• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮನಗರ ರಾಜಕೀಯದಲ್ಲಿ ದಾಳ ಉರುಳಿಸಿದ ಸಿದ್ದರಾಮಯ್ಯ!

|

ರಾಮನಗರ, ಅಕ್ಟೋಬರ್ 09 : ಕರ್ನಾಟಕ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಮಾಜಿ ಸಚಿವ ಸಿ. ಪಿ. ಯೋಗೇಶ್ವರ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಆಪರೇಷನ್ ಕಮಲದ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಿದವರು ಸಿ. ಪಿ. ಯೋಗೇಶ್ವರ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಯೋಗೇಶ್ವರಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ : ಸಿ. ಪಿ. ಯೋಗೇಶ್ವರ

ಈ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿ. ಪಿ. ಯೋಗೇಶ್ವರಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಉಭಯ ನಾಯಕರ ಮಾತುಕತೆ ಕುತೂಹಲ ಮೂಡಿಸಿದೆ.

ಅನಿಲ್ ಚಿಕ್ಕಮಾದುಗೆ 100 ಕೋಟಿಯ ಡೀಲ್ ಕೊಟ್ಟರೆ ಸಿಪಿ ಯೋಗೀಶ್ವರ್?

ಡಿ. ಕೆ. ಶಿವಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿ. ಕೆ. ಸುರೇಶ್ ಸಹೋದರನನ್ನು ಬಿಡಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಸಿದ್ದರಾಮಯ್ಯ ರಾಮನಗರ ಜಿಲ್ಲೆಯಲ್ಲಿ ರಾಜಕೀಯ ದಾಳ ಉರುಳಿಸಲು ಹೊರಟಿದ್ದಾರೆ.

ಹೈಕಮಾಂಡ್ ಒಪ್ಪಿದರೆ ಯೋಗೇಶ್ವರ್ ಅವರಿಗೆ ಸ್ವಾಗತ ಕೋರುತ್ತೇವೆ, ಕಾಂಗ್ರೆಸ್ ಮುಖಂಡರು

ಸಿ. ಪಿ. ಯೋಗೇಶ್ವರ ಸಚಿವರಾಗಲಿಲ್ಲ

ಸಿ. ಪಿ. ಯೋಗೇಶ್ವರ ಸಚಿವರಾಗಲಿಲ್ಲ

ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿ. ಪಿ. ಯೋಗೇಶ್ವರ ಸಚಿವರಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅವರು ಸಂಪುಟ ಸೇರಲಿಲ್ಲ. ಪಕ್ಷದಲ್ಲಿ ಬೇರೆ ಯಾವುದೇ ಹುದ್ದೆಯೂ ಅವರಿಗೆ ಸಿಕ್ಕಿಲ್ಲ. ಸಹಜವಾಗಿ ಇದರಿಂದಾಗಿ ಅವರು ಅಸಮಾಧಾನಗೊಂಡಿದ್ದು, ಆಪ್ತರ ಬಳಿ ಈ ಕುರಿತು ಮಾತನಾಡಿದ್ದಾರೆ.

ವರ್ಚಸ್ಸು ಹೊಂದಿದ ನಾಯಕರು

ವರ್ಚಸ್ಸು ಹೊಂದಿದ ನಾಯಕರು

ರಾಮನಗರ ಜಿಲ್ಲೆಯಲ್ಲಿ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಪ್ರಭಾವವನ್ನು ಮೆಟ್ಟಿನಿಂತು ವರ್ಚಸ್ಸುಗಳಿಸಿರುವ ನಾಯಕ ಸಿ. ಪಿ. ಯೋಗೇಶ್ವರ. ಕಾಂಗ್ರೆಸ್, ಸಮಾಜವಾದಿ ಪಕ್ಷದಲ್ಲಿದ್ದ ಅವರು ಪ್ರಸ್ತುತ ಬಿಜೆಪಿಯಲ್ಲಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿದರೂ ಗೆಲ್ಲುವ ಮಟ್ಟಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಜನ ಬೆಂಬಲ ಪಡೆದಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ ಎದುರಾಳಿ

ಎಚ್. ಡಿ. ಕುಮಾರಸ್ವಾಮಿ ಎದುರಾಳಿ

2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್ ಸೇರಿಕೊಂಡು ಸಿ. ಪಿ. ಯೋಗೇಶ್ವರರನ್ನು ಸೋಲಿಸಿದರು. 66,465 ಮತಗಳನ್ನು ಪಡೆದು ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ ಸೋಲು ಕಂಡಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪುನಃ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಂದಿದ್ದಾರೆ.

ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ

ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ

ಒಕ್ಕಲಿಗ ಸಮುದಾಯದ ಸಿ. ಪಿ. ಯೋಗೇಶ್ವರನ್ನು ಬೆಳೆಸಿ ಬಿಜೆಪಿ ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಲು ಸಿದ್ದರಾಮಯ್ಯ ತಂತ್ರ ರೂಪಿಸುತ್ತಿದ್ದಾರೆ. ಆದರೆ, ಡಿ. ಕೆ. ಶಿವಕುಮಾರ್ ಜೈಲಿನಲ್ಲಿರುವಾಗ ಅವರ ತವರು ಕ್ಷೇತ್ರದ ರಾಜಕೀಯಕ್ಕೆ ಸಿದ್ದರಾಯ್ಯ ಕೈ ಹಾಕಿದ್ದು ಏಕೆ? ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Chief Minister Siddaramaiah phone call to Channapatna former MLA and BJP leader C.P.Yogeshwar. C.P.Yogeshwar lost 2018 assembly elections against H.D.Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more