ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್

|
Google Oneindia Kannada News

ಬೆಂಗಳೂರು, ಜುಲೈ 14 : 'ನಾನಂತೂ ಅಡ್ಡಗೋಡೆ ಮೇಲೆ ಕೂತಿದ್ದೀನಿ' ಎಂದು ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಟಿ. ಬಿ. ನಾಗರಾಜ್ ಹೇಳಿದ್ದರು. ಈಗ ಅವರ ಹೇಳಿಕೆಗಳೂ ಸಹ ಕುತೂಹಲಕ್ಕೆ ಕಾರಣವಾಗಿವೆ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಲಿದ್ದಾರೆಯೇ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರ ಜೊತೆ ಎಂ. ಟಿ. ಬಿ.ನಾಗರಾಜ್ ಸರಣಿ ಸಭೆಗಳನ್ನು ನಡೆಸಿದರು. ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಮನವೊಲಿಕೆ ಸಕ್ಸಸ್!? ಒಂದು ಕಾಲು ಹಿಂದೆ ಇಟ್ಟರೇ ಎಂಟಿಬಿ ನಾಗರಾಜ್?ಮನವೊಲಿಕೆ ಸಕ್ಸಸ್!? ಒಂದು ಕಾಲು ಹಿಂದೆ ಇಟ್ಟರೇ ಎಂಟಿಬಿ ನಾಗರಾಜ್?

'ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ' ಎಂದು ಎಂ. ಟಿ. ಬಿ.ನಾಗರಾಜ್ ಘೋಷಣೆ ಮಾಡಿದರು. ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿಯೇ ಈ ಘೋಷಣೆ ಮಾಡಿದರು.

ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ

ಕೆಲವು ಹೊತ್ತಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂ. ಟಿ. ಬಿ. ನಾಗರಾಜ್, 'ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ವಾಪಸ್ ಪಡೆದರೆ ಮಾತ್ರ ನಾನು ವಾಪಸ್ ಪಡೆಯುವೆ' ಎಂದು ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದರು....

ಎಂಟಿಬಿ ನಾಗರಾಜ್ ಮನವೊಲಿಸಲು ಸಿದ್ದರಾಮಯ್ಯ ಕೂಡ ವಿಫಲ?ಎಂಟಿಬಿ ನಾಗರಾಜ್ ಮನವೊಲಿಸಲು ಸಿದ್ದರಾಮಯ್ಯ ಕೂಡ ವಿಫಲ?

ಎಂ.ಟಿ.ಬಿ.ನಾಗರಾಜ್ ಹೇಳಿದ್ದೇನು?

ಎಂ.ಟಿ.ಬಿ.ನಾಗರಾಜ್ ಹೇಳಿದ್ದೇನು?

ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ 'ನಾನು ಪಕ್ಷದಲ್ಲೇ ಇರುತ್ತೇನೆ. ರಾಜೀನಾಮೆ ಹಿಂಪಡೆಯುತ್ತೇನೆ. ಸುಧಾಕರ್ ಅವರಿಗೂ ಹೇಳುತ್ತೇನೆ' ಎಂದು ಹೊಸಕೋಟೆ ಶಾಸಕ ಎಂ. ಟಿ. ಬಿ. ನಾಗರಾಜ್ ಘೋಷಣೆ ಮಾಡಿದರು.

ಡಾ.ಕೆ.ಸುಧಾಕರ್ ಜೊತೆ ಮಾತುಕತೆ

ಡಾ.ಕೆ.ಸುಧಾಕರ್ ಜೊತೆ ಮಾತುಕತೆ

'ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವುದಕ್ಕೆ ನನಗೂ ಇಷ್ಟ ಇರಲಿಲ್ಲ. ಡಾ. ಕೆ. ಸುಧಾಕರ್ ಹಾಗೂ ನಾನು ಆತ್ಮೀಯರು. ಇಬ್ಬರು ಚರ್ಚೆ ಮಾಡಿಯೇ ರಾಜೀನಾಮೆ ನೀಡಿದೆವು. ರಾಜೀನಾಮೆ ವಾಪಸ್ ಪಡೆಯಲಿದ್ದೇನೆ. ಸುಧಾಕರ್ ಅವರಿಗೂ ಈ ಕುರಿತು ಸಲಹೆ ನೀಡುತ್ತೇನೆ' ಎಂದು ಎಂ. ಟಿ. ಬಿ. ನಾಗರಾಜ್ ಹೇಳಿದರು.

ನಾನೋಬ್ಬನೇ ಬಂದು ಏನು ಮಾಡಲಿ?

ನಾನೋಬ್ಬನೇ ಬಂದು ಏನು ಮಾಡಲಿ?

ಆದರೆ, ಸಿದ್ದರಾಮಯ್ಯ ನಿವಾಸದಿಂದ ಹೊರಟ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, 'ನಾನು ಕಾಂಗ್ರೆಸ್‌ನಲ್ಲಿಯೇ ಇರುವ ತೀರ್ಮಾನಕ್ಕೆ ಬಂದಿದ್ದೇನೆ. ಸುಧಾಕರ್ ಅವರು ಏನು ಮಾಡುತ್ತಾರೆ ಎಂದು ಕೇಳಿ ನೋಡುತ್ತೇನೆ. ನನ್ನ ಪ್ರಕಾರ ಸುಧಾಕರ್ ನನ್ನ ಮನವಿಗೆ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡಿಲ್ಲ ಎಂದರೆ ನಾನು ಒಬ್ಬನೇ ಬಂದು ಏನು ಮಾಡುವುದಕ್ಕೆ ಆಗುತ್ತದೆ?' ಎಂದು ಎಂ. ಟಿ. ಬಿ. ನಾಗರಾಜ್ ಪ್ರಶ್ನಿಸಿದರು.

ಸುಧಾಕರ್ ಸಂಪರ್ಕಿಸಲು ತಂಡ ರಚನೆ

ಸುಧಾಕರ್ ಸಂಪರ್ಕಿಸಲು ತಂಡ ರಚನೆ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ದೆಹಲಿ ಅಥವ ಮುಂಬೈಗೆ ತೆರಳಿರುವ ಸಾಧ್ಯತೆ ಇದೆ. ಅವರನ್ನು ಸಂಪರ್ಕಿಸಲು ಕಾಂಗ್ರೆಸ್‌ನ ಮೂವರು ನಾಯಕರ ತಂಡ ರಚನೆ ಮಾಡಲಾಗಿದೆ. ಮಾಜಿ ಸಚಿವ ಎಚ್. ಸಿ. ಮಹದೇವಪ್ಪ ಅವರಿಗೆ ಮನವೊಲಿಕೆ ಮಾಡುವ ಉಸ್ತುವಾರಿ ನೀಡಲಾಗಿದೆ.

English summary
Former Chief Minister Siddaramaiah loyalist and Hoskote MLA M.T.B. Nagaraj hinted that he will reconsider his resignation. After meeting with Siddaramaiah he addressed media on Saturday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X