ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಸಂಪುಟ ಸೇರಲು ಶಾಸಕರ ಲಾಬಿ

By Mahesh
|
Google Oneindia Kannada News

ಬೆಂಗಳೂರು, ಆ.27: ಉಪ ಚುನಾವಣೆಯ ಯಶಸ್ಸಿನ ನಂತರ ಸಿದ್ದರಾಮಯ್ಯ ಅವರಿಗೆ ಸಂಪುಟ ವಿಸ್ತರಣೆ ಬಿಸಿ ತಟ್ಟಿದೆ. ಇರುವ ನಾಲ್ಕು ಸ್ಥಾನಕ್ಕೆ ಕನಿಷ್ಠ 20 ಮಂದಿ ಶಿಫಾರಸು ಪತ್ರ ಹಿಡಿದುಕೊಂಡು ಬಂದಿದ್ದಾರೆ. ಜಾತಿವಾರು ಲಾಬಿ ಜೋರಾಗಿದ್ದು, ಆದ್ಯತೆ ಮೇರೆಗೆ ತಲಾ ಜಾತಿಗೊಬ್ಬರಂತೆ ಆಯ್ಕೆ ಮಾಡುವ ಸರ್ಕಸ್ ಇನ್ನೂ ಜಾರಿಯಲ್ಲಿದೆ.

ಲಿಂಗಾಯಿತ, ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿಯಿಂದ ತಲಾ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಇನ್ನೊಂದು ಸ್ಥಾನವನ್ನು ಕುರುಬ ಅಥವಾ ಇತರೆ ಹಿಂದುಳಿದ ಜಾತಿಗೆ ನೀಡುವ ಲೆಕ್ಕಾಚಾರ ನಡೆದಿದೆ. ಆದರೆ ಸಿದ್ದರಾಮಯ್ಯನವರು ಮೂರು ಸ್ಥಾನವನ್ನು ಭರ್ತಿ ಮಾಡಿ ಮಿಕ್ಕಿದ್ದನ್ನು ಪರಿಸ್ಥಿತಿ ನೋಡಿಕೊಂಡು ಮುಂದೆ ಹಂಚಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನದ ಹೊರತಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೆ ಒಪ್ಪುವುದಿಲ್ಲ ಎಂದು ಸಚಿವ ಸ್ಥಾನ ಆಕಾಂಕ್ಷಿಗಳೆಲ್ಲರ ಒಕ್ಕೊರಲ ಕೂಗಾಗಿರುವುದು ಸಿದ್ದರಾಮಯ್ಯಗೆ ಕಗ್ಗಂಟಾಗಿದೆ. [ಹಬ್ಬದ ಬಳಿಕ ಸಂಪುಟ ವಿಸ್ತರಣೆ]

ಪುನರ್ ರಚನೆಯಾಗಲಿ : ಸಂಪುಟ ವಿಸ್ತರಣೆಗಿಂತಲೂ ಸಂಪುಟ ಪುನಾರಚನೆ ಆಗಲೇಬೇಕೆಂದು ಹಿರಿಯ ಶಾಸಕರ ನಿಯೋಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಹಿರಿಯ ಶಾಸಕ ಮಾಲಿಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಶಾಸಕರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ, ಸಂಪುಟದಲ್ಲಿರುವ ಅದಕ್ಷ ಸಚಿವರನ್ನು ಕೈಬಿಟ್ಟು ಮುಕ್ತ ಹಾಗೂ ಸಮರ್ಥ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಪುನರ್ ರಚನೆಗೆ ಏಕೆ ಬಿಗಿ ಪಟ್ಟು

ಪುನರ್ ರಚನೆಗೆ ಏಕೆ ಬಿಗಿ ಪಟ್ಟು

ಸಂಪುಟದಲ್ಲಿ ಸುಮಾರು 15ಕ್ಕೂ ಹೆಚ್ಚು ಅಸಮರ್ಥ ಸಚಿವರಿದ್ದಾರೆ. ವಯೋಮಿತಿಯ ಕಾರಣಕ್ಕಾಗಿ ಕೆಲವು ಸಚಿವರಿಗೆ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ, ನೆನಪಿನ ಶಕ್ತಿ ಕಡಿಮೆಯಿದೆ. ಹೀಗಾಗಿ ಸರ್ಕಾರ ಚುರಕಾಗಿ ಕೆಲಸ ಮಾಡಲಾಗುತ್ತಿಲ್ಲ. ನಿರೀಕ್ಷೆಗಳೊಂದಿಗೆ ಜನ ಕಾಂಗ್ರೆಸ್ಸಿಗೆ ಬಹುಮತ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ್ ತಂಡ ಆಗ್ರಹಿಸಿದೆ.

ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಿದೆ

ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಿದೆ

ಕೆಲವು ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಇನ್ನು ಕೆಲವು ಜಿಲ್ಲೆಗಳಿಗೆ ಅವಕಾಶ ಸಿಕ್ಕಿಲ್ಲ. ಸಂಪುಟ ಪುನಾರಚನೆಯಾದ್ರೆ, ಸಿದ್ದರಾಮಯ್ಯ ಆವರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುವ ಹೊಸ ತಂಡ ಕಟ್ಟಬಹುದು. ಎಲ್ಲಾ ಜಿಲ್ಲೆಗೂ ಸಮಾನ ಆದ್ಯತೆ ಸಿಗಬೇಕಿದೆ ಎಂದು ಆಗ್ರಹಿಸಿದ್ದಾರೆ.

ಗುತ್ತೇದಾರ್ ತಂಡದ ಮನವಿಗೆ ಪುರಸ್ಕರಿಸಿರುವ ದಿಗ್ವಿಜಯ್ ಸಿಂಗ್ ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಅದರೆ, ಸರ್ಕಾರ ಪುನರ್ ರಚನೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಡಿಸಿಎಂ ರೇಸ್ ನಲ್ಲಿಲ್ಲ ಟಿಬಿ ಜಯಚಂದ್ರ

ಡಿಸಿಎಂ ರೇಸ್ ನಲ್ಲಿಲ್ಲ ಟಿಬಿ ಜಯಚಂದ್ರ

ಜಿ.ಪರಮೇಶ್ವರ್ ಗೆ ಡಿಸಿಎಂ ಹುದ್ದೆ ಕೊಡಬೇಕೆಂಬ ಹೆಸರು ಬಂದಾಗಲೇ ನನ್ನ ಹೆಸರೂ ಕೇಳಿ ಬರುತ್ತಿರುವುದು ಕಾಕತಾಳೀಯ. ಆದರೆ, ನಾನು ಯಾರಿಗೂ ರಾಜಕೀಯ ಸ್ಪರ್ಧಿಯಲ್ಲ. ಹೈಕಮಾಂಡ್ ಏನೇ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ ಎಂದು ಕಾನೂನು ಮತ್ತು ಸಂಸದೆಯ ವ್ಯವಹಾರ ಖಾತೆ ಸಚಿವ ಟಿಬಿ ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನಕ್ಕೆ ಆಗ್ರಹಿಸಿ ಬೆಂಬಲಿಗರ ಮುತ್ತಿಗೆ

ಸಚಿವ ಸ್ಥಾನಕ್ಕೆ ಆಗ್ರಹಿಸಿ ಬೆಂಬಲಿಗರ ಮುತ್ತಿಗೆ

ಬೀದರ್ ಜಿಲ್ಲೆಯ ಹುಮ್ನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಂಬಲಿಗರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗವೂ ಇತ್ತೀಚೆಗೆ ನಡೆದಿದೆ.

ಈ ರೀತಿ ಪ್ರಸಂಗಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಕೆಪಿಸಿಸಿಗೆ ದಿಗ್ವಿಜಯ್ ಸಿಂಗ್ ಸೂಚಿಸಿದ್ದಾರೆ.

ಬೀದರ್ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಸಾಕಷ್ಟು ಅನ್ಯಾಯವಾಗಿದೆ. ಅತ್ಯಂತ ಹಿಂದುಳಿದ ಈ ಜಿಲ್ಲೆಗೆ ಸಚಿವ ಸ್ಥಾನ ನೀಡಲೇಬೇಕು, ಮೂರು ಬಾರಿ ಶಾಸನ ಸಭೆಗೆ ಆಯ್ಕೆಯಾಗಿರುವ ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.

ಸಚಿವಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೀಗಿದೆ

ಸಚಿವಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೀಗಿದೆ

* ಡಾ. ಜಿ. ಪರಮೇಶ್ವರ್​ : ಡಿಸಿಎಂ ಹುದ್ದೆ ಅಥವಾ ಕಂದಾಯ
* ಮಾಲಿಕಯ್ಯ ಗುತ್ತೇದಾರ್,
* ವೀರಣ್ಣ ಮತ್ತಿಕಟ್ಟೆ
* ಬಿ. ಕೋಳಿವಾಡ
* ಮೋಟಮ್ಮ,
* ಎಚ್​. ವೈ. ಮೇಟಿ
* ಮಾಲಕರೆಡ್ಡಿ,
* ಎ. ಮಂಜು,
* ಅಶೋಕ್​ ಪಟ್ಟಣ್​
* ಚಿಮ್ಮನಕಟ್ಟಿ,
* ನರೇಂದ್ರ ಸ್ವಾಮಿ
* ಈಶ್ವರ್​ ಖಂಡ್ರೆ
* ಕೆ.ಎನ್​. ರಾಜಣ್ಣ,
* ಶಿವಶಂಕರ ರೆಡ್ಡಿ,
* ದುರ್ಯೋದನ ಐಹೋಳೆ

English summary
Siddaramaiah Cabinet Expansion : KPCC president G Parameshwara has been left alone to fight his case for the deputy chief minister's post as other Congress legislators are busy lobbying for themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X