ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ ರಿಯಾಲಿಟಿ ಚೆಕ್ ಮಾಡಿದ ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ಏ. 07: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಜನರು ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವಂತಾಗಿದೆ. ಹೀಗಾಗಿಯೇ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್‌ ಮೂಲಕ ಉಚಿತ ಆಹಾರ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.

ಆದರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ಕೊಡುವುದರಿಂದ ದುರುಪಯೋವಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಜಾಯಿಸಿ ಕೊಟ್ಟಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮಜಾಯಿಷಿಗೆ ತೃಪ್ತರಾಗದ ಸಿದ್ದರಾಮಯ್ಯ ಅವರು ರಿಯಾಲಿಟಿ ಚೆಕ್ ಮಾಡಿದ್ದಾರೆ. ಹಾಗಾದರೆ ವಿಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿದ್ದಾದರೂ ಏನು? ಮುಂದೆ ಓದಿ.

ಇಂದಿರಾ ಕ್ಯಾಂಟೀನ್‌ ಬಗ್ಗೆ ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್‌ ಬಗ್ಗೆ ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ

ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಜಾರಿಗೆ ತಂದಿದ್ದನ್ನು ಸ್ವಾಗತಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಲಾಕ್‌ಡೌನ್ ಜಾರಿಯಾದ ಮರುದಿನ ಇಂದಿರಾ ಕ್ಯಾಂಟೀನುಗಳಲ್ಲಿ ಉಚಿತ ಆಹಾರ ಸರಬರಾಜು ಮಾಡಿದ್ದ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ತನ್ನ ನಿರ್ಧಾರ ಬದಲಿಸಿತ್ತು. ಸೌಲಭ್ಯ ದುರುಪಯೋವಗಾಗುತ್ತಿದೆ ಎಂಬ ಕಾರಣ ಕೊಟ್ಟು ದರ ನಿಗದಿ ಮಾಡಿತ್ತು. ಇದರಿಂದ ಮೊದಲೇ ಲಾಕ್‌ಡೌನ್ ನಿಂದ ಸಂಕಷ್ಟದಲ್ಲಿರುವ ಜನರಿಗೆ ತೊಂದರೆ ಆಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಉಚಿತ ಊಟ, ಉಪಹಾರ ಕೊಡುವಂತೆ ಆಗ್ರಹಿಸಿದ್ದರು.

ಸಿದ್ದರಾಮಯ್ಯರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ

ಸಿದ್ದರಾಮಯ್ಯರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷ ನಾಯಕದ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದಿರಾ ಕ್ಯಾಂಟೀನುಗಳಲ್ಲಿ ಆಹಾರ ದುರುಪಯೋಗವಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಹೀಗಾಗಿ ಉಚಿತ ಊಟ, ಉಪಹಾರವನ್ನು ನಿಲ್ಲಿಸಿದ್ದೇವೆ ಎಂದಿದ್ದರು. ದುರುಪಯೋಗಕ್ಕೆ ಕಾರಣರಾಗಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಉಚಿತ ಊಟ, ತಿಂಡಿ ಸರಬರಾಜು ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದರು. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿದ್ದರಾಮಯ್ಯರಿಗೆ ಭರವಸೆ ಕೊಟ್ಟಿದ್ದರು.

ಇಂದು ಸಿದ್ದರಾಮಯ್ಯ ಅವರಿಂದ ರಿಯಾಲಿಟಿ ಚೆಕ್!

ಇಂದು ಸಿದ್ದರಾಮಯ್ಯ ಅವರಿಂದ ರಿಯಾಲಿಟಿ ಚೆಕ್!

ಸಿಎಂ ಯಡಿಯೂರಪ್ಪ ಅವರ ಸಮಜಾಯಿಷಿಯಿಂದ ತೃಪ್ತರಾಗದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ದಿಢೀರ್ ಭೇಟಿ ಕೊಟ್ಟು ರಿಯಾಲಿಟಿ ಚೆಕ್ ಮಾಡಿದ್ದಾರೆ. ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಅವರು ಮಾತುಕತೆ ನಡೆಸಿದರು. ಉಚಿತವಾಗಿ ಊಟ, ಉಪಹಾರ ನೀಡುತ್ತಿದ್ದ ಸಂದರ್ಭದಲ್ಲಿ ಕ್ಯಾಂಟೀನ್ ಗಳಲ್ಲಿ ದಿನಕ್ಕೆ 900ಕ್ಕೂ ಅಧಿಕ ಮಂದಿ ಊಟ, ತಿಂಡಿ ಮಾಡುತ್ತಿದ್ದರು. ಅಷ್ಟು ಸಂಖ್ಯೆಯ ಪೊಟ್ಟಣಗಳು ವಿತರಣೆ ಆಗುತ್ತಿತ್ತು. ಈಗ ಅವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 100 ರಿಂದ 150 ಮಂದಿ ಮಾತ್ರ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಉಚಿತವಾಗಿ ಊಟ, ತಿಂಡಿ ಪೂರೈಕೆ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಉಚಿತವಾಗಿ ಊಟ, ತಿಂಡಿ ನೀಡುವ ಕುರಿತು ಪರಿಶೀಲಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮತ್ತೆ ಒತ್ತಾಯಿಸಿದ್ದಾರೆ.

ವಸಂತನಗರ, ಹೆಬ್ಬಾಳ ಹಾಗೂ ಆರ್.ಟಿ. ನಗರ ಬಡಾವಣೆಯ ಇಂದಿರಾ ಕ್ಯಾಂಟೀನ್ ಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದರು.

ಜನರ ಹತ್ತಿರ ಊಟ ಮಾಡಲು ದುಡ್ಡಿಲ್ಲ, ಫ್ರೀ ಊಟ ಕೊಡಿ

ಜನರ ಹತ್ತಿರ ಊಟ ಮಾಡಲು ದುಡ್ಡಿಲ್ಲ, ಫ್ರೀ ಊಟ ಕೊಡಿ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರಿಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ತೆಗೆದುಕೊಳ್ಳಲು ಹಣವಿಲ್ಲ. ಹೀಗಾಗಿ ಜನರಿಗೆ ಊಟ ಮಾಡಲು ಆಗುತ್ತಿಲ್ಲ. ಲಾಕ್‌ಡೌನ್ ಕೊನೆಯಾಗುವವರೆಗೆ ಒಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ, ತಿಂಡಿ ಕೊಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಸಂಕಷ್ಟದ ಸಂದರ್ಭದಲ್ಲಿ ಸ್ವಲ್ಪ ದುರುಪಯೋಗದ ನೆಪ ಇಟ್ಟುಕೊಂಡು ಇಂದಿರಾ ಕ್ಯಾಂಟೀನ್‌ಗಳಲ್ಲಿ ದರ ನಿಗದಿ ಮಾಡಬಾರದು. ಹರಿಸದವರಿಗೆ ಮೊದಲು ಊಟ ಕೊಡಲಿ ಎಂದು ಆವರು ಆಗ್ರಹಿಸಿದ್ದಾರೆ.


ಬರಿ ಲಾಕ್‌ಡೌನ್ ಜಾರಿ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ತಕ್ಷಣವೇ ಬಡವರಿ ಉಚಿತವಾಗಿ ಊಟ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಸಾರ್ವಜನಿಕರೂ ಆಗ್ರಹಿಸಿದ್ದಾರೆ. ಭ್ರಷ್ಟಾಚಾರವಿಲ್ಲದೆ ಯಾವುದೇ ಯೋಜನೆ ಜಾರಿಯಾಗುವುದಿಲ್ಲ ಎಂಬುದು ಎಲ್ಲಿರುಗೂ ತಿಳಿದಿರುವ ವಿಚಾರವೇ. ಹೀಗಾಗಿ ಈ ಕಠಿಣ ಸಂದರ್ಭದಲ್ಲಿ ಮೊದಲು ಊಟಕೊಟ್ಟು ಬಡವರನ್ನು ಬದುಕಿಸಲಿ ಎಂಬುದು ಜನರ ಆಗ್ರಹವೂ ಆಗಿದೆ.

English summary
Siddaramaiah himself had made a reality check on the CM's statement that corruption is taking place in Indira canteens. Siddaramaiah once again asked CM Yeddyurappa to provide free meals and snacks at Indira canteens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X