ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲೇ ಅಧಿವೇಶನ ನಡೆಯಲಿ: ಸಿದ್ದರಾಮಯ್ಯ ಆಗ್ರಹ

|
Google Oneindia Kannada News

Recommended Video

ಬೆಳಗಾವಿಯಲ್ಲೇ ಅಧಿವೇಶನ ನಡೆಯಲಿ ಎಂದ ಸಿದ್ದರಾಮಯ್ಯ | Siddaramaiah | Oneindia Kannada

ಬೆಂಗಳೂರು, ಸೆಪ್ಟೆಂಬರ್ 27: ಉಪಚುನಾವಣೆಯು ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಮುಂದಕ್ಕೆ ಹೋಗಿರುವ ಕಾರಣ ಅಧಿವೇಶನವನ್ನು ನಿಗದಿಯಂತೆ ಬೆಳಗಾವಿಯಲ್ಲೇ ನಡೆಸಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಅಧಿವೇಶನ ಬೆಳಗಾವಿಯಲ್ಲೇ ನಡೆಯಬೇಕು, ಕೂಡಲೇ ದಿನಾಂಕ ಘೋಷಣೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

ಅಕ್ಟೋಬರ್ 14 ರಿಂದ ಬೆಂಗಳೂರಲ್ಲೇ ಚಳಿಗಾಲದ ಅಧಿವೇಶನಅಕ್ಟೋಬರ್ 14 ರಿಂದ ಬೆಂಗಳೂರಲ್ಲೇ ಚಳಿಗಾಲದ ಅಧಿವೇಶನ

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳು ಚುರುಕಾಗಿ ಆಗುತ್ತಿಲ್ಲ ಇಂತಹಾ ಸಂದರ್ಭದಲ್ಲಿ ಬೆಳಗಾವಿಯ ಬದಲು ಬೆಂಗಳೂರಲ್ಲಿ ಸಮಾವೇಶ ನಡೆಸುವುದು ಸೂಕ್ತವಲ್ಲ. ಬೆಳಗಾವಿಯಲ್ಲೇ ಸಮಾವೇಶ ನಡೆದರೆ ಪರಿಹಾರ ಕಾರ್ಯಕ್ಕೆ ಚುರುಕು ನೀಡಿದಂತಾಗುತ್ತದೆ ಮತ್ತು ಸಂತ್ರಸ್ತರಲ್ಲೂ ಆಶಾಭಾವನೆ ಚಿಗುರುತ್ತದೆ ಎಂದರು.

Siddaramaiah Demand To Do Winter Session In Belgaum

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿಯೇ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯವನ್ನು ಮುರಿಯುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

11 ದಿನಗಳ ಬೆಳಗಾವಿ ಅಧಿವೇಶನಕ್ಕೆ ಖರ್ಚಾದ ಹಣವೆಷ್ಟು?11 ದಿನಗಳ ಬೆಳಗಾವಿ ಅಧಿವೇಶನಕ್ಕೆ ಖರ್ಚಾದ ಹಣವೆಷ್ಟು?

ಅಕ್ಟೋಬರ್ 14 ರಂದು ಬೆಂಗಳೂರಿನಲ್ಲಿಯೇ ಚಳಿಗಾಲದ ಅಧಿವೇಶನ ನಡೆಸಲು ದಿನಾಂಕ ನಿಗದಿ ಮಾಡಿ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಆದರೆ ಉಪಚುನಾವಣೆ ಘೋಷಣೆ ಆದ ಕಾರಣ ಅಧಿವೇಶನ ರದ್ದು ಮಾಡಲಾಗಿತ್ತು. ಈಗ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವ ಕಾರಣ ಹೊಸದಾಗಿ ಅಧಿವೇಶನದ ದಿನಾಂಕ ಘೋಷಣೆ ಆಗಬೇಕಿದೆ.

English summary
Siddaramaiah demand to do winter assembly session in Belgaum only. Government decided not to do winter session in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X