ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲ!

|
Google Oneindia Kannada News

ಬೆಂಗಳೂರು, ಫೆ. 03: ವಿಧಾನಸಭೆ ಕಲಾಪ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದುವರೆದಿದ್ದು, ಚರ್ಚೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಂಡಾಮಂಡಲರಾಗಿದ್ದಾರೆ. ಕಳೆದ ಗುರುವಾರ (ಜ.28) ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಭಾಷಣ ಮಾಡಿದ್ದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿರುವ ಸಿದ್ದರಾಮಯ್ಯ ಅವರು ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನಾನು ಇಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದೇನೆ. ಒಬ್ಬೇ ಒಬ್ಬ ಅಧಿಕಾರಿ ಇಲ್ಲಿ ಕುಳಿತಿಲ್ಲ. ಸರ್ಕಾರ ಇದೆಯೊ? ಇಲ್ಲವೊ?. ಅವರಿಗೆ ಹೇಳುವವರಿಲ್ಲ, ಕೇಳುವವರೂ ಇಲ್ಲ. ಎಲ್ಲ ಅಧಿಕಾರಿಗಳು ಏರ್ ಶೋ ನೋಡೋಕೆ ಹೋಗಿರಬೇಕು. ನಾವು ರಾಜ್ಯದ ಹಿತದ ಬಗ್ಗೆ ಚರ್ಚಿಸುತ್ತಿದ್ದೇವೆ. ಅಧಿಕಾರಿಗಳೇ ಇಲ್ಲ ಅಂದರೆ ಹೇಗೆ? ಈಗ ನೀವು ಅಧಿಕಾರದಲ್ಲಿದ್ದೀರಿ. ನಾಳೆ ನಾವು ಅಧಿಕಾರಕ್ಕೆ ಬರಬಹುದು. ಆದರೆ ಅಧಿಕಾರಿಗಳು ನಿವೃತ್ತಿ ಆಗುವವರೆಗೆ ಇಲ್ಲಿರ್ತಾರೆ. ನಾನು ಪ್ರತಿಪಕ್ಷದ ನಾಯಕನಾಗಿ ಮಾತನಾಡುತ್ತಿದ್ದೇನೆ. ಒಬ್ಬೇ ಒಬ್ಬ ಅಧಿಕಾರಿಗಳು ಇಲ್ಲ ಅಂದರೆ ಹೇಗೆ? ನಾಚಿಕೆಯಾಗ್ಬೇಕು ಎಂದು ಅಧಿಕಾರಿಗಳ ಮೇಲೆ ಸಿದ್ದರಾಮಯ್ಯ ಅವರು ಹರಿಹಾಯ್ದರು.

ಸಿಎಂ ಯಡಿಯೂರಪ್ಪ ಭೋಜನಕೂಟಕ್ಕೆ ಗೈರು; ಶಾಸಕರು ಕೊಟ್ಟ ಕಾರಣ ಏನು?ಸಿಎಂ ಯಡಿಯೂರಪ್ಪ ಭೋಜನಕೂಟಕ್ಕೆ ಗೈರು; ಶಾಸಕರು ಕೊಟ್ಟ ಕಾರಣ ಏನು?

ಫ್ರೀ ಏರ್ ಶೋ ನೋಡೋಕೆ ಹೋಗಿದ್ದಾರೆ

ಫ್ರೀ ಏರ್ ಶೋ ನೋಡೋಕೆ ಹೋಗಿದ್ದಾರೆ

ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲ್ಲ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳೂ ಅಧಿಕಾರಿಗಳ ಗ್ಯಾಲರಿಯಲ್ಲಿಲ್ಲ. 12-13 ಮಂದಿ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಇರಬೇಕು. ಒಬ್ಬರೂ ಇಲ್ಲಿ ಹಾಜರಿಲ್ಲ. ಹಣಕಾಸು, ಅಬಕಾರಿ ಕಾರ್ಯದರ್ಶಿಗಳೂ ಇಲ್ಲ. ನಾವು ಯಾರಿಗೆ ಹೇಳ್ಬೇಕು? ಯಾರಿಗೆ ಕೇಳಬೇಕು? ಎಲ್ಲರೂ ಫ್ರೀ ಏರ್ ಶೋ ನೋಡುವುದಕ್ಕೆ ಹೋಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದರು.


ವಿಪಕ್ಷ ನಾಯಕ ಅಥವಾ ಸದಸ್ಯರು ಭಾಷಣ ಮಾಡುವಾಗ ಅವರು ಹೇಳುವ ವಿಷಯಗಳನ್ನು ನೋಟ್ ಮಾಡಿಕೊಂಡು ಸರ್ಕಾರದ ಗಮನಕ್ಕೆ ಅಧಿಕಾರಿಗಳು ತಮ್ಮ ಗ್ಯಾಲರಿಯಲ್ಲಿ ಕುಳಿತು ಟಿಪ್ಪಣಿ ಮಾಡಿಕೊಂಡು ಸರ್ಕಾರದ ಗಮನಕ್ಕೆ ತರುವುದು ಸಂಪ್ರದಾಯ. ಹೀಗಾಗಿ ಅಧಿಕಾರಿಗಳು ಸದನಕ್ಕೆ ಗೈರು ಹಾಜರಾಗಿದ್ದರಿಂದ ಸಿದ್ದರಾಮಯ್ಯ ಗರಂ ಆಗಿದ್ದರು.

ಡಕೋಟ ಎಕ್ಸ್‌ಪ್ರೆಸ್ ಬಿಜೆಪಿ ಸರ್ಕಾರ

ಡಕೋಟ ಎಕ್ಸ್‌ಪ್ರೆಸ್ ಬಿಜೆಪಿ ಸರ್ಕಾರ

ನಂತರ ಭಾಷಣ ಮುಂದುವರೆಸಿದ ಸಿದ್ದರಾಮಯ್ಯ ಅವರು, ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಅಕ್ಷರಶಃ ವಾಗ್ದಾಳಿ ನಡೆಸಿದರು. ಅನೈತಿಕ ಅಂಗವೈಕಲ್ಯದ ಸರ್ಕಾರವಿದು. ನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಅನ್ನುತ್ತಿದ್ದರು. ಈಗ ಇವರ ಸರ್ಕಾರ ಏನಾಗಿದೆ? ಟೇಕಾಫ್ ಅಲ್ಲ ಸರ್ಕಾರ ಬಂದ್ ಆಗಿ ಬಿಟ್ಟಿದೆ.

ದಾರಿಯಲ್ಲಿ ನಿಂತ ಡಕೋಟ ಎಕ್ಸ್‌ಪ್ರೆಸ್ ರೀತಿ ಸರ್ಕಾರವಾಗಿದೆ. ಸಿಎಂ ಯಡಿಯೂರಪ್ಪಗೆ ಬಸ್ ಓಡಿಸೋಕೆ ಬರುತ್ತಿಲ್ಲ. ಗೇರ್ ಹಾಕೋಕೆ ಯಡಿಯೂರಪ್ಪನಿಗೆ ಬರ್ತಿಲ್ಲ. ನಾಲ್ಕು‌ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡುತ್ತಿದ್ದಾರೆ. ಎಂದು ಸರ್ಕಾರವನ್ನು ಡಕೋಟ ಎಕ್ಸ್‌ಪ್ರೆಸ್‌ಗೆ ಹೋಲಿಕೆ ಮಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

5 ದಿನದಲ್ಲಿ 4 ಬಾರಿ ಖಾತೆ ಬದಲಾವಣೆ

5 ದಿನದಲ್ಲಿ 4 ಬಾರಿ ಖಾತೆ ಬದಲಾವಣೆ

ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷಗಳಾದರೂ ಸರ್ಕಾರ ಸರಿಯಾಗಿಲ್ಲ. ಐದು ದಿನದಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದ್ದಾರೆ. ಸಚಿವ ಮಾಧುಸ್ವಾಮಿಗೆ ಮೂರು ಭಾರಿ ಖಾತೆ ಬದಲಾಯಿಸಿದ್ದೀರಿ. ಪಾಪ ಮುಂದೆ ಕೂಳಿತು ಕೆಲಸ ಮಾಡ್ತಿದ್ದ. ಅವನನ್ನು ಹಿಂದಕ್ಕೆ ಹಾಕಿಬಿಟ್ಟಿದ್ದೀರಿ. ಎಲ್ಲರೂ ಕೇಳಿದರೂ, ಆದರೂ ಪಾಪ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಯಾರಿಗೂ ಕೊಡಲಿಲ್ಲ.


ಸಚಿವ ಅರವಿಂದ ಲಿಂಬಾವಳಿ ಬೆಂಗಳೂರಿನವರು ಅಲ್ಲವೇ? ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನಿನಗೆ ಕೊಡಬಹುದಿತ್ತು ಎಂದು ಸಚಿವ ಅರವಿಂದ್ ಅದನ್ನು ಸಿದ್ದರಾಮಯ್ಯ ಅವರು ಚರ್ಚೆಯಲ್ಲಿ ಎಳೆದರು. ಪಾಪ ಸುರೇಶ್ ಕುಮಾರ್ ಇಲ್ಲೇ ಹುಟ್ಟಿ ಬೆಳೆದವರು. ಅವರಿಗಾದರೂ ಬೆಂಗಳೂರು ಅಭಿವೃದ್ಧಿ ಇಲಾಖೆ ಕೊಡಬಹುದಿತ್ತು. ಆದರೆ ಬೆಂಗಳೂರು ಅಭಿವೃದ್ಧಿಯನ್ನು ಯಡಿಯೂರಪ್ಪ ಅವರೇ ಇಟ್ಟುಕೊಂಡಿದ್ದಾರೆ. ಹೀಗಾಗಿ ನರಕ ಎಲ್ಲವೂ ಬೆಂಗಳೂರಿನಲ್ಲಿಯೇ ಇದೆ. ಇಲ್ಲೇ ಅನುಭವಿಸಿ ನಾವು ಹೋಗಬೇಕು ಎಂದು ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ಕುಟುಕಿದರು.

Recommended Video

ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada
ಅಬಕಾರಿ ಮಂತ್ರಿನ ಬೀದಿಪಾಲು ಮಾಡಿದ್ರು

ಅಬಕಾರಿ ಮಂತ್ರಿನ ಬೀದಿಪಾಲು ಮಾಡಿದ್ರು

ಕಾಂಗ್ರೆಸ್ ಸರ್ಕಾರ ಇದ್ದಾಗ ನಾನು ಯಾವತ್ತು ಖಾತೆ ಬದಲಾವಣೆ ಮಾಡಲಿಲ್ಲ. ಇಷ್ಟೊಂದು ಬಾರಿ ಬದಲಾಯಿಸಲಿಲ್ಲ. ಒಂದೇ ಒಂದು ಬಾರಿ ಸಂಪುಟ ಪುನಾರಚನೆ ಮಾಡಿದ್ದೆ. ಈಗ ನೋಡಿ ನಮ್ಮ ಅಬಕಾರಿ ಮಂತ್ರಿನ ಬೀದಿಪಾಲು ಮಾಡಿದ್ರು. ಸುಮ್ಮನೆ ಅಲ್ಲಿಗೆ (ಬಿಜೆಪಿಗೆ) ಹೋಗಿ ಬೀದಿಪಾಲಾದ. ನಮ್ಮ‌ ಡಾ. ಸುಧಾಕರ್, ನಾಗೇಶ್‌ನನ್ನು ರಕ್ಷಣೆ ಮಾಡಲಿಲ್ಲ. ನೀ ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ? ಇಲ್ಲ ಅಲ್ವಾ? ನಾವು ಶ್ರೀನಿವಾಸ್ ಮನೆಯಲ್ಲಿ ಸೇರಿದ್ವಲ್ಲಪ್ಪ? ಅಲ್ಲಿ ನೀನು ಕುಡಿದಿರಲಿಲ್ವೇ? ಎಂದು ಅರವಿಂದ ಲಿಂಬಾವಳಿ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುಟುಕಿದರು. ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಷಣವನ್ನು ಮುಂದುವರೆಸಿದ್ದಾರೆ.

English summary
Siddaramaiah, who is debating the governor's speech in the assembly, has verbal attack on government and officials in assembly. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X