ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂದಾಯ ಸಚಿವ ಅಶೋಕ್‌ಗೆ ಕೃಷಿ ಪಾಠ ಮಾಡಿದ ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ಜು. 22: ಆರ್. ಅಶೋಕ್‌ ರಾಜಕಾರಣಕ್ಕೆ ಬಂದಿದ್ದು ಯಾವಾಗ? ಭೂಸುಧಾರಣಾ ಕಾಯಿದೆ ಬಗ್ಗೆ ಅವ್ರಿಗೆ ಏನು‌ ಗೊತ್ತಿದೆ? ಹೊಲ ಉತ್ತಿದ್ದಾರಾ ಇಲ್ಲವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಆರ್. ಅಶೊಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭೂಸುಧಾರಣಾ ಕಾಯಿಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿ ವಿರೋಧಿಸಿ ಹೋರಾಟದ ರೂಪುರೇಷೆ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಿದ್ದರಾಮಯ್ಯ ಮಾತನಾಡಿದರು.

Recommended Video

ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ | Oneindia Kannada

ಭೂಸುಧಾರಣಾ ಕಾಯಿದೆ ವಿರೋಧಿಸಿ ಮುಂದಿ ಹೋರಾಟ ಕುರಿತು ರೈತ ಸಂಘಟನೆಗಳ ಮುಖಂಡರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡರಾದ ಬಸವರಾಜಪ್ಪ, ಬಡಗಲಿ ಪುರ ನಾಗೇಂದ್ರ, ವೀರಸಂಗಯ್ಯ, ಚಾಮರಸ ಮಾಲಿಪಾಟೀಲ್, ಬಡಿಗೇಪುರ ನಾಗೇಂದ್ರ ಸೇರಿ ಹಲವು ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಹಾಗೂ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೇಟಿ ಹಾಲು ಕುಡಿಸ್ತೀವಿ

ಮೇಟಿ ಹಾಲು ಕುಡಿಸ್ತೀವಿ

ಭೂಸುಧಾರಣಾ ಕಾಯಿದೆಗೆ ಸುಗ್ರೀವಾಜ್ಞೆ ತಂದಿರುವ ಕುರಿತಂತೆ ಕಂದಾಯ ಸಚಿವ ಆರ್. ಅಶೊಕ್ ಅವರ ಮೇಲೆ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೊಲ ಉತ್ತುವ ಬಗ್ಗೆ ಅಶೋಕ್ ಅವರಿಗೆ ಗೊತ್ತಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮೇಟಿ ಹಾಲು ಕುಡಿಸ್ತೀವಿ ಅಂತ ನಮ್ಮ ಕಡೆ ಗಾದೆ ಮಾತಿದೆ. ಹಾಗೆ ಮಾಡಿದ್ರೆ ಕೈಯಲ್ಲಿ ಬೊಬ್ಬೆ ಬರುತ್ತೆ. ಅದು ಅಶೋಕ್ ಅವರಿಗೆ ಗೊತ್ತಿದೆಯಾ?

ಜನರ ಕಷ್ಟಗಳ ನಿವಾರಣೆಗೆ ಸಹಕಾರವಿದೆ, ಹಣದ ಲೂಟಿಗಲ್ಲ: ಸಿದ್ದರಾಮಯ್ಯಜನರ ಕಷ್ಟಗಳ ನಿವಾರಣೆಗೆ ಸಹಕಾರವಿದೆ, ಹಣದ ಲೂಟಿಗಲ್ಲ: ಸಿದ್ದರಾಮಯ್ಯ

ನನಗೆ ಇವತ್ತಿಗೂ ನೇಗಿಲು, ಕುಂಟೆ ಕಟ್ಟೋದಕ್ಕೆ ಬರುತ್ತದೆ. ಹಲುವೆ ಹೊಡೆಯೋದು ಗೊತ್ತಿದೆ. ಭೂಮಿ ಮಟ್ಟ ಮಾಡಲು ಬರುತ್ತದೆ. ಅಶೋಕ್‌ಗೆ ಇದರ ಬಗ್ಗೆ ಗೊತ್ತಿದೆಯೇ? ಎಂದು ಅಶೋಕ್ ಅವರಿಗೆ ಸಿದ್ದರಾಮಯ್ಯ ಕೃಷಿ ಪಾಠ ಹೇಳಿದರು

ಸುಮ್ಮನೆ ಕಂದಾಯ ಸಚಿವ

ಸುಮ್ಮನೆ ಕಂದಾಯ ಸಚಿವ

ಸುಮ್ಮನೆ ಕಂದಾಯ ಸಚಿವರಾದ್ರೆ ಎಲ್ಲವೂ ಗೊತ್ತಾಗುವುದಿಲ್ಲ. ಆದರೆ ಕಂದಾಯ ಸಚಿವರಾಗಿರುವುದರಿಂದ ಎಲ್ಲವನ್ನೂ ತಿಳಿದುಕೊಳ್ಳಬೇಕು. ರೈತರು, ಹೊಲ, ಜಮೀನಿನ ಬಗ್ಗೆ ತಿಳಿದು ಕೊಳ್ಳಬೇಕು. ಅವರು ತಿಳಿದುಕೊಂಡಿದ್ದಾರೋ ಇಲ್ಲವೊ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಎಲ್ಲೂ ಇಲ್ಲದ ಕಾಯಿದೆಯನ್ನು ಇಟ್ಕೊಂಡು ನಾವೇನೂ ಮಾಡೋಣ ಎಂದು ಹಿಂದಿನ ಭೂಸುಧಾರಣಾ ಕಾಯಿದೆ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಹಗುರವಾಗಿ ಮಾತನಾಡಿದ್ದರು. ಜೊತೆಗೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಶೋಪೀಸ್‌ನಂತೆ ಮಾತನಾಡಬಾರದು ಎಂದಿದ್ದರು. ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿರುವುದನ್ನು ಎಲ್ಲರಿಗಿಂತ ಹೆಚ್ಚಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಸಿದ್ದರಾಮಯ್ಯ ಅವರು ಕೃಷಿಯ ಬಗ್ಗೆ ತಿಳಿವಳಿಕೆ ಕೊಟ್ಟಿದ್ದಾರೆ.

ಬಹುದೊಡ್ಡ ಲಾಬಿ

ಬಹುದೊಡ್ಡ ಲಾಬಿ

ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ಸಾವಿರಕ್ಕೂ ಹೆಚ್ಚು ಕೇಸುಗಳು ನ್ಯಾಯಾಲಯಗಳಲ್ಲಿವೆ. ಒಂದು ವರದಿ ಪ್ರಕಾರ 1.70 ಲಕ್ಷ ಎಕರೆ ಜಮೀನು ಈ ವ್ಯಾಜ್ಯಗಳಿಗೆ ಸಂಬಂಧಿಸಿದೆ. ಒಂದು ಎಕರೆಗೆ 50 ಲಕ್ಷವಾದರೂ 70-80 ಸಾವಿರ ಕೋಟಿ ರೂಪಾಯಿಗಳಮೌಲ್ಯದ ಜಮೀನು ಇದಾಗಿದೆ. ಆ ಎಲ್ಲ ಜಮೀನುಗಳು ಖರೀದಿ ಮಾಡಿರುವವರ ವಿರುದ್ಧವಾಗಿದೆ.

ಕಾಂಗ್ರೆಸ್-ಜೆಡಿಸ್ ಮೈತ್ರಿ ಸರ್ಕಾರ ಉರುಳಲು ಕಾರಣ ಸಿದ್ಧೌಷಧವೇ?ಕಾಂಗ್ರೆಸ್-ಜೆಡಿಸ್ ಮೈತ್ರಿ ಸರ್ಕಾರ ಉರುಳಲು ಕಾರಣ ಸಿದ್ಧೌಷಧವೇ?

ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಕಾಯಿದೆಗೆ ತಿದ್ದುಪಡಿ ತಂದು ಕೇಸುಗಳನ್ನು ವಜಾ ಮಾಡಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಜಮೀನುಗಳು ಉಳ್ಳವರ ಪಾಲಾಗುತ್ತದೆ.

ಹೌಸಿಂಗ್ ಸೊಸೈಟಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಶ್ರೀಮಂತರು ಜಮೀನಿನ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಇದು ಮುಂದೆ ಹಣ ಮಾಡಿಕೊಳ್ಳುವ ಹುನ್ನಾರ. ಅವರ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.

ರೈತರ ವಿರೋಧ

ರೈತರ ವಿರೋಧ

ಸರ್ಕಾರ ಭೂ ಸುಧಾರಣಾ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಬಗ್ಗೆ ರೈತ ಮುಖಂಡರೊಂದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ. ಬಳಿಕ ಮಾತನಾಡಿ, ಮುಖಂಡರ ಜೊತೆ ಸಭೆ ನಡೆಸಿದ್ದೇನೆ. ಕಾಯಿದೆಯ ಬಗ್ಗೆ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ರೈತ ಮುಖಂಡರ ಅಭಿಪ್ರಾಯವನ್ನು ಪಡೆದಿದ್ದೇನೆ ಎಂದಿದ್ದಾರೆ.

ಎಲ್ಲರೂ ಕಾಯಿದೆಯನ್ನು ವಿರೋಧಿಸಿದ್ದಾರೆ. ರೈತರನ್ನು ಬೀದಿ ಪಾಲು ಮಾಡುವ ಕಾಯಿದೆ ಇದು. ಕಾಯಿದೆ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತದೆ. ಆಹಾರ ಸ್ವಾವಲಂಬನೆಗೆ ಏಟು ನೀಡುತ್ತದೆ. ಈ ಎಲ್ಲ ವಿಚಾರಗಳನ್ನು ರೈತ ಮುಖಂಡರು ಹೇಳಿದ್ದಾರೆ. ಹಳ್ಳಿ ಮಟ್ಟದಲ್ಲಿ ಅವರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾವು ಕೂಡ ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

English summary
Leader of the Opposition Siddaramaiah has discussed with the farmer leaders about the government's amendment to the Land Reform Act. Former CM Siddaramaiah said he had received the opinion of the farmer leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X