ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಗೆ ತಂದೊಡ್ಡಿರುವ ರಾಜಕೀಯ ಅಸ್ಥಿರತೆ ಭೀತಿ

|
Google Oneindia Kannada News

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಸಾಧನೆಯ ಹಾದಿಯಲ್ಲಿ ನಡೆದು ಬಂದು ಆಡಳಿತ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ರಾಜಕೀಯದಲ್ಲಿ ಕ್ರಮೇಣ ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆಯೇ ?

ನಿಧಾನವಾಗಿ ಅವರ ಆಧಾರ ಸ್ತಂಭಗಳು ಕುಸಿಯುತ್ತಿವೆಯೇ? ಬದಲಾದ ಸನ್ನಿವೇಶಗಳು ಮುಂಬರುವ ದಿನಗಳಲ್ಲಿ ಅವರನ್ನು ಕ್ರಮೇಣ ಅವರು ಮೂಲೆಗುಂಪಾಗಿಸುವ ಪ್ರಕ್ರಿಯೆಗೆ ನಾಂದಿ ಹಾಡಿವೆಯೇ? ಎಂಬಿತ್ಯಾದಿ ಪ್ರಶ್ನೆಗಳು ಈಗ ರಾಜ್ಯ ರಾಜಕೀಯ ಅಂಗಳದಲ್ಲಿ ಮಾರ್ದನಿಸುತ್ತಿದೆ.
ಅಧಿಕಾರ ಗದ್ದುಗೆಯೇರಿದಾಗಿನಿಂದ ಸಿದ್ದರಾಮಯ್ಯ ಅವರ ಸರ್ಕಾರ, ಅವರ ಸಂಪುಟದಲ್ಲಿನ ಸಚಿವರು, ಅಧಿಕಾರಿಗಳು, ಆಪ್ತರು ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿ ಅವರಿಗೆ ಮುಜುಗರ ತಂದೊಡ್ಡಿದ್ದು ಎಲ್ಲರಿಗೂ ಗೊತ್ತಿದೆ.

ಅವೆಲ್ಲವನ್ನೂ ಹೇಗೋ ಸಂಭಾಳಿಸಿಕೊಂಡು ಸಿದ್ದರಾಮಯ್ಯ. ಬ್ಲೊ ವಾಚ್ ಪ್ರಕರಣ, ಡಿಕೆ ರವಿ ಸಾವು, ಪೊಲೀಸ್ ಅಧಿಕಾರಿಗಳ ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ಕಾರ್ಯವೈಖರಿಯನ್ನು ಜನರು ಅನುಮಾನಾಸ್ಪದವಾಗಿ ನೋಡುವಂತೆ ಮಾಡಿದ್ದವು.

ಕಾಲ ಕಳೆದಂತೆ ಆ ಸಂದಿಗ್ಧ ಪರಿಸ್ಥಿತಿಗಳಿಂದ ಹೊರಬಂದರಾದರೂ, ತಿಳಿದೋ ತಿಳಿಯದೋ, ತಮ್ಮ ಪಕ್ಷದಲ್ಲಿ ತಮ್ಮ ಬೆಂಬಲಿಗರಾಗಿದ್ದ, ಆಪ್ತರಾಗಿದ್ದ, ಪ್ರಭಾವಿ ನಾಯಕರಾದ ಶ್ರೀನಿವಾಸ್ ಪ್ರಸಾದ್, ಅಂಬರೀಷ್ ಅವರಂಥವರನ್ನು ದೂರ ಮಾಡಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ತೀವ್ರವಾದ ರಾಜಕೀಯ ಹಿನ್ನಡೆ ತರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಲದೆಂಬಂತೆ ಗುಂಡ್ಲುಪೇಟೆ ಶಾಸಕ ಹಾಗೂ ಸಹಕಾರ ಸಚಿವರಾಗಿ ಮಹದೇವ ಪ್ರಸಾದ್ ಇತ್ತೀಚೆಗೆ ನಿಧನರಾಗಿರುವುದು ಸಿದ್ದರಾಮಯ್ಯನವರ ಬತ್ತಳಿಕೆಯ ಪ್ರಮುಖ ಅಸ್ತ್ರವೊಂದು ಅದೃಶ್ಯವಾದಂತಾಗಿದೆ.

ಕಳೆದ ವರ್ಷ ತಮ್ಮ ರಾಜಕೀಯ ಭವಿಷ್ಯಕ್ಕೆ ಅಪಾರವಾಗಿ ನೆರವಾಗಬಹುದಾಗಿದ್ದ ಅವರ ಪತ್ರ ರಾಕೇಶ್ ಅವರ ಅಗಲಿಕೆಯೂ ಅವರ ರಾಜಕೀಯ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೆ ಅಚ್ಚರಿಪಡಬೇಕಿಲ್ಲ.

ಮೈಸೂರು ಪ್ರಾಂತ್ಯದಲ್ಲಿ ವಿರೋಧದ ಬೇರು

ಮೈಸೂರು ಪ್ರಾಂತ್ಯದಲ್ಲಿ ವಿರೋಧದ ಬೇರು

ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ನಂಜನಗೂಡು ಹಾಗೂ ಸುತ್ತಿನ ಪ್ರಾಂತ್ಯಗಳಲ್ಲಿ ಪರಿಶಿಷ್ಠ ಸಮುದಾಯದ ಮತಗಳು ಕೈ ತಪ್ಪುವ ಭೀತಿಯಿದೆ. ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ಮಾರಕವಾಗಬಹುದು. ಇದೀಗ, ಅವರಿಂದ ತೆರವಾಗಿರುವ ನಂಜನಗೂಡು ಶಾಸಕ ಸ್ಥಾನಕ್ಕೆ ನಡೆಯುವ ಮರುಚುನಾವಣೆಯೇ ಇರಲಿ ಅಥವಾ ಮುಂಬರುವ ವಿಧಾನಸಭೆ ಚುನಾವಣೆಯೇ ಆಗಲಿ ಅದನ್ನು ಈ ಕ್ಷೇತ್ರದಲ್ಲಿ ಪ್ರಸಾದ್ ಅವರನ್ನು ಎದುರಿಸಿ ಗೆಲ್ಲುವ ಛಾತಿ ಸಿದ್ದರಾಮಯ್ಯನವರಿಗಿಲ್ಲ ಎಂಬುದು ಅವರ ವಿರೋಧಿಗಳ ಕುಹಕ.
ಅಷ್ಟೇ ಅಲ್ಲ, ಬಿಜೆಪಿ ಸೇರಿರುವ ಪ್ರಸಾದ್, ಸಿದ್ದರಾಮಯ್ಯನವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ. ಅವರಿಗೆ ಕಾಂಗ್ರೆಸ್ ನಲ್ಲೇ ಇರುವ ಭಿನ್ನಮತೀಯರ ಪರೋಕ್ಷ ಬೆಂಬಲ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

ಚುನಾವಣೆಯಲ್ಲಿ ಕಷ್ಟ

ಚುನಾವಣೆಯಲ್ಲಿ ಕಷ್ಟ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಗೆಲವಿಗೆ ಹಾಗೂ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಹಿಡಿತಕ್ಕೆ ಅಪಾರವಾಗಿ ಶ್ರಮಿಸಬಹುದಾಗಿದ್ದ ಮಹದೇವ ಪ್ರಸಾದ್ ನಿಧನರಾಗಿರುವುದು ಮತ್ತೊಂದು ಹಿನ್ನಡೆ ತರಬಹುದು.

ಕಾಂಗ್ರೆಸ್ ಪ್ರಭಾವಕ್ಕೆ ಕೊಂಕು

ಕಾಂಗ್ರೆಸ್ ಪ್ರಭಾವಕ್ಕೆ ಕೊಂಕು

ಹುಬ್ಬಳ್ಳಿಗೆ ಧಾರವಾಡ ಹೇಗೆ ಜೋಡಿ ಪದವೋ, ಮೈಸೂರಿಗೆ ಮಂಡ್ಯವೂ ಜೋಡಿ ಪದ. ಅಲ್ಲಿನ ಪ್ರಭಾವಿ ನಾಯಕ ಅಂಬರೀಷ್ ಅವರನ್ನು ಕಳೆದುಕೊಂಡಿರುವುದು ಆ ಪ್ರಾಂತ್ಯದ ಗೌಡ ಸಮುದಾಯದ ವಿರೋಧ ಕಟ್ಟಿಕೊಂಡಂತಾಗಿದೆ.

ಕಾಂಗ್ರೆಸ್ ಗೆ ದುರ್ಲಭ?

ಕಾಂಗ್ರೆಸ್ ಗೆ ದುರ್ಲಭ?

ಶ್ರೀನಿವಾಸ್ ಪ್ರಸಾದ್ ನಿರ್ಗಮನ, ಮಹದೇವ್ ಪ್ರಸಾದ್ ನಿಧನ ವಿಚಾರಗಳು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಗೆ ಲಾಭವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಆರಂಭದಿಂದಲೂ ತರಲೆ

ಆರಂಭದಿಂದಲೂ ತರಲೆ

ಸರ್ಕಾರ ರಚಿಸಿದಾಗಿನಿಂದ ಒಂದಿಲ್ಲೊಂದು ಸಿಎಂಗೆ ಒಂದಿಲ್ಲೊಂದು ರಗಳೆ. ಡಿಕೆ ರವಿ ಸಾವು ಪ್ರಕರಣದಲ್ಲಿ ಗೃಹಸಚಿವ ಕೆ.ಜೆ. ಜಾರ್ಜ್ ರಾಜಿನಾಮೆ ಕೊಡಬೇಕಾಗಿ ಬಂದಿದ್ದು ಇದರಲ್ಲೊಂದು.

ಲಂಚ ಪ್ರಕರಣದ ಕಾವು

ಲಂಚ ಪ್ರಕರಣದ ಕಾವು

ತಮ್ಮ ವಿವಾದತ್ಮಕ ಹೇಳಿಕೆಗಳಿಂದ ಸಿಎಂಗೆ ಸರ್ಕಾರಕ್ಕೆ ಆಗಾಗ ತಲೆನೋವು ತರುತ್ತಿದ್ದ ಸಚಿವ ಆಂಜನೇಯ ಪತ್ನಿ ವಿಜಯಾ ಅವರು ಲಂಚ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡಿದ್ದು.

ಹೈಕಮಾಂಡ್ ಗೂ ರವಾನೆ

ಹೈಕಮಾಂಡ್ ಗೂ ರವಾನೆ

ಟಿಪ್ಪು ಜಯಂತಿ ಸಮಾರಂಭದಲ್ಲಿ ಆಗಿನ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರವೊಂದನ್ನು ನೋಡುತ್ತಿದ್ದುದು ವಿವಾದಕ್ಕೆ ಕಾರಣವಾಗಿದ್ದು. ಈ ಪ್ರಕರಣ ಹೈಕಮಾಂಡ್ ಅನ್ನೂ ಕೆರಳಿಸಿತ್ತು.

ಖುದ್ದು ಮುಖಭಂಗ

ಖುದ್ದು ಮುಖಭಂಗ

ತಮ್ಮ ಸಂಪುಟ ಸಚಿವರಷ್ಟೇ ಅಲ್ಲ, ಖುದ್ದು ಸಿದ್ದರಾಮಯ್ಯ ಕೂಡ ವಿವಾದಕ್ಕೆ ಸಿಲುಕಿದ್ದರು. ದುಬಾರಿ ಊಬ್ಲೆ ವಾಚ್ ನಿಂದ ವಿವಾದಕ್ಕೀಡಾಗಿದ್ದು ಅವರ ಅಹಿಂದ ಟ್ಯಾಗ್ ಗೆ ಅಲ್ಪಮಟ್ಟಿಗೆ ಚ್ಯುತಿ ತಂದಿದ್ದು ಸುಳ್ಳೇನಲ್ಲ.

ವಿರೋಧಿಗಳಿಗೆ ಲಾಭದ ನಗೆ

ವಿರೋಧಿಗಳಿಗೆ ಲಾಭದ ನಗೆ

ಕಾಂಗ್ರೆಸ್ ಪಕ್ಷದಲ್ಲೇ ಭುಗಿಲೆದ್ದಿರುವ ಅಸಮಾಧಾನದ ಹೊಗೆ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆ ತರಲಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಕೆಲವು ನಾಯಕರ ನಡೆ ಸಿದ್ದು ಅವರಿಗೆ ಮುಂದಿನ ಚುನಾವಣೆಯಲ್ಲಿ

ಶೋಕಸಾಗರದಲ್ಲಿ ತೇಲಿದ ಸಿಎಂ

ಶೋಕಸಾಗರದಲ್ಲಿ ತೇಲಿದ ಸಿಎಂ

ಸಿದ್ದರಾಮಯ್ಯನವರ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ಅವರ ಪುತ್ರ ರಾಕೇಶ್ ಕಳೆದ ವರ್ಷ ನಿಧನರಾಗಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಮತ್ತೊಂದು ಹೊಡೆತ.

English summary
Demise of loyalist and cooperative and sugar minister Mahadeva Prasad, rebel politians namely Srinivas Prasad and Ambrish may tarnish the political milege of CM Siddaramaiah and eventually contribute to loose his control over Mysore constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X