ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಮಹದಾಯಿ ಮೌನ ಮುರಿದ ಮೋದಿ: ಸಿದ್ದರಾಮಯ್ಯ ಟಾಂಗ್

By Nayana
|
Google Oneindia Kannada News

ಬೆಂಗಳೂರು, ಮೇ 5: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ಶೀಘ್ರವೇ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿಗೆ ನೇರ ಸವಾಲು ಹಾಕಿದ್ದಾರೆ.

ಗದಗದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಭಾಷಣದ ವೇಳೆ 2007ರಲ್ಲಿ ಸೋನಿಯಾಗಾಂಧಿ ಅವರು ಮಹದಾಯಿ ವಿವಾದ ಬಗೆ ಹರಿಸಲು ಅವಕಾಶ ನೀಡಿರಲಿಲ್ಲ ಎಂದು ದೂರಿರುವ ಹಿನ್ನೆಲೆಯಲ್ಲಿ ಮೋದಿ ಗದಗದಲ್ಲಿ ಭಾಷಣ ಮುಗಿದ ಕೂಡಲೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೋದಿಗೆ ಸವಾಲು ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತೂ ನೀವು ಮಹದಾಯಿ ಕುರಿತಾದ ಮೌನವನ್ನು ಮುರಿದಿದ್ದೀರಿ ಆದರೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯುವ ದೊಡ್ಡತನವನ್ನು ಪ್ರದರ್ಶಿಸಿ ಎಂದು ನೇರ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಪರ ಚಾಮುಂಡೇಶ್ವರಿಯಲ್ಲಿ ದರ್ಶನ್ ಪ್ರಚಾರಸಿದ್ದರಾಮಯ್ಯ ಪರ ಚಾಮುಂಡೇಶ್ವರಿಯಲ್ಲಿ ದರ್ಶನ್ ಪ್ರಚಾರ

Siddaramaiah challenges PM Modi resolve Mahadayi issue immediately

ಮಹದಾಯಿ ಸಮಸ್ಯೆ ಕುರಿತು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯುವ ಮೂಲಕ ನೀವು ಇಂದು ಗದಗದಲ್ಲಿ ಮಾತನಾಡಿರುವುದು ಕೇವಲ ಚುನಾವಣಾ ಭಾಷಣವಲ್ಲ ನಿಮಗೆ ನಿಜಕ್ಕೂ ಬದ್ಧತೆಯಿದೆ ಎಂಬುದನ್ನು ಸಾಭೀತುಪಡಿಸಬೇಕು ಎಂದು ಅವರು ಟ್ವಿಟ್ಟರ್‌ನಲ್ಲಿ ಸವಾಲು ಹಾಕಿದ್ದಾರೆ. ಹಾಗೂ ನಿಜಹೇಳಿ ಮೋದಿ ಎಂದು ಟ್ವಿಟ್ಟರ್ ಟ್ಯಾಗ್ ಕ್ರಿಯೇಟ್ ಮಾಡಿದ್ದಾರೆ.

ಚುನಾವಣಾ ವಿಡಿಯೋಗಳು

English summary
Chief minister Siddaramaiha has challenged prime minister Narendra Modi asking call Karanakke, Maharashtra and Goa chief ministers meeting on Mahadayi water dispute immediately rather made an election speech before the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X