ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮೊಳಗಿದ 'ಸಿದ್ದರಾಮಯ್ಯ ಭಾವೀ ಸಿಎಂ' ಹೇಳಿಕೆ: ವೇದಿಕೆಯಲ್ಲೇ ತಿರುಗೇಟು ನೀಡಿದ ಡಿಕೆಶಿ

|
Google Oneindia Kannada News

ಬೆಂಗಳೂರು, ಫೆ 22: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯಾಗುವುದು ಯಾರು ಎನ್ನುವ ವಿಚಾರ ಪಕ್ಷದಲ್ಲಿ ಚರ್ಚೆಯ ವಿಷಯವಾಗಿ ಮುಂದುವರಿಯುತ್ತಲೇ ಇದೆ.

ಹಲವು ಬಾರಿ ಇದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಶೀತಲ ಸಮರಕ್ಕೂ ಕಾರಣವಾಗಿತ್ತು. ಜೊತೆಗೆ, ಮೂರ್ನಾಲ್ಕು ಬಾರಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದರು.

ತೈಲಬೆಲೆ ಏರಿಕೆ: ಬಿಜೆಪಿಯ ಹಳೇ ಕಡತವನ್ನೆಲ್ಲಾ ತಿರುವಿ ತಿರುವಿ ಹಾಕುತ್ತಿರುವ ಕಾಂಗ್ರೆಸ್ ತೈಲಬೆಲೆ ಏರಿಕೆ: ಬಿಜೆಪಿಯ ಹಳೇ ಕಡತವನ್ನೆಲ್ಲಾ ತಿರುವಿ ತಿರುವಿ ಹಾಕುತ್ತಿರುವ ಕಾಂಗ್ರೆಸ್

ನೂತನವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಲಿಂಗಾ ರೆಡ್ಡಿ ಮತ್ತು ಧ್ರುವ ನಾರಾಯಣ ಅವರ ಪದಗ್ರಹಣ ಕಾರ್ಯಕ್ರಮದಲ್ಲೂ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ತಮ್ಮ ಭಾಷಣದ ವೇಳೆ ಡಿ.ಕೆ.ಶಿವಕುಮಾರ್ ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ.

ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಹಿರಿಯ ಮತ್ತು ಕಿರಿಯ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಅವರ ಸಿಟ್ಟಿಗೆ ಕಾರಣವಾಯಿತು.

ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, "ಬಿಜೆಪಿ ಸರಕಾರ ಹೇಳಿದ ಒಂದು ಮಾತನ್ನೂ ನಡೆಸಿಲ್ಲ. ಆದರೂ, ಜನ ಮೋದಿ..ಮೋದಿ ಅನ್ನುತ್ತಾರೆ. ಅದೇನು ಮರಳು ಮಾಡಿದ್ದಾರೋ? ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರು ಯಾರೆಂದು ತಿಳಿದಿದೆ. ಆದರೆ, ಈ ವೇದಿಕೆಯಲ್ಲಿ ಅದನ್ನು ಹೇಳಲು ಸಾಧ್ಯವಿಲ್ಲ"ಎಂದು ಖರ್ಗೆ ಹೇಳಿದರು.

ಸಿದ್ದರಾಮಯ್ಯನವರು ಭಾವಿ ಸಿಎಂ ಅಂದ ಜಮೀರ್ ಅಹ್ಮದ್

ಸಿದ್ದರಾಮಯ್ಯನವರು ಭಾವಿ ಸಿಎಂ ಅಂದ ಜಮೀರ್ ಅಹ್ಮದ್

ಇನ್ನು ಜಮೀರ್ ಅಹ್ಮದ್ ಮಾತನಾಡುತ್ತಾ, "ಸಿದ್ದರಾಮಯ್ಯನವರು ನಮ್ಮ ಭಾವಿ ಮುಖ್ಯಮಂತ್ರಿಗಳು"ಎಂದು ಹೇಳಿದರು. ಎರಡು ದಿನಗಳ ಹಿಂದೆ ಹುಣಸೂರಿನಲ್ಲಿ ಮಾತನಾಡುವಾಗಲೂ ಜಮೀರ್ ಈ ಮಾತನ್ನು ಹೇಳಿದ್ದರು. ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಹೇಳುವುದಕ್ಕೆ ಮನಸ್ಸು ಆಗುತ್ತಿಲ್ಲ. ಹೀಗಾಗಿ, ಅವರನ್ನ ಭಾವಿ ಮುಖ್ಯಮಂತ್ರಿ ಎನ್ನಲು ಬಯಸುತ್ತೇನೆ. ರಾಜ್ಯದ ಜನರಿಗೆ ಒಳ್ಳೆಯದು ಆಗಬೇಕಾದರೆ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು" ಎಂದು ಜಮೀರ್ ಹೇಳಿದ್ದರು.

ವ್ಯಕ್ತಿಪೂಜೆಗೆ ಮಣೆ ಹಾಕಬಾರದು ಎಂದ ಡಿಕೆಶಿ

ವ್ಯಕ್ತಿಪೂಜೆಗೆ ಮಣೆ ಹಾಕಬಾರದು ಎಂದ ಡಿಕೆಶಿ

ಜಮೀರ್ ಹೇಳಿಕೆಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ, "ಜಮೀರ್ ಅವರು ಸಿದ್ದರಾಮಯ್ಯ ಭಾವೀ ಸಿಎಂ ಅಂದರು. ನಾನು ವೇದಿಕೆಗೆ ಬರುವಾಗ ಡಿಕೆಶಿ ಮುಂದಿನ ಸಿಎಂ ಎನ್ನುವ ಘೋಷಣೆ ಕೂಗಲಾಯಿತು. ನನಗೆ ಅದು ಮುಖ್ಯವಲ್ಲ. ಪಕ್ಷ ಅಧಿಕಾರಕ್ಕೆ ಬರುವುದನ್ನು ಮೊದಲು ಟಾರ್ಗೆಟ್ ಮಾಡಿಕೊಳ್ಳಬೇಕು. ವ್ಯಕ್ತಿಪೂಜೆಗೆ ಮಣೆ ಹಾಕಬಾರದು"ಎಂದು ಡಿಕೆಶಿ ಹೇಳಿದರು.

Recommended Video

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬಗ್ಗೆ ಸಮುದಾಯದ ಸಚಿವರೇ ತಿಳಿಸ್ತಾರೆ ಎಂದ ಸಿಎಂ ಬಿಎಸ್ ವೈ | Oneindia Kannada
ಸಿಎಂ ಯಾರಾಗಬೇಕು ಎನ್ನುವುದನ್ನು ವರಿಷ್ಠರು ನಿರ್ಧರಿಸುತ್ತಾರೆ

ಸಿಎಂ ಯಾರಾಗಬೇಕು ಎನ್ನುವುದನ್ನು ವರಿಷ್ಠರು ನಿರ್ಧರಿಸುತ್ತಾರೆ

"ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ‌ ತರಬೇಕಾಗಿದೆ. ಪಕ್ಷದ ತತ್ವ, ಸಿದ್ಧಾಂತಗಳ ಅಡಿಯಲ್ಲಿ ಪಕ್ಷ ಸಂಘಟನೆ ಮಾಡಿದಾಗ ನಮಗೆ ಗೆಲುವು ನಿಶ್ಚಿತ. ಅಲ್ಲದೇ ಸಂಕಷ್ಟದಲ್ಲಿರುವ ಜನರ ಪರವಾಗಿ ನಾವು ಅವರ ಧ್ವನಿಯಾಗಿ ಹೋರಾಟ ನಡೆಸಬೇಕು. @BJP4Karnataka ಸರ್ಕಾರದ ವೈಫಲ್ಯಗಳು, ದುರಾಡಳಿತವನ್ನು ಜನರ ಮುಂದೆ ತೆರೆದಿಡಬೇಕು. ಸಿಎಂ ಯಾರಾಗಬೇಕು ಎನ್ನುವುದನ್ನು ವರಿಷ್ಠರು ನಿರ್ಧರಿಸುತ್ತಾರೆ"ಎಂದು ಡಿಕೆಶಿ ಹೇಳಿದರು.

English summary
Siddaramaiah Is Our CM Candidate, Statement By Zameer Ahmed, D K Shivakumar reply for this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X