ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಕನಸು ಬಿದಿದ್ದು ಯಾವಾಗ?; ರೇಣುಕಾಚಾರ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 26 : " ಯಡಿಯೂರಪ್ಪ ಬದಲಾವಣೆ ಕನಸು ಸಿದ್ದರಾಮಯ್ಯಗೆ ಬಿದ್ದಿದ್ದು ಯಾವಾಗ?" ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು ಕೊಟ್ಟಿದ್ದಾರೆ.

ಸಂಪುಟ ವಿಸ್ತರಣೆ: ಯಡಿಯೂರಪ್ಪ ಎದುರು ಹೈಕಮಾಂಡ್ ಇಟ್ಟ 3 ಷರತ್ತುಗಳು!ಸಂಪುಟ ವಿಸ್ತರಣೆ: ಯಡಿಯೂರಪ್ಪ ಎದುರು ಹೈಕಮಾಂಡ್ ಇಟ್ಟ 3 ಷರತ್ತುಗಳು!

"ಯಡಿಯೂರಪ್ಪ ಬದಲಾವಣೆ ಕನಸು ಯಾವಾಗ ಬಿತ್ತು?. ಹಗಲುಗನಸೋ, ಇರುಳಗನಸೋ? ಹೇಳಲಿ" ಎಂದು ಎಂ. ಪಿ. ರೇಣುಕಾಚಾರ್ಯ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬಿಜೆಪಿ ಸರ್ಕಾರ ರಚನೆ; ರೇಣುಕಾಚಾರ್ಯ, ಎಂಟಿಬಿ ವಾಕ್ಸಮರ! ಬಿಜೆಪಿ ಸರ್ಕಾರ ರಚನೆ; ರೇಣುಕಾಚಾರ್ಯ, ಎಂಟಿಬಿ ವಾಕ್ಸಮರ!

"ಯಡಿಯೂರಪ್ಪ ಬಹಳ ದಿನ ಮುಖ್ಯಮಂತ್ರಿಗಳಾಗಿ ಇರುವುದಿಲ್ಲ. ದೆಹಲಿಯಿಂದ ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರವೇ ಹೇಳುತ್ತಿದ್ದೇನೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಲವು ಬಾರಿ ಹೇಳಿಕೆ ನೀಡಿದ್ದಾರೆ.

ಸಿಎಂ ಬದಲಾವಣೆಯ ಸುದ್ದಿಯ ನಡುವೆ ಮೌಢ್ಯ ಮೆಟ್ಟಿನಿಂತ ಸಿಎಂ ಯಡಿಯೂರಪ್ಪ ಸಿಎಂ ಬದಲಾವಣೆಯ ಸುದ್ದಿಯ ನಡುವೆ ಮೌಢ್ಯ ಮೆಟ್ಟಿನಿಂತ ಸಿಎಂ ಯಡಿಯೂರಪ್ಪ

ಸಿದ್ದರಾಮಯ್ಯ ಹೇಳಿದ್ದೇನು?

ಸಿದ್ದರಾಮಯ್ಯ ಹೇಳಿದ್ದೇನು?

"ನನಗೆ ಇರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ. 2 ವರ್ಷ ಅವರೇ ಉಳಿದುಕೊಳ್ಳುತ್ತೇನೆ ಅನ್ನೋದಾದರೆ ಉಳಿದುಕೊಳ್ಳಲಿ ನಮಗೇನು? ಏನೂ ಕೆಲಸ ಮಾಡದಿರುವ ಮುಖ್ಯಮಂತ್ರಿ ಅಲ್ವಾ?" ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಕನಸು ಯಾವಾಗ ಬಿತ್ತು?

ಕನಸು ಯಾವಾಗ ಬಿತ್ತು?

ಎಂ. ಪಿ. ರೇಣುಕಾಚಾರ್ಯ, "ಇವರಿಗೆ ಯಡಿಯೂರಪ್ಪ ಬದಲಾವಣೆ ಕನಸು ಯಾವಾಗ ಬಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಲ್ಲೇ ಒಳ ಜಗಳವಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಅವರ ತಟ್ಟೆಯಲ್ಲಿ ಏನಿದೆ? ಅದನ್ನು ನೋಡಿಕೊಳ್ಳಲಿ" ಎಂದು ಹೇಳಿದ್ದದಾರೆ.

ಮಂತ್ರಿ ಮಂಡಲ ಕೆಡಿವಿಕೊಳ್ಳುತ್ತಾರೋ

ಮಂತ್ರಿ ಮಂಡಲ ಕೆಡಿವಿಕೊಳ್ಳುತ್ತಾರೋ

"ರಮೇಶ್ ಜಾರಕಿಹೊಳಿ ಮನೆಯಲ್ಲಿ ಒಂದು ಕಡೆ, ರೇಣುಕಾಚಾರ್ಯ ಮನೆಯಲ್ಲಿ ಒಂದು ಕಡೆ ಮೀಟಿಂಗ್ ಮಾಡುತ್ತಾರಲ್ಲ ಅದನ್ನು ಬಹಳ ಗಟ್ಟಿ ಮಡಿಕೆ ಅನ್ನುವುದೇ?. ಸಿಎಂ ಮಂತ್ರಿ ಮಂಡಲ ಮಾಡುತ್ತಾರೋ, ಮಂತ್ರಿ ಮಂಡಲ ಕೆಡವಿಕೊಳ್ಳುತ್ತಾರೋ ಗೊತ್ತಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬ್ಲಾಕ್ ಮೇಲ್ ಮಾಡಲ್ಲ

ಬ್ಲಾಕ್ ಮೇಲ್ ಮಾಡಲ್ಲ

"ಸಚಿವ ಸ್ಥಾನಕ್ಕಾಗಿ ಬ್ಲಾಕ್ ಮೇಲ್ ಮಾಡಲ್ಲ, ಗುಂಪುಗಾರಿಕೆ ಮಾಡಲ್ಲ. ನಾನು ನೇರ, ಸಾದ ಸೀದಾ ವ್ಯಕ್ತಿ. ನಾನು ತಪ್ಪು ಮಾಡಿದ್ದರೆ ಆತ್ಮಾವಲೋಕನ ಮಾಡಿಕೊಳ್ಳುವವನು" ಎಂದು ರೇಣುಕಾಚಾರ್ಯ ಹೇಳಿದ್ದಾರೆ.

English summary
Opposition leader Siddaramaiah and Honnali MLA M. P. Renukacharya verbal war on the issue of leadership change in Karnataka BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X