ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ-ಮಾಧುಸ್ವಾಮಿ: ರಾಮ-ರಾವಣ ವೇಷ ಅದಲು-ಬದಲು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಸಿದ್ದರಾಮಯ್ಯ ಅವರು ಅತ್ಯುತ್ತಮ ಸಂಸದೀಯ ಪಟು ಬಿಜೆಪಿಯಲ್ಲಿ ಮಾಧುಸ್ವಾಮಿ ಅವರೂ ಸಹ ಕಲಾಪದಲ್ಲಿ ಸಿದ್ದರಾಮಯ್ಯ ಅವರನ್ನೇ ಹೋಲುತ್ತಾರೆ.

ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆದ ನಂತರ ನಡೆದಿರುವ ಕಲಾಪದಲ್ಲಿ ಸಿದ್ದರಾಮಯ್ಯ-ಮಾಧುಸ್ವಾಮಿ ಜುಗಲ್‌ಬಂದಿ ನಡೆಯುತ್ತಿದೆ. ಕಲಾಪದ ಮೂರನೇ ದಿನವೂ ಇದು ಮುಂದುವರೆದಿದ್ದು, ಇವರಿಬ್ಬರ ನಡುವೆ ನಡೆದ ರಾಮ-ರಾವಣನ ವೇಷದ ಚರ್ಚೆ ಗಮನ ಸೆಳೆಯಿತು.

ಇಂದು ಬಜೆಟ್‌ ಬಗ್ಗೆ ಚರ್ಚೆ ಆರಂಭವಾಗಿತ್ತು, ಸಿದ್ದರಾಮಯ್ಯ ಅವರು ಚರ್ಚೆ ನಡೆಸುತ್ತಿದ್ದರು, ಮಾತನಾಡುತ್ತಾ ಮಾತು ಕಲಾಪಕ್ಕೆ ಮಾಧ್ಯಮಗಳನ್ನು ನಿಷೇಧಿಸಿರುವುದರ ಕಡೆಗೆ ಹೊರಳಿತು.

ಸಂತ್ರಸ್ತರು ಬಿಜೆಪಿ, ಆರ್‌ಎಸ್‌ಎಸ್‌ ಕಚೇರಿಗೆ ಬರಬೇಕಾ? ಸಂತ್ರಸ್ತರು ಬಿಜೆಪಿ, ಆರ್‌ಎಸ್‌ಎಸ್‌ ಕಚೇರಿಗೆ ಬರಬೇಕಾ?

ಆಗ ತಟ್ಟನೆ ಎದ್ದ ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಅವರು ವಿಷಯಾಂತರ ಮಾಡುತ್ತಿದ್ದಾರೆ, ವಿತ್ತಿಯ ಬಗ್ಗೆ ಮಾತನಾಡುವುದು ಬಿಟ್ಟು ಮಾಧ್ಯಮದ ಕಡೆಗೆ ಹೊರಳಿದ್ದಾರೆ, ಈಗೇನು ಮಾಧ್ಯಮ ನಿರ್ಬಂಧದ ಬಗ್ಗೆ ಚರ್ಚೆ ನಡೆಯಬೇಕೆ ಅಥವಾ ಬಜೆಟ್‌ ಬಗ್ಗೆಯೋ ಎಂದು ಜೋರು ಮಾಡಿ ಕೇಳಿದರು.

ನೀವು ಹೇಗೆ ನಡೆದುಕೊಂಡಿರೆಂದು ಗೊತ್ತಿದೆ: ಸಿದ್ದರಾಮಯ್ಯ ಕಿಡಿ

ನೀವು ಹೇಗೆ ನಡೆದುಕೊಂಡಿರೆಂದು ಗೊತ್ತಿದೆ: ಸಿದ್ದರಾಮಯ್ಯ ಕಿಡಿ

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, 'ಮಾಧುಸ್ವಾಮಿ ನೀವು ಯಾವಾಗ ಹೇಗೆ ನಡೆದುಕೊಂಡಿದ್ದೇರೆಂದು ಗೊತ್ತಿದೆ. ಈ ಕಡೆಯಿದ್ದಾಗ (ವಿಪಕ್ಷ) ಒಂದು ವೇಷ ತೊಡುತ್ತೀರಿ, ಆ ಕಡೆ ಇದ್ದಾಗ ಒಂದು ವೇಷ ತೊಡುತ್ತೀರಿ' ಎಂದು ಸಿದ್ದರಾಮಯ್ಯ ಅವರು ಛೇಡಿಸುವ ದನಿಯಲ್ಲಿ ಹೇಳಿದರು.

ಡಿಡಿ ಚಂದನದಿಂದ ಸೆನ್ಸಾರ್: ಸಿದ್ದರಾಮಯ್ಯ ಆರೋಪಡಿಡಿ ಚಂದನದಿಂದ ಸೆನ್ಸಾರ್: ಸಿದ್ದರಾಮಯ್ಯ ಆರೋಪ

ಒಮ್ಮೆ ನೀವು ರಾವಣ, ಒಮ್ಮೆ ನಾವು ರಾವಣ

ಒಮ್ಮೆ ನೀವು ರಾವಣ, ಒಮ್ಮೆ ನಾವು ರಾವಣ

ಇದಕ್ಕೆ ನಕ್ಕ ಮಾಧುಸ್ವಾಮಿ, ಸಿದ್ದರಾಮಯ್ಯ ಅವರನ್ನು ಸಂತೈಸುತ್ತಾ, 'ಎಲ್ಲರೂ ಅದನ್ನೇ ಅಲ್ಲವೇ ಮಾಡುತ್ತಿರುವುದು, ಒಮ್ಮೆ ನೀವು ರಾವಣ ಆಗ್ತೀರಿ ಆಗ ನಾನು ರಾಮ ಆಗ್ತೀನಿ, ನೀವು ರಾಮ ಆದಾಗ ನಾವು ರಾವಣ ಆಗ್ತೀವಿ' ಎಂದು ಹೇಳಿದರು.

'ಪತ್ರಿಕಾರಂಗಕ್ಕೂ ಸಂವಿಧಾನದಲ್ಲಿ ಸಮಾನ ಪ್ರಾಮುಖ್ಯತೆ ಇದೆ'

'ಪತ್ರಿಕಾರಂಗಕ್ಕೂ ಸಂವಿಧಾನದಲ್ಲಿ ಸಮಾನ ಪ್ರಾಮುಖ್ಯತೆ ಇದೆ'

ಸಿದ್ದರಾಮಯ್ಯ ಅವರು ಮಾತು ಮುಂದುವರೆಸಿ, 'ಸಂವಿಧಾನದಲ್ಲಿ ಪತ್ರಿಕಾರಂಗಕ್ಕೂ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಕ್ಕೆ ಇರುವಷ್ಟೆ ಪ್ರಾಮುಖ್ಯತೆ ಇದೆ ಮಾಧ್ಯಮದ ಹಕ್ಕನ್ನು ಮೊಟಕುಗೊಳಿಸುವುದು ಒಳ್ಳೆಯದಲ್ಲ' ಎಂದರು.

ಸರ್ಕಾರದಿಂದ ಚಾನೆಲ್ ತೆರೆಯಲು ನಿರ್ಧರಿಸಿದ್ದೆ: ಸಿದ್ದರಾಮಯ್ಯ

ಸರ್ಕಾರದಿಂದ ಚಾನೆಲ್ ತೆರೆಯಲು ನಿರ್ಧರಿಸಿದ್ದೆ: ಸಿದ್ದರಾಮಯ್ಯ

ವಿಧಾನಸಭೆ, ವಿಧಾನಪರಿಷತ್‌ಗೆ ಸೇರಿ ಒಂದು ಚಾನೆಲ್ ಅನ್ನು ಸರ್ಕಾರದಿಂದಲೇ ಪ್ರಾರಂಭ ಮಾಡುವ ಯೋಚನೆಯನ್ನು ನಾವು ಮಾಡಿದ್ದೇವು, ಆದರೆ ನಂತರ ಅದನ್ನು ಕೈಬಿಟ್ಟೆವು ಎಂದು ಸಿದ್ದರಾಮಯ್ಯ ಹೇಳಿದರು. ಆಗ ಸಚಿವ ಬೊಮ್ಮಾಯಿ ಅವರು, ಅದಕ್ಕೆ ಏನು ಕಾರಣ ಎಂದು ಕೇಳಿದರು, 'ನಾವಿಬ್ಬರೇ ಇದ್ದಾಗ ಹೇಳುತ್ತೇನೆ ಸುಮ್ಮನಿರು' ಎಂದು ನಕ್ಕರು ಸಿದ್ದರಾಮಯ್ಯ.

ಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರಕ್ಕೆ ಸದನ ಅಕ್ಷರಸಃ ತಬ್ಬಿಬ್ಬುಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರಕ್ಕೆ ಸದನ ಅಕ್ಷರಸಃ ತಬ್ಬಿಬ್ಬು

'ಮಾಧ್ಯಮ ನಿಷೇಧಿಸುವ ತೀರ್ಮಾನ ಕಾಗೇರಿ ಒಬ್ಬರದ್ದಲ್ಲ'

'ಮಾಧ್ಯಮ ನಿಷೇಧಿಸುವ ತೀರ್ಮಾನ ಕಾಗೇರಿ ಒಬ್ಬರದ್ದಲ್ಲ'

ಮಾಧುಸ್ವಾಮಿ ಅವರು ಮಾತನಾಡಿ, ಕಲಾಪಕ್ಕೆ ಮಾಧ್ಯಮಗಳನ್ನು ನಿಷೇಧಿಸುವ ವಿಚಾರ ಹತ್ತು ವರ್ಷದ ಹಿಂದೆಯೇ ಪ್ರಸ್ತಾಪವಾಗಿತ್ತು. ಹಲವು ಸರ್ಕಾರಗಳು ಈ ಬಗ್ಗೆ ಚರ್ಚೆ ನಡೆಸಿವೆ, ಹಲವು ರಾಜ್ಯಗಳಲ್ಲಿ ಮಾಧ್ಯಮಗಳಿಗೆ ಕಲಾಪಕ್ಕೆ ನಿಷೇಧವಿದೆ. ಕೇಂದ್ರದಲ್ಲೂ ನಿಷೇಧವಿದೆ. ಮಾಧ್ಯಮಕ್ಕೆ ನಿಷೇಧ ಹೇರುವ ನಿರ್ಧಾರದ ಹೊಣೆಯನ್ನು ಕಾಗೇರಿ ಒಬ್ಬರ ಮೇಲೆಯೇ ಹೇರಲು ನಾವು ತಯಾರಿಲ್ಲ ಎಂದು ಅವರು ಹೇಳಿದರು.

English summary
Siddaramaiah-Madhu Swamy engaged in interesting debate in assembly today. Madhu Swamy told Siddaramaiah, 'when you became Rama i will become Ravana, when u became Ravana i became Rama'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X