ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತೋಷ್ ಯಾರ್ರೀ? ನಮಗೇನು ಗೊತ್ತು?

|
Google Oneindia Kannada News

ಬೆಂಗಳೂರು, ನ. 29: ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನದ ಕುರಿತು ಚರ್ಚೆ ನಡೆಯುತ್ತಿದೆ. ನಿದ್ರೆ ಮಾತ್ರೆ ಸೇವಿಸಿ ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಸಿದ್ದರು. ಇದೀಗ ಅವರು ಚೇತರಿಸಿಕೊಂಡಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.

ಇನ್ನು ಬಹುತೇಕ ನಾಯಕರು ಅಂತೋಷ್ ಆತ್ಮಹತ್ಯೆ ಯತ್ನದ ಕುರಿತು ಮಾತನಾಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ, ಸಂತೋಷ್ ಯಾರ್ರೀ? ನಮಗೇನು ಗೊತ್ತು? ಅವರ ಸಮಸ್ಯೆ ನಮಗೇನು ಗೊತ್ತು? ಅದು ಅವರ ವೈಯುಕ್ತಿಕ ವಿಚಾರ ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸಂತೋಷ್ ಆತ್ಮಹತ್ಯೆ ಯತ್ನ: ಆ ಸಚಿವ ಯಾರು? ಆ ಪರಿಷತ್ ಸದಸ್ಯ ಯಾರು?ಸಂತೋಷ್ ಆತ್ಮಹತ್ಯೆ ಯತ್ನ: ಆ ಸಚಿವ ಯಾರು? ಆ ಪರಿಷತ್ ಸದಸ್ಯ ಯಾರು?

ರಾಜಕೀಯ ಒತ್ತಡ, ಅದೆಲ್ಲ ಇದೆ ಅನ್ನೋದು ನನಗೇನು ಗೊತ್ತು? ವಿಚಾರಣೆ ನಂತರ ಎಲ್ಲವೂ ಹೊರಗೆ ಬರುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

siddaramaiah made important statement on nr santhoshs suicide attempt

ಇನ್ನು ವಿಧಾನಮಂಡಲ ಅಧಿವೇಶನ ವಿಚಾರಕ್ಕೆ ಸಂಬಂಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ನಮ್ಮ ತಂತ್ರದ ಬಗ್ಗೆ ಅಧಿವೇಶನ ಪ್ರಾರಂಭವಾದ ನಂತರ ಗೊತ್ತಾಗುತ್ತದೆ. ಅಲ್ಲಿ ಏನು ಮಾತನಾಡುತ್ತೇವೆ ಎಂಬುದನ್ನು ನೋಡಿ. ಪ್ರವಾಹ, ಬೇರೆ ಬೇರೆ ವಿಚಾರಗಳಿವೆ. ಅಲ್ಲಿ ಮಾತನಾಡುವುದನ್ನು ನೀವೇ ನೋಡುವಿರಂತೆ ಎಂದು ತಮ್ಮ ರಾಜಕೀಯ ರಣನೀತಿ ಬಗ್ಗೆ ಏನೂ ಗುಟ್ಟು ಬಿಟ್ಟು ಕೊಡಲಿಲ್ಲ.

siddaramaiah made important statement on nr santhoshs suicide attempt

ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಒಬಿಸಿ ಪಟ್ಟಿಯಲ್ಲಿ ಯಾರಿರಬೇಕು ಎಂಬುದನ್ನು ನಿರ್ಧರಿಸಲು ಕೇಂದ್ರದಲ್ಲಿ ಒಂದು ಆಯೋಗ ಇದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವಿದೆ. ಪಟ್ಟಿಗೆ ಸೇರಿಸೋದು, ಡಿಲೀಟ್ ಮಾಡೋದು ಅದಕ್ಕೆ ಸೇರಿದೆ. ಪಟ್ಟಿಗೆ ಸೇರಿಸಬಹುದು ಎಂದು ಆಯೋಗ ತಿಳಿಸಬೇಕು. ಒಬಿಸಿ ಪಟ್ಟಿಗೆ ಸೇರಿಸಿ ಎಂದು ಕೇಳುವುದು ತಪ್ಪಲ್ಲ. ಸಂವಿಧಾನದ 334ನೇ ವಿಧಿಯಲ್ಲಿಯೇ ಅದನ್ನು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

English summary
Siddaramaiah said that he don't know about CM political secretary NR Santhosh. And also what political pressure is on him. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X