ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ: ಸಿದ್ದರಾಮಯ್ಯ ಟೀಕೆ

|
Google Oneindia Kannada News

Recommended Video

ಆಡಿಯೋ ಕ್ಲಿಪ್ ವಿಷಯಕ್ಕೆ ಪ್ರಧಾನಿ ಮೋದಿ ಮೇಲೆ ಹರಿಹಾಯ್ದ ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಫೆಬ್ರವರಿ 8: ಆಪರೇಷನಲ್ ಕಮಲದ ಕುರಿತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಡಿಯೊ ಬಿಡುಗಡೆ ಮಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ, ಬಿಜೆಪಿಯ ಇತರೆ ವಿರೋಧ ಪಕ್ಷಗಳು ಅದರ ವಿರುದ್ಧ ವಾಗ್ದಾಳಿ ಆರಂಭಿಸಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಮೇಲೆ ಮುಗಿಬಿದ್ದಿದ್ದಾರೆ.

ಗುರುಮಿಟ್ಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯಲು ಮುಂದಾಗಿದ್ದ ಬಿಎಸ್‌ಯಡಿಯೂರಪ್ಪ ಅವರ ಸಂಭಾಷಣೆ ಇರುವ ಆಡಿಯೋವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋ ಕ್ಲಿಪ್​ ಸುಮಾರು 40 ನಿಮಿಷಗಳ ಅವಧಿಯದ್ದಾಗಿದೆ. ಗುರುಮಿಟ್ಕಲ್​ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ​ಈ ಸಂಭಾಷಣೆಯನ್ನು ರೆಕಾರ್ಡ್​ ಮಾಡಿಕೊಂಡು ತಮಗೆ ಕೊಟ್ಟಿದ್ದಾಗಿ ಕುಮಾರಸ್ವಾಮಿ ಹೇಳಿದ್ದರು.

ಕರ್ನಾಟಕ ವಿಧಾನಸಭೆ ಅಧಿವೇಶನ LIVE: ತಮ್ಮ ಧ್ವನಿಯ ಆಡೀಯೋಗೆ BSY ಪ್ರತಿಕ್ರಿಯೆ ಕರ್ನಾಟಕ ವಿಧಾನಸಭೆ ಅಧಿವೇಶನ LIVE: ತಮ್ಮ ಧ್ವನಿಯ ಆಡೀಯೋಗೆ BSY ಪ್ರತಿಕ್ರಿಯೆ

ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೊ ಅಸ್ತ್ರವನ್ನು ಬಳಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಎಂಬ ನುಡಿಯನ್ನು ಬಳಸಿಕೊಂಡಿರುವ ಸಿದ್ದರಾಮಯ್ಯ, ಬಿಜೆಪಿಯನ್ನು ಟೀಕಿಸಿದ್ದಾರೆ.

ನಿಯತ್ತನ್ನು ತೆರೆದಿಟ್ಟಿದೆ

'ನರೇಂದ್ರ ಮೋದಿ ಅವರೇ, ನಿಮ್ಮ ಪಕ್ಷದ 'ನಿಯತ್'ಅನ್ನು ಬಿಚ್ಚಿಟ್ಟಿರುವ ಆಡಿಯೊವನ್ನು ಕೇಳಿಸಿಕೊಳ್ಳಿ. ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ. ನಾಚಿಕೆಯಾಗಬೇಕು ನಿಮಗೆ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಉನ್ನತ ಮಟ್ಟದ ತನಿಖೆ ಅಗತ್ಯ

ಬಿಜೆಪಿಯ ನೈಜ ಮುಖವಾಡ ಬಯಲು ಮಾಡಲು ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರವನ್ನು ಕೆಡವಲು ಬಿಜೆಪಿ, ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪ ಅವರು ನಡೆಸಿದ ಸಂಚನ್ನು ಈ ಸಂಭಾಷಣೆ ಬಹಿರಂಗಪಡಿಸಿದೆ. ಅವರು ಅನುಸರಿಸುತ್ತಿರುವ ಸಂವಿಧಾನ ವಿರೋಧಿ ನಗ್ನ ನಡವಳಿಕೆ ಈಗ ಬಹಿರಂಗವಾಗಿದೆ. ಬಿಜೆಪಿಯ ನೈಜ ಮುಖವನ್ನು ತೆರದಿಡಲು ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ದಿನೇಶ್ ಹೇಳಿದ್ದಾರೆ.

ಶರಣಗೌಡ ಹಾಗೂ ಯಡಿಯೂರಪ್ಪ ನಡುವೆ ನಡೆದ ಸಂಭಾಷಣೆ ಏನು? ಶರಣಗೌಡ ಹಾಗೂ ಯಡಿಯೂರಪ್ಪ ನಡುವೆ ನಡೆದ ಸಂಭಾಷಣೆ ಏನು?

ನಾಚಿಕೆಗೇಡಿನ ಸಂಗತಿ

ಜೆಡಿಎಸ್‌ ಶಾಸಕರೊಬ್ಬರ ಮಗನ ಬಳಿ ಯಡಿಯೂರಪ್ಪನವರೇ ಹಣದ ಆಮಿಷವೊಡ್ಡಿ ಆಪರೇಷನ್‌ ಕಮಲ ಮಾಡ ಹೊರಟಿರುವುದು ಅತ್ಯಂತ ನಾಚಿಕೆಗೇಡಿನ‌ ಸಂಗತಿ. ಇಂದು ಮಾನ್ಯ ಮುಖ್ಯಮಂತ್ರಿಗಳು ಇದರ ನೈಜ ಧ್ವನಿಮುದ್ರಿಕೆಗಳನ್ನು ಬಿಡುಗಡೆ ಮಾಡಿ ಬಿಜೆಪಿಯ ನಿಜ ಬಣ್ಣ ಬಯಲು ಮಾಡಿದ್ದಾರೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

ನಿಮ್ಮ ನಾಯಕರಿಂದಲೇ ಕಪ್ಪು ಹಣದ ವ್ಯವಹಾರ

ಜೆಡಿಎಸ್‌ನ ಶಾಸಕರಿಗೂ ಕಾಂಗ್ರೆಸ್‌ನ ಶಾಸಕರಿಗೂ ಬಿಜೆಪಿ ದುಡ್ಡಿನ ಹಾಗೂ ಅಧಿಕಾರದ ಆಮಿಷ ತೋರಿಸಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಅವರೇ, ನಿಮ್ಮ ನಾಯಕರೇ ರಾಜಾರೋಷವಾಗಿ ಕಪ್ಪು ಹಣದ ವ್ಯವಹಾರ ಮಾಡುತ್ತಿದ್ದಾರೆ. ಇವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಾ? ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.

English summary
Former Chief Minister Siddaramaiah criticised BJP and PM Narendra Modi after Chief Minister HD Kumaraswamy released an audio clip on Operation Lotus. Dinesh Gundu Rao and Dr. G Parameshwar also slams BJP in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X