• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಂಡಿ ದುಡ್ಡು ಬೇಕು, ದೇವರು ಬೇಡಾಂದ್ರೆ ಹೇಗೆ ಮುಖ್ಯಮಂತ್ರಿಗಳೇ?

|

ಹಿಂದೂ ದೇವಾಲಯಗಳಿಗೆ ಮಾತ್ರ ಸೀಮಿತವಾಗಿರುವ ಧಾರ್ಮಿಕ ದತ್ತಿ, ಮುಜರಾಯಿ ಕಾನೂನಡಿಯಲ್ಲಿ ಸುಮಾರು 34 ಸಾವಿರಕ್ಕೂ ಹೆಚ್ಚು ದೇವಾಲಯಗಳು ಈ ಇಲಾಖೆಯ ವ್ಯಾಪ್ತಿಯಡಿಯಲಿ ಬರುತ್ತದೆ.

ಇದರಲ್ಲಿ ವಾರ್ಷಿಕ ಒಂದು ಕೋಟಿಗಿಂತಲೂ ಹೆಚ್ಚು ಆದಾಯವಿರುವ ಎ ಮತ್ತು ಬಿ ವರ್ಗಕ್ಕೆ ಸೇರಿರುವ ದೇವಾಲಯಗಳು ಅಂದಾಜು ಮುನ್ನೂರು. ಮಿಕ್ಕ ಎಲ್ಲಾ ದೇವಾಲಯಗಳು ಸರಕಾರ ನೀಡುವ ಅನುದಾನವನ್ನೇ ನಂಬಿಕೊಂಡಿದೆ. (ಗೊರವನಹಳ್ಳಿ ದೇಗುಲ ಸರ್ಕಾರದ ವಶಕ್ಕೆ)

ಎ ವರ್ಗಕ್ಕೆ ಸೇರಿದ, ಅದರಲ್ಲೂ ರಾಜ್ಯದ ಶ್ರೀಮಂತ ಹೆನ್ನೆರಡು ದೇವಾಲಯಗಳಿಂದ ಮಾತ್ರ ವಿವಿಧ ರೂಪಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಹರಿದು ಬರುತ್ತಿರುವ ದುಡ್ಡು ವಾರ್ಷಿಕ ಇನ್ನೂರು ಕೋಟಿಗಿಂತಲೂ ಹೆಚ್ಚು. (ಈ ಸುದ್ದಿಯನ್ನು ಒನ್ ಇಂಡಿಯಾ ಸುದ್ದಿದನಿ (podcast) ಮೂಲಕ ಕೇಳಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ)

ಅಧಿಕಾರಕ್ಕೆ ಬಂದಾಗಿನಿಂದ ಆಸ್ತಿಕನೋ, ನಾಸ್ತಿಕನೋ ಎನ್ನವ ಗೊಂದಲದ ಹೇಳಿಕೆಯನ್ನು ನೀಡುತ್ತಿರುವ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್ ನಲ್ಲಿ ದೇವ್ರನ್ನೇ ಮರೆತಿದ್ದಾರೆ.

ಆ ಮೂಲಕ, ಮಠಮಾನ್ಯಗಳ ಮೇಲೆ ಮತ್ತು ದೇವಾಲಯಗಳ ಅಭಿವೃದ್ದಿ, ಅರ್ಚಕರು, ಆಗಮಿಕರು, ದೇವಸ್ಥಾನಗಳಲ್ಲಿ ಕೆಲಸ ಮಾಡುವ ನೌಕರರ ಮೇಲೆ ಸಿದ್ದರಾಮಯ್ಯ ಸರಕಾರದ ಕಡೆಗಣನೆ ಮುಂದುವರಿದಿದೆ.

ಹುಂಡಿ ದುಡ್ಡು ಬೇಕು, ಆದರೆ ಬಜೆಟ್ ನಲ್ಲಿ ಮುಜರಾಯಿ ಇಲಾಖೆಗೆ ಚಿಕ್ಕಾಸು ಇಲ್ಲ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮುಂಗಡಪತ್ರದಲ್ಲಿ ಸಿದ್ದು

ಮುಂಗಡಪತ್ರದಲ್ಲಿ ಸಿದ್ದು

ಪ್ರತೀ ಬಜೆಟ್ ನಲ್ಲಿ ಮುಜರಾಯಿ ಇಲಾಖೆಗೆ ಸ್ವಲ್ಪ ಮಟ್ಟಿನ ಅನುದಾನವನ್ನು ನೀಡುವುದು ಪ್ರತೀ ಸರಕಾರ ಪಾಲಿಸಿಕೊಂಡು ಬರುತ್ತಿತ್ತು. ಆದರೆ ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ತುಂಬಿಸುವ ಮುಜರಾಯಿ ಇಲಾಖೆಗೆ ಅನುದಾನ ನೀಡುವುದಿರಲಿ, ಅದರ ಬಗ್ಗೆ ಕನಿಷ್ಠ ಪ್ರಸ್ತಾವನೆಯನ್ನೂ ಈ ಸಾಲಿನ ( 2016-17) ಮುಂಗಡಪತ್ರದಲ್ಲಿ ಸಿದ್ದರಾಮಯ್ಯ ಸರಕಾರ ಮಾಡಲಿಲ್ಲ.

ಸರಕಾರಕ್ಕೆ ಮನವಿ

ಸರಕಾರಕ್ಕೆ ಮನವಿ

ಎ ಮತ್ತು ಬಿ ವರ್ಗದ ದೇವಾಲಗಳಿಂದ ಬರುವ ಆದಾಯದಿಂದ ಸಿ ವರ್ಗದ ದೇವಾಲಯಗಳಿಗೆ ಅನುದಾನ ನೀಡಿ ಎಂದು ಅರ್ಚಕರು, ಆಗಮಿಕರು, ನೌಕರರು ಸರಕಾರಕ್ಕೆ ಬಜೆಟ್ ಮುನ್ನವೇ ಮನವಿ ಸಲ್ಲಿಸಿದ್ದರು.

ಇತರರಿಗೆ ಕೊಟ್ಟ ಸಿದ್ದುಗೆ, ದೇವಾಲಯ ನೆನಪಿಗೆ ಬರಲಿಲ್ಲ

ಇತರರಿಗೆ ಕೊಟ್ಟ ಸಿದ್ದುಗೆ, ದೇವಾಲಯ ನೆನಪಿಗೆ ಬರಲಿಲ್ಲ

ಮದರಸಗಳ ಆಧುನೀಕರಣ, ಹಜ್ ಭವನ, ಜೈನ ಬಸದಿ ಅಭಿವೃದ್ದಿಗೆ ಸಹಾಯಧನ ಘೋಷಿಸಿರುವ ಸರಕಾರ ಮುಜರಾಯಿ ದೇವಾಲಯಗಳ ಬಗ್ಗೆ ಚಕಾರೆತ್ತಲಿಲ್ಲ. ಇದು ಸ್ವಾಭಾವಿಕವಾಗಿ ಸಾರ್ವಜನಿಕರ ಆಕ್ರೋಶ ಮತ್ತು ಅಚ್ಚರಿಗೆ ಕಾರಣವಾಗಿದೆ.

ಸರಕಾರ ಘೋಷಿಸಿದ ಅನುದಾನ

ಸರಕಾರ ಘೋಷಿಸಿದ ಅನುದಾನ

2016-17ರ ಮುಂಗಡಪತ್ರದಲ್ಲಿ ಸರಕಾರ ಘೋಷಿಸಿದ ಅನುದಾನ ಹೀಗಿತ್ತು

ಮದರಸಗಳ ಆಧುನೀಕರಣ - 50 ಕೋಟಿ

ಹಜ್ ಭವನ ಪೂರ್ಣಗೊಳಿಸುವುದಕ್ಕೆ - 25 ಕೋಟಿ

ಜೈನ ಬಸದಿಗಳ ಅಭಿವೃದ್ದಿಗೆ - 5 ಕೋಟಿ

ಇದರ ಜೊತೆಗೆ ಬೌದ್ದ ದೇವಾಲಯಗಳ ಜೀರ್ಣೋದ್ದಾರಕ್ಕೆ ಸಹಾಯಧನ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ.

ಶ್ರೀಮಂತ ದೇವಾಲಯಗಳು

ಶ್ರೀಮಂತ ದೇವಾಲಯಗಳು

ಆದಾಯ ದೃಷ್ಟಿಯಿಂದ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಟಾಪ್ ಟೆನ್ ದೇವಾಲಯಗಳದ ಕುಕ್ಕೆ, ಕೊಲ್ಲೂರು, ಮಲೇ ಮಹಾದೇಶ್ವರ, ಚಾಮುಂಡೇಶ್ವರಿ, ಕಟೀಲು, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಸವದತ್ತಿ, ಮಂದರ್ತಿ ಮುಂತಾದ ದೇವಾಲಯಗಳಿಂದಲೇ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ನೂರೈವತ್ತು ಕೋಟಿಗಿಂತಲೂ ಅಧಿಕ ಹಣ ಹರಿದು ಬರುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Though, temples comes under Muzrai department generating more than 250+ crores annually to state government, Finance cum CM Siddaramaiah completely neglected the department in the 2016-17 budget.CM not allotted any funds to Muzrai department in the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more