ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ, ಈಶ್ವರಪ್ಪ ಮೇಲೆ ಐಟಿ ದಾಳಿ ಯಾಕಿಲ್ಲ? ಸಿದ್ದರಾಮಯ್ಯ ಪ್ರಶ್ನೆ

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಹಾಗು ಕೆ ಎಸ್ ಈಶ್ವರಪ್ಪ ಮೇಲೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಮಾರ್ಚ್ 30: ಚುನಾವಣೆಯ ಸಂದರ್ಭದಲ್ಲಿಯೇ ರಾಜ್ಯದ ಜೆಡಿಎಸ್ ಮುಖಂಡರ ಸಂಬಂಧಿಕರಿಗೆ ಸೇರಿದ ಕಚೇರಿ, ಮನೆಗಳು ಮತ್ತು ಇಲಾಖೆಗಳ ಮೇಲೆ ನಡೆದ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಆಡಳಿತ ಪಕ್ಷದವರ ಕಣ್ಣು ಕೆಂಪಗಾಗಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೊಂಡಂತೆ ಎಲ್ಲ ನಾಯಕರೂ ಇದು ಕೇಂದ್ರ ಸರ್ಕಾರದ ಕುತಂತ್ರದಿಂದ ನಡೆದ ದಾಳಿ ಎಂದು ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಿದ್ದರಾಮಯ್ಯ ಅವರು ಸಭೆಗಳಲ್ಲಿ, ಮಾಧ್ಯಮಗಳ ಎದುರು ಐಟಿ ದಾಳಿಯನ್ನು ಖಂಡಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಐಟಿ ದಾಳಿಗಳ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳ ಮೇಲೆ ಅಸ್ತ್ರವನ್ನಾಗಿ ಬಳಕೆ ಮಾಡುವುದಕ್ಕೆ ನಮ್ಮ ವಿರೋಧವಿದೆ.

ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಬಿಜೆಪಿಯಿದೆ. ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ಆದಾಯ ತೆರಿಗೆ ದಾಳಿ: ಎಚ್‌ಡಿಕೆ ಹಳೆಯ ವಿಡಿಯೋ ಹಂಚಿಕೊಂಡ ಬಿಜೆಪಿ ಆದಾಯ ತೆರಿಗೆ ದಾಳಿ: ಎಚ್‌ಡಿಕೆ ಹಳೆಯ ವಿಡಿಯೋ ಹಂಚಿಕೊಂಡ ಬಿಜೆಪಿ

ಐಟಿ ದಾಳಿ ಡನೆದ ಸಂದರ್ಭದಲ್ಲಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ರಾಜ್ಯದ ಬಿಜೆಪಿ ನಾಯಕರ ಮನೆಗಳ ಮೇಲೆ ಏಕೆ ಐಟಿ ದಾಳಿ ನಡೆಯುವುದಿಲ್ಲ ಎಂದು ಪ್ರಶ್ನಿಸಿದ್ದರು. ಈಗ ಮತ್ತೆ ಸರಣಿ ಟ್ವೀಟ್‌ಗಳಲ್ಲಿ ವಾಗ್ದಾಳಿ ಮುಂದುವರಿಸಿದ್ದಾರೆ.

ಹಿಂದೆ ಹೀಗೆ ನಡೆದಿರಲಿಲ್ಲ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಐಟಿ ದಾಳಿಗಳಾಗಿಲ್ಲ. ಅಕ್ರಮ ಆಸ್ತಿ ಸಂಪಾದನೆ ಮಾಡಿದವರ ಮೇಲೆ, ಭ್ರಷ್ಟಾಚಾರಿಗಳ ಮೇಲೆ ಐಟಿ ದಾಳಿ ನಡೆಸಲಿ. ಅದನ್ನು ಬಿಟ್ಟು ಚುನಾವಣಾ ಸಮಯದಲ್ಲಿ ವಿರೋಧ ಪಕ್ಷಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದರುವುದು ಮಾತ್ರ ಖಂಡನೀಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯ ಪ್ರೇರಿತ ಐಟಿ ದಾಳಿ ಆರೋಪ: ದೋಸ್ತಿ ನಾಯಕರಿಂದ ಪ್ರತಿಭಟನೆ ರಾಜಕೀಯ ಪ್ರೇರಿತ ಐಟಿ ದಾಳಿ ಆರೋಪ: ದೋಸ್ತಿ ನಾಯಕರಿಂದ ಪ್ರತಿಭಟನೆ

ಯಡಿಯೂರಪ್ಪ, ಈಶ್ವರಪ್ಪ ಪ್ರಾಮಾಣಿಕರೇ?

ಶಾಸಕರ ಖರೀದಿಗೆ 25-30 ಕೋಟಿ ರೂ. ಹಣ ಕೊಡಲು ತಯಾರಿದ್ದ ಯಡಿಯೂರಪ್ಪ, ಮನೆಯಲ್ಲಿ ಹಣ ಎಣಿಸುವ ಯಂತ್ರ ಇಟ್ಟಿದ್ದ ಈಶ್ವರಪ್ಪ ಇವರೆಲ್ಲ ಪ್ರಾಮಾಣಿಕರೇ? ಇವರೆಲ್ಲರ ಮೇಲೆ ಯಾಕೆ ಐಟಿ ಇಲಾಖೆ ದಾಳಿ ಮಾಡುತ್ತಿಲ್ಲ? ಐಟಿ ಇಲಾಖೆ ಬಳಕೆಯಾಗುತ್ತಿರುವುದು ಭ್ರಷ್ಟರ ನಿಗ್ರಹಕ್ಕೋ ಅಥವಾ ಬಿಜೆಪಿಯವರ ರಾಜಕೀಯ ಎದುರಾಳಿಗಳ ನಿಗ್ರಹಕ್ಕೋ? ಎಂದು ಪ್ರಶ್ನಿಸಿದ್ದಾರೆ.

ಐಟಿ ದಾಳಿ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಎಚ್‌ಡಿಕೆ ಐಟಿ ದಾಳಿ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಎಚ್‌ಡಿಕೆ

ಶ್ರೀರಾಮುಲು ಕಣ್ಣಿಗೆ ಬೀಳೊಲ್ಲವೇ?

ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾದಾಮಿಯಲ್ಲಿ ನನ್ನ‌ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಿ.ಎಂ ಇಬ್ರಾಹಿಂ, ಚನ್ನಾರೆಡ್ಡಿ, ಆರ್.ಬಿ ತಿಮ್ಮಾಪುರ್ ಹಾಗೂ ಎಸ್.ಆರ್ ಪಾಟೀಲ್ ಅವರ ರೂಂಗಳ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಹಾಗಾದರೆ ಬಾದಾಮಿಯಲ್ಲಿ ಶ್ರೀರಾಮುಲು ಪರವಾಗಿ ಕೆಲಸ ಮಾಡುತ್ತಿದ್ದವರು ಐಟಿ ಇಲಾಖೆಯ ಕಣ್ಣಿಗೆ ಕಾಣಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಎರಡು ಪ್ರಶ್ನೆ ಇಟ್ಟ ಸುರೇಶ್ ಕುಮಾರ್

ಸಿದ್ದರಾಮಯ್ಯನವರಿಗೆ ಎರಡು ಪ್ರಶ್ನೆಗಳು; ಅ) ಚುನಾವಣಾ ಸಮಯದಲ್ಲಿ ಐಟಿ ಇಲಾಖೆ ಅಕ್ರಮ ಆಸ್ತಿ ಸಂಪಾದನೆಯ ಕುರಿತು ಮಾಹಿತಿ ಬಂದಾಗಲೂ ಕೈ ಕಟ್ಟಿ ಕುಳಿತುಕೊಳ್ಳಬೇಕೇ? ಆ) ಅಕ್ರಮ ಸಂಪಾದನೆಯನ್ನು ಚುನಾವಣಾ ಸಮಯದಲ್ಲಿ ವೆಚ್ಚ ಮಾಡುವುದರ ಕುರಿತು ನೀವು ನಡೆಸುತ್ತಿರುವ 'ಪ್ರಜಾತಂತ್ರ ಉಳಿಸಿ' ಹೋರಾಟದಲ್ಲಿ ನಿಲುವೇನು? ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

English summary
Former Cheif Minister Siddaramaiah slams Central government for IT raid and questioned why no it raid on BJP leaders like BS Yedyurappa and Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X