ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಯೋಜನೆ, 10 ಕೋಟಿ, 14 ಸಾವಿರ ಉದ್ಯೋಗ

By Mahesh
|
Google Oneindia Kannada News

ಬೆಂಗಳೂರು,ನ.20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ 33ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರಿನಲ್ಲಿ ನಡೆದ ಸಮಿತಿ ಸಭೆಯಲ್ಲಿ 10,044 ಕೋಟಿ ರು.ಗಳ ಬಂಡವಾಳ ಹೂಡಿಕೆ ಮತ್ತು 14,105 ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ 10 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ.

ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಎಸ್ ಆರ್ ಪಾಟೀಲ್, ಎಂ. ಬಿ. ಪಾಟೀಲ್, ಕೃಷ್ಣ ಭೈರೇಗೌಡ, ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಅಪರ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಹಾಗೂ ಎಂ. ಎನ್. ವಿದ್ಯಾಶಂಕರ್ ಅವರೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.

Siddaramaiah headed committee clears Rs 10,044 crore worth project

ಈ ಕೆಳಕಂಡ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ:
* ಮೆ.ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ರವರು ರೂ.6930.00 ಕೋಟಿಯ ಬಂಡವಾಳದೊಂದಿಗೆ ಹಾಲಿ ಇರುವ 10 ಎಮ್ ಟಿ ಪಿ ಎ ಘಟಕಕ್ಕೆ ಪೂರಕ ಸೌಲಭ್ಯಗಳನ್ನು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲೂಕಿನಲ್ಲಿ ಸ್ಥಾಪಿಸುತ್ತಿದ್ದು, ಇದರಿಂದ 313 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.
* ಮೆ.ರುಕೆಟ್ ರಿದ್ದಿ ಸಿದ್ದಿ ಪ್ರೈ ಲಿಮಿಟೆಡ್ ರವರು ರೂ.335.00 ಕೋಟಿಯ ಬಂಡವಾಳದೊಂದಿಗೆ ಮೇಜ್ ಸ್ಟಾರ್ಚ್ ಮತ್ತು ಇತರೆ ಪದಾರ್ಥಗಳ ತಯಾರಿಸುವ ಘಟಕವನ್ನು ಬೆಳಗಾಂ ಜಿಲ್ಲೆಯ, ಗೋಕಾಕ್ ತಾಲೂಕಿನಲ್ಲಿ ಸ್ಥಾಪಿಸುತ್ತಿದ್ದು, ಇದರಿಂದ 335 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.
* ಮೆ. ಇಂಟೆಲ್ ಟೆಕ್ನಾಲಜಿ ಇಂಡಿಯಾ ಪ್ರೈ ಲಿಮಿಟೆಡ್ ರವರು ರೂ.600.00 ಕೋಟಿಯ ಬಂಡವಾಳದೊಂದಿಗೆ ಆರ್ ಅಂಡ್ ಡಿ ಸೆಂಟರ್ ಘಟಕವನ್ನು ಬೆಂಗಳೂರು ನಗರ ಜಿಲ್ಲೆಯಲ್ಲ್ಲಿ ಸ್ಥಾಪಿಸುತ್ತಿದ್ದಾರೆ. ಇದರಿಂದ 4200 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.
* ಮೆ.ಖಾಯತಿ ಸ್ಟೀಲ್ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ರವರು ರೂ.235.00 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಟಿ ಎಮ್ ಟಿ ಬಾರ‍್ಸ್ ತಯಾರಿಸುವ ಘಟಕವನ್ನು ಮಂಡ್ಯ ಜಿಲ್ಲೆಯ, ಮದ್ದೂರು ತಾಲೂಕಿನಲ್ಲಿ ಸ್ಥಾಪಿಸುತ್ತಿದ್ದಾರೆ. ಇದರಿಂದ ಸುಮಾರು 320 ಜನರಿಗೆ ಉದ್ಯೋಗ ಲಭ್ಯವಾಗಲಿದೆ.
* ಮೆ. ಟೋಯೋಟಾ ಮಿತ್ಸುಬಿಷಿ ರವರು ರೂ.250.00 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ರೊಟೇಟಿಂಗ್ ಮೋಟರ‍್ಸ್ ಮತ್ತು ಪವರ್ ಎಲೆಕ್ಟ್ರಿಕಲ್ಸ್ ಇಕ್ಯುಪಮೆಂಟ್ ತಯಾರಿಸುವ ಘಟಕವನ್ನು ವಸಂತನರಸಾಪುರ, ಕೈಗಾರಿಕಾ ಪ್ರದೇಶ, ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸುತ್ತಿದ್ದು, ಇದರಿಂದ 548 ಜನರಿಗೆ ಉದ್ಯೋಗ ಲಭ್ಯವಾಗಲಿದೆ.
* ಮೆ. ವೋಲ್ವೋ ಇಂಡಿಯಾ ಪ್ರೈ ಲಿಮಿಟೆಡ್ ರವರು ರೂ.974.00 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಟ್ರಕ್ ಮತ್ತು ಬಸ್ ಗಳ ತಯಾರಿಕಾ ಘಟಕವನ್ನು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸುತ್ತಿದ್ದು, ಇದರಿಂದ 2125 ಜನರಿಗೆ ಉದ್ಯೋಗ ಲಭ್ಯವಾಗಲಿದೆ.

* ಆಟೋಮೊಬೈಲ್ ಕ್ಷೇತ್ರದ ಮೇಲೆ 974 ಕೋಟಿ ಹೂಡಿಕೆ 2125 ಉದ್ಯೋಗವಕಾಶ
* ಕೆಮಿಕಲ್ ಕ್ಷೇತ್ರದ ಮೇಲೆ 158 ಕೋಟಿ ಹೂಡಿಕೆ 303 ಉದ್ಯೋಗವಕಾಶ
* ಆಹಾರ ಸಂಬಂಧಿತ ಕ್ಷೇತ್ರದ ಮೇಲೆ 335 ಕೋಟಿ ಹೂಡಿಕೆ 1100 ಉದ್ಯೋಗವಕಾಶ
* ಕಬ್ಬಿಣ ಮತ್ತು ಉಕ್ಕು ಕ್ಷೇತ್ರದ ಮೇಲೆ 7165 ಕೋಟಿ ಹೂಡಿಕೆ 3433 ಉದ್ಯೋಗವಕಾಶ
* ಐಟಿ ಪಾರ್ಕ್ ಕ್ಷೇತ್ರದ ಮೇಲೆ 600 ಕೋಟಿ ಹೂಡಿಕೆ 4200 ಉದ್ಯೋಗವಕಾಶ
* ಸಕ್ಕರೆ ಕ್ಷೇತ್ರದ ಮೇಲೆ 242 ಕೋಟಿ ಹೂಡಿಕೆ 396 ಉದ್ಯೋಗವಕಾಶ
* ಇತರೆ ಕ್ಷೇತ್ರದ ಮೇಲೆ 570 ಕೋಟಿ ಹೂಡಿಕೆ 2548 ಉದ್ಯೋಗವಕಾಶ
* ಒಟ್ಟಾರೆ 10 ಕ್ಷೇತ್ರ 10044 ಕೋಟಿ ರು ಹೂಡಿಕೆ 14105 ಉದ್ಯೋಗವಕಾಶ

English summary
The Karnataka State High Level Clearance Committee headed by Chief Minister Siddaramaiah on Tuesday(Nov.19) night cleared 10 projects worth Rs 10,044 crore with a potential to generate 14,105 jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X