ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆಯಲ್ಲಿ ಸಿಡಿದ 'ಸಿಡಿ': ದಿನೇಶ್ ಕಲ್ಲಹಳ್ಳಿ ದೂರು ಯಾಕೆ ದಾಖಲಾಗಲಿಲ್ಲ? ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ!

|
Google Oneindia Kannada News

ಬೆಂಗಳೂರು, ಮಾ. 22: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆಯಾದ ಬಳಿಕ ಬರೊಬ್ಬರಿ 21 ದಿನಗಳ ಬಳಿಕ ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಈ ಪ್ರಕರಣ ಪ್ರಸ್ತಾಪಿಸಿದೆ. ನಿಯಮ 69ರಡಿ ಸಿಡಿ ಬಿಡುಗಡೆ ಹಾಗೂ ಅದರ ನಂತರದ ಬೆಳವಣಿಗೆಗಳನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಿಚ್ಚಿಟ್ಟಿದ್ದಾರೆ.

ಮೊನ್ನೆಯೆ ನಿಲುವಳಿ ಸೂಚನೆ ಮೂಲಕ ಸಿಡಿ ಪರ್ಕರಣದ ಕುರಿತು ಚರ್ಚೆಗೆ ಅವಕಾಶ ಕೋರಿ ವಿಧಾನಸಭೆ ಕಾರ್ಯದರ್ಶಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೋಟಿಸ್ ಕಳುಹಿಸಿದ್ದರು. ನಿಯಮ 60ರಡಿ ಚರ್ಚೆಗೆ ಅವಕಾಶ ಕೇಳಿದ್ದರು. ಆದರೆ ಸ್ಪೀಕರ್ ವಿಶ್ವೇಶ್ವರ್

 ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ! ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ!

ಹೆಗಡೆ ಕಾಗೇರಿ ಅವರು ನಿಯಮ 69ರಡಿ ಚರ್ಚೆಗೆ ಅವಕಾಶ ಒದಗಿಸಿದ್ದು, ಭೋಜನ ವಿರಾಮದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಇಡೀ ಪ್ರಕರಣವನ್ನು ವಿಶ್ಲೇಷಣೆ ಮಾಡಿದ್ದಾರೆ.

 Siddaramaiah raises the issue of Ramesh Jarkiholi CD in the Karnataka assembly today

ರಾಜ್ಯದಲ್ಲಿ ಲೈಂಗಿಕ ಹಗರಣದ 'ಸಿಡಿ' ಬಿಡುಗಡೆಯಾಗಿದೆ. ಎಲ್ಲಾ ಟಿವಿ ಚಾನೆಲ್, ಯೂಟ್ಯೂಬ್‌ನಲ್ಲಿ ವಿಡಿಯೋ ಪ್ರಸಾರವಾಗಿದೆ. ಸೋಶಿಯಲ್ ಮಿಡಿಯಾದಲ್ಲಿಯೂ ವಿಡಿಯೋ ಪ್ರಸಾರವಾಗಿದೆ. ಆ ಹುಡುಗಿ ತನ್ನ ಮಾನ-ಮರ್ಯಾದೆ ಹರಾಜಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಸಚಿವರು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ, ನೌಕರಿ ಕೊಡುವುದಾಗಿ ನಂಬಿಸಿ ಬಳಸಿಕೊಂಡಿದ್ದಾರೆ. ನನ್ನ ಹಿಂದೆ ರಾಜಕೀಯ ನಾಯಕರಿಲ್ಲ. ನನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆಯಿಲ್ಲ, ಹೀಗಂತ ಆ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಆದರೂ ಯಾಕೆ ಎಫ್‌ಐಆರ್ ದಾಖಲಾಗಿರಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯೆ ಪ್ರವೇಶ ಮಾಡಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ಆ ಹೆಣ್ಣುಮಗಳು ಯಾರು? ಎಲ್ಲಿದ್ದಾಳೆ? ಸುಮ್ಮನೆ ಇಂತ ಆರೋಪ ಮಾಡುತ್ತಿದ್ದಾರಾ? ಸುದೀರ್ಘ ರಾಜಕೀಯ ಮಾಡಿರುವ ರಾಜಕಾರಣಿ ಅಂತವರ ಮೇಲೆ ದೂರು ಕೊಟ್ಟು ಸುಮ್ಮನಾದರೆ ಹೇಗೆ? ಅವರನ್ನು ಹುಡುಕುವ ಪ್ರಯತ್ನ ಮಾಡಬೇಕಲ್ಲವಾ? ಆ ಹೆಣ್ಣುಮಗಳು ಇದ್ದಾಳೋ? ಇಲ್ಲವೋ? ಅವರ ಕುಟುಂಬದಲ್ಲಿ ವಿರೋಧಿಗಳಿದ್ದಾರೊ ಇಲ್ಲವೋ? ಅಧಿಕಾರಕ್ಕಾಗಿ ಒಳಗಿನವರೇ ಮಾಡಿದ್ದಾರಾ? ಇಲ್ಲಾ ನಮ್ಮ ಪಕ್ಷದಲ್ಲಿದ್ದವರು ಮಾಡಿದ್ದಾರಾ ಹೇಗೆ? ನೀವು ಇದರ ಬಗ್ಗೆ ಯಾಕೆ ನೀವು ತನಿಖೆ ಮಾಡುತ್ತಿಲ್ಲ? ಆ ಹೆಣ್ಣುಮಗಳನ್ನು ಯಾಕೆ ಹುಡುಕುತ್ತಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಡಿ ಸ್ಫೋಟ ವೃತ್ತಾಂತ ಬಗ್ಗೆ ಲಿಖಿತ ಹೇಳಿಕೆ ಮೂಲಕ ಸತ್ಯ ಬಿಚ್ಚಿಟ್ಟ ಕಲ್ಲಹಳ್ಳಿ ಸಿಡಿ ಸ್ಫೋಟ ವೃತ್ತಾಂತ ಬಗ್ಗೆ ಲಿಖಿತ ಹೇಳಿಕೆ ಮೂಲಕ ಸತ್ಯ ಬಿಚ್ಚಿಟ್ಟ ಕಲ್ಲಹಳ್ಳಿ

Recommended Video

Virat Kohli ತನ್ನ ಮಗಳ ಜೊತೆ Airportನಲ್ಲಿ ಕಾಣಸಿಕ್ಕಿದ್ದು ಹೀಗೆ | Oneindia Kannada

ಕಳೆದ ಮಾರ್ಚ್ 2 ರಂದು ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎಂಬ ದೃಶ್ಯಗಳಿರುವ ಸಿಡಿ ಬಿಡುಗಡೆಯಾಗಿತ್ತು. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ 'ಸಿಡಿ'ಯೊಂದಿಗೆ ದೂರು ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ 'ಸಿಡಿ'ಯಲ್ಲಿನ ದೃಶ್ಯಾವಳಿಗಳೂ ಬಿಡುಗಡೆ ಆಗಿದ್ದವು. ಅದಾದ ಬಳಿಕ ಮಾರ್ಚ್ 3 ರಂದು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದರು. ನಂತರ ರಮೇಶ್ ಜಾರಕಿಹೊಳಿ ಅವರ ಮನವಿಯಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಮಾರ್ಚ್ 12ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಮರುದಿನ ಅಂದರೆ ಮಾರ್ಚ್‌ 13ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ್ದರು. ದೂರು ಆಧರಿಸಿ ಎಫ್‌ಐಆರ್ ಹಾಕಿದ್ದ ಬೆಂಗಳೂರಿನ ಸದಾಶಿವನಗರ ಪೊಲೀಸರು ನಂತರ ಪ್ರಕರಣವನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದರು.

English summary
Leader of opposition Siddaramaiah raises the issue of sleaze tapes involving Ramesh Jarkiholi and 6 minister approaching Court seeking gag orders against media in the Karnataka assembly today. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X