಳಿಕೆಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, 'ನೀವು ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದನ್ನು ಮರೆತುಬಿಟ್ಟಿರಾ' (ವಾರಣಾಸಿ ಮತ್ತು ವಡೋದರಾ) ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್‌ ಜೊತೆ ಮೈತ್ರಿ ಇಲ್ಲ, ಉ.ಪ್ರದೇಶ ರೀತಿ ಬಿಜೆಪಿಗೆ ಅಧಿಕಾರ: ಬಿಎಸ್‌ವೈಜೆಡಿಎಸ್‌ ಜೊತೆ ಮೈತ್ರಿ ಇಲ್ಲ, ಉ.ಪ್ರದೇಶ ರೀತಿ ಬಿಜೆಪಿಗೆ ಅಧಿಕಾರ: ಬಿಎಸ್‌ವೈ

ಮುಂದುವರೆದು, 'ನೀವು 56 ಇಂಚಿನ ಎದೆಯವರಲ್ಲವೆ, ನಿಮ್ಮ ಬಳಿ ಯಾವುದಾದರೂ ಬಿದ್ಧಿವಂತ ವಿವರಣೆ ಇರುತ್ತದೆ ಬಿಡಿ' ಎಂದು ಕಾಲೆಳೆದಿರುವ ಸಿದ್ದರಾಮಯ್ಯ, ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ವಿಷಯ ಬಿಡಿ ನಿಮ್ಮ ಪಕ್ಷ 60-70 ಸೀಟುಗಳಿಗಿಂತಲೂ ಹೆಚ್ಚು ಗೆಲ್ಲಲಾರದು ಎಂಬ ಸತ್ಯವನ್ನು ಒಪ್ಪಿಕೊಳ್ಳಿ' ಎಂದು ಛಾಟಿ ಬೀಸಿದ್ದಾರೆ.

ಚಾಮರಾಜನಗರ ಸಮೀಪದ ಸಂತೆಮರನಹಳ್ಳಿಯಲ್ಲಿ ಮಾತನಾಡಿದ್ದ ಮೋದಿ ಅವರು, ಸಿದ್ದರಾಮಯ್ಯ ಅವರದ್ದು 2+1 ಮತ್ತು ಇತರ ಮಂತ್ರಿಗಳದ್ದು 1+1 ಸಂಸ್ಕೃತಿ ಎಂದು ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಅಲೆ ಅಲ್ಲ, ಬಿರುಗಾಳಿ ಎದ್ದಿದೆ: ಮೋದಿಕರ್ನಾಟಕದಲ್ಲಿ ಬಿಜೆಪಿ ಅಲೆ ಅಲ್ಲ, ಬಿರುಗಾಳಿ ಎದ್ದಿದೆ: ಮೋದಿ

English summary
CM Siddaramaiah replies to Narendra modi's 2+1 statement through twitter. He said Modi also contested in 2 constituency for MP elections. He also said BJP would not cross 60-70 seats in Karnataka assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X