ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಕಾರ್ ಬಳಿಕ ಹೈಟೆಕ್ ರೂಂ ಗಿಟ್ಟಿಸಿದ ಸಿದ್ದರಾಮಯ್ಯ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 11: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೈಟೆಕ್ ರೂಂ ಪಡೆದುಕೊಂಡಿದ್ದಾರೆ. ಈ ಕೋಣೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕಚೇರಿಗಿಂತಲೂ ಒಂದು ಕೈ ಮೇಲು ಎಂಬಂತೆ ವೈಭಯುತವಾಗಿದೆ.

ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ಐಶಾರಾಮಿ 125ನೇ ಕೋಣೆಯನ್ನೀಗ ಸಿದ್ದರಾಮಯ್ಯನವರಿಗೆ ನೀಡಲಾಗಿದೆ. ಇದೇ ರೂಂನ್ನು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಬಳಸುತ್ತಿದ್ದರು. ಅವರು ವಿಧಾನಸಭಾಧ್ಯಕ್ಷರಾಗಿದ್ದಾಗಲೇ ಈ ಕೋಣೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಖುದ್ದು ಆಸ್ಥೆ ವಹಿಸಿ ನವೀಕರಣ ಮಾಡಿದ್ದರು.

ಕಾಂಗ್ರೆಸ್ ಒಳಬೇಗುದಿಗೆ ಕ್ಯಾರೇ ಅನ್ನುತ್ತಿಲ್ಲವೇ ಸಿದ್ದರಾಮಯ್ಯ?ಕಾಂಗ್ರೆಸ್ ಒಳಬೇಗುದಿಗೆ ಕ್ಯಾರೇ ಅನ್ನುತ್ತಿಲ್ಲವೇ ಸಿದ್ದರಾಮಯ್ಯ?

ಈ ಕೋಣೆಯೀಗ ಸಿದ್ದರಾಮಯ್ಯನವರ ಪಾಲಾಗಿದೆ. ಹಾಗೆ ನೋಡಿದರೆ ಸ್ಪೀಕರ್ ರಮೇಶ್ ಕುಮಾರ್ ಎರಡು ವಾರಗಳ ಕೆಳಗೆ ಇದೇ ಕೋಣೆಯಲ್ಲಿ ಕೆಲಸ ಆರಂಭಿಸಿದ್ದರು. ಆದರೀಗ ಅವರು ಈ ಕೋಣೆಯನ್ನು ತೆರವು ಮಾಡಿ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟಿದ್ದಾರೆ. ಈ ಹಿಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಮುಂತಾದವರು ಬಳಸುತ್ತಿದ್ದ ರೂಂ ನಂಬರ್ 119ಕ್ಕೆ ಅವರು ಸ್ಥಳಾಂತರಗೊಂಡಿದ್ದಾರೆ.

Siddaramaiah gets Hy-tech room after costly car

ತಾರಾ ಮೆರುಗು

ಸಿದ್ದರಾಮಯ್ಯನವರಿಗೆ ಸಿಕ್ಕಿರುವ ಕೊಠಡಿ ಐಶಾರಾಮಿ ಹೋಟೆಲ್ ನ ಅನುಭವ ನೀಡುವಷ್ಟು ಭವ್ಯವಾಗಿದೆ. ಸುಖಾಸೀನ, ಹವಾನಿಯಂತ್ರಕ ವ್ಯವಸ್ಥೆ, ದುಬಾರಿ ಕುರ್ಚಿಗಳು, ಬೃಹತ್ ಎಲ್ ಇಡಿ ಪರದೆಗಳು, ಖಾಸಗಿ ಕೋಣೆ ಸೇರಿದಂತೆ ಪೂರ್ತಿ ಕೊಠಡಿ ಕಣ್ಣು ಕುಕ್ಕುವಂತಿದೆ.

ಮುಖ್ಯಮಂತ್ರಿಗಳ ಕೊಠಡಿ, ಸಚಿವ ಸಂಪುಟ ಸಭಾಂಗಣ ಮತ್ತು ಮೇಲ್ಮನೆ ಸ್ಪೀಕರ್ ಡಿ.ಎಚ್. ಶಂಕರಮೂರ್ತಿಯವರ ಕೊಠಡಿ ಬಿಟ್ಟರೆ ಇದೀಗ ಸಿದ್ದರಾಮಯ್ಯನವರಿಗೆ ಹೈಟೆಕ್ ಕೊಠಡಿ ಸಿಕ್ಕಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯವನರಿಗೆ ಈಗಾಗಲೇ ಮೊದಲ ಮಹಡಿಯಲ್ಲಿ ವಿಶಾಲವಾದ ಕೊಠಡಿ ಇದೆ. ಇದೀಗ ಅವರಿಗೆ ಮತ್ತೊಂದು ಭವ್ಯ ಕೊಠಡಿ ನೀಡಲಾಗಿದೆ.

ಕಾರ್ ಬೆನ್ನಲ್ಲೇ ಹೈಟೆಕ್ ಕೊಠಡಿ

ಇತ್ತೀಚೆಗೆ ಸಿದ್ದರಾಮಯ್ಯವರಿಗೆ ಕೋಟಿ ಬೆಲೆ ಬಾಳುವ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನು ಸಚಿವ ಕೆ.ಜೆ.ಜಾರ್ಜ್ ನೀಡಿದ್ದರು. ಇದೀಗ ಸಿದ್ದರಾಮಯ್ಯವನರು ಹೈಟೆಕ್ ಕೊಠಡಿ ಪಡೆದುಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

ಸಭಾಧ್ಯಕ್ಷರಾದ ರಮೇಶ್ ಕುಮಾರ್ ತಮ್ಮ ವಿವೇಚನಾ ಅಧಿಕಾರ ಪ್ರಯೋಗಿಸಿ ಈ ಕೊಠಡಿ ನೀಡಿದ್ದು ಅದರ ಮುಂದೆ, "ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಸಮನ್ವಯ ಸಮಿತಿ ಅಧ್ಯಕ್ಷರು" ಎಂಬ ಬೋರ್ಡ್ ತಗುಲಿ ಹಾಕಲಾಗಿದೆ.

English summary
Former CM of Karnataka and chairman of the coordination committee, Siddaramaiah, allotted the room of former speaker in Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X