• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದುಳಿದವರು, ದಲಿತರಿಗೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಭರ್ಜರಿ ಕೊಡುಗೆ

By Sachhidananda Acharya
|
   ಕರ್ನಾಟಕ ಬಜೆಟ್ 2018 : ದಲಿತರಿಗೆ ಸಿದ್ದರಾಮಯ್ಯನವರು ಕೊಟ್ಟ ಭರ್ಜರಿ ಕೊಡುಗೆಗಳು | Oneindia Kannada

   ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 2018-19ನೇ ಸಾಲಿನ ಬಜೆಟ್ ನಲ್ಲೂ ಅಹಿಂದ ಪ್ರೇಮ ಮುಂದುವರಿಸಿದ್ದಾರೆ. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಿರುವ ಸಿಎಂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.

   ಸಿದ್ರಾಮಣ್ಣ ಯಾರಿಗೆ ಏನು ಕೊಟ್ಟರು ಅನ್ನೋದರ ಪೈಸಾಪೈಸಾ ಲೆಕ್ಕ!

   ಬರೋಬ್ಬರಿ 4 ಗಂಟೆಗೂ ಹೆಚ್ಚು ಕಾಲ ಮ್ಯಾರಥಾನ್ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗದವರಿಗೆ ನೀಡಿದ ಕೊಡುಗೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

   ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಾತಿ

   ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಾತಿ

   ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ. 25ರಷ್ಟು ಸ್ಥಾನ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲು ಕ್ರಮ.

   ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಭೂ ಖರೀದಿ ಯೋಜನೆಯಡಿ ಘಟಕ ವೆಚ್ಚ 20 ಲಕ್ಷ ರೂ.ಗಳಿಗೆ ಹೆಚ್ಚಳ.

   ದೇವದಾಸಿಯರಿಗೆ ಸಹಾಯಧನ

   ದೇವದಾಸಿಯರಿಗೆ ಸಹಾಯಧನ

   ಭೂರಹಿತ ದೇವದಾಸಿಯರಿಗೆ ಭೂ ಖರೀದಿ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿ ಆದ್ಯತೆ ಮೇಲೆ ಸಾಲ ಮತ್ತು ಸಹಾಯಧನ ಸೌಲಭ್ಯ.

   5 ಕೋಟಿ ರೂ. ವೆಚ್ಚದಲ್ಲಿ 100 ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಹಕಾರ ಸಂಘಗಳಿಗೆ, ಗರಿಷ್ಠ 10 ಲಕ್ಷ ರೂ. ಗಳ ಮಿತಿಗೆ ಒಳಪಟ್ಟು ಸಂಘಗಳಲ್ಲಿ ಸದಸ್ಯರಿಂದ

   ಪಾವತಿಯಾದ ಷೇರು ಬಂಡವಾಳದ ಶೇ. 50ರಷ್ಟು ಸಹಾಯಧನ.

   ಪ್ರೋತ್ಸಾಹಧನ ಹೆಚ್ಚಳ

   ಪ್ರೋತ್ಸಾಹಧನ ಹೆಚ್ಚಳ

   ಐ.ಐ.ಟಿ / ಐ.ಐ.ಎಂ / ಐ.ಎಂ.ಎ. / ಐ.ಐ.ಎಸ್.ಸಿ / ಎನ್.ಐ.ಟಿ, ಮುಂತಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ.ಜಾತಿ / ಪ.ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನ 2 ಲಕ್ಷ ರೂ. ಗಳಿಗೆ ಹೆಚ್ಚಳ.

   ಪರಿಶಿಷ್ಟ ಜಾತಿ ಹುಡುಗ ಬೇರೆ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡರೆ, ಹಾಲಿ ನೀಡುತ್ತಿರುವ ಪ್ರೋತ್ಸಾಹ ಧನ 3 ಲಕ್ಷ ರೂ.ಗಳಿಗೆ ಹಾಗೂ ಪರಿಶಿಷ್ಟ ಜಾತಿಯ ಹುಡುಗಿ ಬೇರೆ ಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡರೆ ನೀಡುವ ಪ್ರೋತ್ಸಾಹಧನ 5

   ಲಕ್ಷ ರೂ.ಗಳಿಗೆ ಹೆಚ್ಚಳ. ಇದೇ ಮಾದರಿಯಲ್ಲಿ ದೇವದಾಸಿಯರ ಮಕ್ಕಳ ಮದುವೆಗೂ ಈ ಸೌಲಭ್ಯ.

   ಪರೀಕ್ಷಾ ಪೂರ್ವ ತರಬೇತಿ

   ಪರೀಕ್ಷಾ ಪೂರ್ವ ತರಬೇತಿ

   ರಾಷ್ಟ್ರಮಟ್ಟದ ವೈದ್ಯಕೀಯ/ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತಾಗಲು ಪರಿಶಿಷ್ಟ ಜಾತಿ/ ಪರಿಶಿಷ್ಟಪಂಗಡದ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ 100 ಬಾಲಕರು ಮತ್ತು 100 ಬಾಲಕಿಯರಿಗೆ ಬೆಂಗಳೂರಿನಲ್ಲಿ ವಿಶೇಷ ಪರೀಕ್ಷಾ ಪೂರ್ವ ತರಬೇತಿ.

   ಗ್ರಾಮೀಣ ಮತ್ತು ನಗರ ಪ್ರದೇಶಗಳ 680 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗೆ ಭೂ ಖರೀದಿ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಆದ್ಯತೆಯ ಮೇಲೆ ಸಾಲ ಮತ್ತು ಸಹಾಯಧನ ಸೌಲಭ್ಯ.

   ಪೌರ ಕಾರ್ಮಿಕರ ನಾಮನಿರ್ದೇಶನ

   ಪೌರ ಕಾರ್ಮಿಕರ ನಾಮನಿರ್ದೇಶನ

   ಬಿ.ಬಿ.ಎಂ.ಪಿ / ಮಹಾನಗರಪಾಲಿಕೆ / ನಗರಸಭೆ / ಪುರಸಭೆಗಳಿಗೆ ಪೌರ ಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯ ನಾಮನಿರ್ದೇಶನಕ್ಕೆ ಕ್ರಮ.

   ಅರಣ್ಯ ಅವಲಂಬಿತ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರು ಮಾಡಿರುವ ಜಮೀನು ಅಭಿವೃದ್ಧಿ ಪಡಿಸಲು ಕೃಷಿ ಯಂತ್ರೋಪಕರಣ, ನೀರಾವರಿ ಸೌಲಭ್ಯ, ಕಾಫಿ ಬೆಳೆಯಲು ಸೋಲಿಗ, ಜೇನುಕುರುಬ ಮತ್ತು ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶದ ಇತರೆ ಬುಡಕಟ್ಟು ಜನಾಂಗದವರಿಗೆ ಕಾಫಿ ಬೆಳೆಯಲು ಪ್ರೋತ್ಸಾಹ.

   ವಾಲ್ಮೀಕಿ ಅಧ್ಯಯನ ಕೇಂದ್ರ

   ವಾಲ್ಮೀಕಿ ಅಧ್ಯಯನ ಕೇಂದ್ರ

   ದೇವನಹಳ್ಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ. ಹಿರಿಯ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ ಸ್ವಾಮಿ, ಕೆ. ಪ್ರಭಾಕರ್ ಮತ್ತು ಕೆ. ಹೆಚ್. ರಂಗನಾಥ್ ಇವರುಗಳ ಹೆಸರಿನಲ್ಲಿ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಾಣ.

   ದಕ್ಕಲಿಗ, ಸುಡುಗಾಡು ಸಿದ್ದ ಮುಂತಾದ ಅಲೆಮಾರಿ/ ಅರೆ ಅಲೆಮಾರಿ / ಚಿಕ್ಕ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ವಿಶೇಷ ಅನುದಾನ.

   ಗುತ್ತಿಗೆಯಲ್ಲೂ ಅವಕಾಶ

   ಗುತ್ತಿಗೆಯಲ್ಲೂ ಅವಕಾಶ

   ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಕೆ.ಟಿ.ಪಿ.ಪಿ. ಕಾಯ್ದೆ ಅಡಿಯಲ್ಲಿ ಕಾಮಗಾರಿಗಳಿಗೆ ನಿಗದಿಪಡಿಸಿರುವ ಮಿತಿ ಒಂದು ಕೋಟಿ ರೂ. ವರೆಗೆ ಹೆಚ್ಚಳ.

   ಮಾತಂಗ ಮಹರ್ಷಿಗಳ ಸ್ಮರಣಾರ್ಥವಾಗಿ ಹಂಪಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಸ್ಥಾಪನೆ.

   ವಿಕಾಸಸೌಧದ ಸಮೀಪದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ ಸ್ವಂತ ಕಟ್ಟಡ, "ಡಾ. ಬಿ. ಆರ್. ಅಂಬೇಡ್ಕರ್ ಸ್ಫೂರ್ತಿ ಭವನ" ನಿರ್ಮಾಣ.

   ಕರ್ನಾಟಕ ಖಾದಿ ಮಂಡಳಿಯಲ್ಲಿ ಬಾಕಿ ಇರುವ ಎಲ್ಲಾ ಬಿ.ಪಿ.ಎಲ್ ಕುಟುಂಬಗಳ ಸಾಲವನ್ನು ಮನ್ನಾ

   ಪ.ಜಾ./ ಪ.ಪಂ. ಜನರು ಉದ್ಯಮಶೀಲರಾಗಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಇ.ಡಿ.ಪಿ. ತರಬೇತಿ /ಮಾಹಿತಿ ಕೇಂದ್ರ ಸ್ಥಾಪಿಸಿ ತರಬೇತಿಗೆ ಕ್ರಮ.

   ಭೋಜನ ವೆಚ್ಚ ಹೆಚ್ಚಳ

   ಭೋಜನ ವೆಚ್ಚ ಹೆಚ್ಚಳ

   ಆಶ್ರಮ ಶಾಲೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಭೋಜನ ವೆಚ್ಚ 100 ರೂ.ಗಳಷ್ಟು ಹೆಚ್ಚಿಸಿ ಕ್ರಮವಾಗಿ 1300ರೂ., 1500 ರೂ. ಮತ್ತು 1600 ರೂ.ಗಳಿಗೆ ನಿಗದಿ.

   ಸೋಲಿಗ, ಜೇನು ಕುರುಬ, ಕಾಡು ಕುರುಬ, ಇರುಳಿಗ, ಹಸಲರು, ಎರವ, ಕೋರಗ, ಹಕ್ಕಿಪಿಕ್ಕಿ, ಸಿದ್ಧಿ ಇತ್ಯಾದಿ ಆದಿವಾಸಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 300 ಕೋಟಿ ರೂ.

   ಅನುದಾನ.

   ಹುಣಸೂರು ಹಾಗೂ ಹೆಚ್.ಡಿ. ಕೋಟೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣ.

   ತಾಂಡ ಅಭಿವೃದ್ಧಿ ನಿಗಮದಿಂದ ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಸ್ವ-ಉದ್ಯೋಗ, ಗಂಗಾ ಕಲ್ಯಾಣ, ಸಾಲ ಸೌಲಭ್ಯ ಹಾಗೂ ಇತ್ಯಾದಿ ಕಾರ್ಯಕ್ರಮಗಳ ಅನುಷ್ಠಾನ

   ಸಂಗೊಳ್ಳಿ ಅಭಿವೃದ್ಧಿ

   ಸಂಗೊಳ್ಳಿ ಅಭಿವೃದ್ಧಿ

   ಸ್ವಾತಂತ್ರ ಯೋಧ ಸಂಗೊಳ್ಳಿ ರಾಯಣ್ಣನವರ ಜನ್ಮಸ್ಥಳವಾದ ಸಂಗೊಳ್ಳಿ ಮತ್ತು ಹುತಾತ್ಮರಾದ ನಂದಗಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 267 ಕೋಟಿ ರೂ. ಅನುದಾನ.

   ಶುಚಿ ಸಂಭ್ರಮ ಕಿಟ್ ಸೌಲಭ್ಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೂ ವಿಸ್ತರಣೆ.

   ಖಾಸಗಿ ಅನುದಾನಿತ ಅನಾಥಾಲಯಗಳ ವಿದ್ಯಾರ್ಥಿಗಳ ಊಟದ ವೆಚ್ಚದ ದರ ಮಾಹೆಯಾನ 800 ರೂ.ಗಳಿಗೆ ಹೆಚ್ಚಳ.

   ವಿದ್ಯಾಸಿರಿ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹೆಚ್ಚಳ

   ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನಪದರ ಆದಾಯ ಮಿತಿ 8 ಲಕ್ಷ ರೂ.ಗಳಿಗೆ ಹೆಚ್ಚಳ.

   ವಿದೇಶಿ ವ್ಯಾಸಾಂಗ

   ವಿದೇಶಿ ವ್ಯಾಸಾಂಗ

   ಉನ್ನತ ವ್ಯಾಸಂಗಕ್ಕಾಗಿ 150 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲು ಕ್ರಮ.

   ಹಿಂದುಳಿದ ವರ್ಗಗಳ 2000 ಅಭ್ಯರ್ಥಿಗಳಿಗೆ ಐ.ಎ.ಎಸ್., ಕೆ.ಎ.ಎಸ್., ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ವಿಶೇಷ ಕೋಚಿಂಗ್ ಸೌಲಭ್ಯ.

   ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ JEE, NEET, CA/ ICMA, CAT ಇತ್ಯಾದಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪರೀಕ್ಷಾ ಪೂರ್ವ ತರಬೇತಿ.

   ಪಿಎಚ್ ಡಿ ಅಧ್ಯಯನಕ್ಕೆ ಮಾಸಿಕ ವೇತನ

   ಪಿಎಚ್ ಡಿ ಅಧ್ಯಯನಕ್ಕೆ ಮಾಸಿಕ ವೇತನ

   ಪೂರ್ಣಾವಧಿ ಪಿ.ಹೆಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮಾಸಿಕ ವ್ಯಾಸಂಗ ವೇತನ ರೂ. 10,000 ರೂ.ಗಳಿಗೆ ಹೆಚ್ಚಳ.

   ಕೆ.ಐ.ಎ.ಡಿ.ಬಿ. ಮತ್ತು ಕೆ.ಎಸ್.ಎಸ್.ಐ.ಡಿ.ಸಿ.ಗಳಿಂದ ಕೈಗಾರಿಕಾ ಶೆಡ್‍ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ 2ಎ ಮತ್ತು ಪ್ರವರ್ಗ 2ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದು ಹಾಕಲು ಕ್ರಮ.

   ಅರಸು ಅಭಿವೃದ್ಧಿ ನಿಗಮ ಪುನರ್ ಸಂಘಟನೆ

   ಅರಸು ಅಭಿವೃದ್ಧಿ ನಿಗಮ ಪುನರ್ ಸಂಘಟನೆ

   ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪುನರ್ ಸಂಘಟನೆಗೆ ಕ್ರಮ.

   ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು ನಡೆಸುತ್ತಿರುವ ಖಾಸಗಿ ವಸತಿ ನಿಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ತಲಾ 5 ಲಕ್ಷ ರೂ. ಅನುದಾನ.

   ಹಿಂದುಳಿದ ಸಮುದಾಯಗಳಾದ ಸವಿತಾ ಸಮಾಜ, ತಿಗಳ, ಮಡಿವಾಳ ಮತ್ತು ಕುಂಬಾರರ ಆರ್ಥಿಕಾಭಿವೃದ್ಧಿಗೆ 100ಕೋಟಿ ರೂ.ಗಳ ಅನುದಾನ.

   ಸ್ವ ಉದ್ಯೋಗಕ್ಕಾಗಿ ಸಾಲ

   ಸ್ವ ಉದ್ಯೋಗಕ್ಕಾಗಿ ಸಾಲ

   ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ ವಾರ್ಷಿಕ ಶೇ. 6ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ.

   ಅತಿ ಹಿಂದುಳಿದ ಬುಡುಬುಡಿಕೆ, ಗೊಲ್ಲ, ಹೆಳವ, ಗೊಂದಳಿ, ಜೋಗಿ, ಶಿಕಲಿಗಾರ, ಪಿಚಗುಂಟಲ, ದೊಂಬಿದಾಸ ಇತ್ಯಾದಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.

   English summary
   Chief Minister Siddaramaiah’s AHINDA love continued in the 2018-19 budget. The Scheduled Castes, Scheduled Tribes, Backward Classes and Minorities, have contributed immensely in the budget.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X