ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ.ಶಿವಕುಮಾರ್ ಆಸೆಗೆ ತಣ್ಣೀರು ಹಾಕಿದ ಸಿದ್ದರಾಮಯ್ಯ?

|
Google Oneindia Kannada News

Recommended Video

ತನ್ನ ಪ್ರಾಬಲ್ಯ ಸಾಧಿಸಲು ಸಿದ್ದರಾಮಯ್ಯ ಹೀಗೆ ಮಾಡಿದ್ರಾ?

ಬೆಂಗಳೂರು, ಜೂನ್ 19: ಡಿ.ಕೆ.ಶಿವಕುಮಾರ್ ಅವರ ರಾಜಕೀಯದ ಆಸೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಣ್ಣೀರು ಸುರಿದಿದ್ದಾರೆ.

ಹೌದು, ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂಬ ಎಐಸಿಸಿ ನಿರ್ಣಯಕ್ಕೆ ಸಿದ್ದರಾಮಯ್ಯ ಅಡ್ಡ ಬಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಹೀನಾಯ ಸೋಲುಂಡ ಬಳಿಕ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಿ, ಕೆಪಿಸಿಸಿ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಕೊಡಬೇಕು ಎಂಬ ಚರ್ಚೆ ದೆಹಲಿ ಕಾಂಗ್ರೆಸ್ ಅಂಗಳದಲ್ಲಿ ಇತ್ತು. ಆದರೆ ಇದಕ್ಕೆ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿ ಇದನ್ನು ತಪ್ಪಿಸಿದ್ದಾರೆ ಎನ್ನಲಾಗುತ್ತಿದೆ.

ರಾಹುಲ್ ಭೇಟಿ ಮಾಡಿ ಸೋಲಿನ ಕಾರಣ ಕೊಟ್ಟ ಸಿದ್ದರಾಮಯ್ಯ! ರಾಹುಲ್ ಭೇಟಿ ಮಾಡಿ ಸೋಲಿನ ಕಾರಣ ಕೊಟ್ಟ ಸಿದ್ದರಾಮಯ್ಯ!

ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಪ್ರಭಾವ ತಗ್ಗುತ್ತದೆ ಎಂಬ ಆತಂಕದಿಂದಾಗಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಸಿಗಬಹುದಾಗಿದ್ದ ಈ ಪ್ರಮುಖ ಹುದ್ದೆಯನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿಯನ್ನು ವಿಸರ್ಜಿಸಿದ ಎಐಸಿಸಿ

ಕೆಪಿಸಿಸಿಯನ್ನು ವಿಸರ್ಜಿಸಿದ ಎಐಸಿಸಿ

ಹಾಗಾಗಿಯೇ ಇಂದು ಅಧ್ಯಕ್ಷ, ಕಾರ್ಯಾಧ್ಯಕ್ಷ ಹೊರತಾಗಿ ಇಡೀಯ ಕೆಪಿಸಿಸಿಯನ್ನು ವಿಸರ್ಜನೆ ಮಾಡಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಬದಲಾಯಿಸುವ ಎಐಸಿಸಿಯ ನಿರ್ಣಯಕ್ಕೆ ಸಿದ್ದರಾಮಯ್ಯ ಅಡ್ಡ ಬಂದಿದ್ದಾರೆ ಎನ್ನಲಾಗಿದೆ.

ಅಮಾನತ್ತಾದ ಶಾಸಕ ರೋಶನ್ ಬೇಗ್‌ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ ಅಮಾನತ್ತಾದ ಶಾಸಕ ರೋಶನ್ ಬೇಗ್‌ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ

ದಿನೇಶ್ ಗುಂಡೂರಾವ್‌ ಮೇಲೆ ಹಿರಿಯರ ದೂರು

ದಿನೇಶ್ ಗುಂಡೂರಾವ್‌ ಮೇಲೆ ಹಿರಿಯರ ದೂರು

ಕೆಲವು ನಾಯಕರ ಅಣತಿಯಂತೆ ಮಾತ್ರವೇ ದಿನೇಶ್ ಗುಂಡೂರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದೆ ಎಂದು ಕೆಲವು ಕಾಂಗ್ರೆಸ್ ಹಿರಿಯ ನಾಯಕರು ಹೈಕಮಾಂಡ್‌ಗೆ ದೂರು ನೀಡಿದ್ದರು. ಹಾಗಾಗಿ ದಿನೇಶ್ ಗುಂಡೂರಾವ್ ಅವರನ್ನು ಬದಲಾಯಿಸುವ ಪ್ರಯತ್ನ ನಡೆದಿತ್ತು.

ಎರಡು ದಿನಗಳಿಂದ ದೆಹಲಿಯಲ್ಲಿರುವ ಸಿದ್ದರಾಮಯ್ಯ

ಎರಡು ದಿನಗಳಿಂದ ದೆಹಲಿಯಲ್ಲಿರುವ ಸಿದ್ದರಾಮಯ್ಯ

ಇದೇ ಕಾರಣಕ್ಕೆ ಎರಡು ದಿನಗಳ ಹಿಂದೆಯೇ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಬಂದಿದ್ದ ಅವಕಾಶಕ್ಕೆ ಅಡ್ಡಗಾಲು ಹಾಕಿದ್ದಾರೆ. ಹಾಗಾಗಿಯೇ ರಾಹುಲ್ ಅವರು ಅಧ್ಯಕ್ಷ, ಕಾರ್ಯಾಧ್ಯಕ್ಷ ರನ್ನು ಉಳಿಸಿಕೊಂಡು ಉಳಿದ ಎಲ್ಲ ಪದಾಧಿಕಾರಿಗಳನ್ನು ವಿಸರ್ಜಿಸಿದ್ದಾರೆ.

ಕೆಪಿಸಿಸಿ ಪುನಾರಚನೆ : ದಿನೇಶ್ ಗುಂಡೂರಾವ್ ಹೇಳುವುದೇನು? ಕೆಪಿಸಿಸಿ ಪುನಾರಚನೆ : ದಿನೇಶ್ ಗುಂಡೂರಾವ್ ಹೇಳುವುದೇನು?

ಡಿ.ಕೆ.ಶಿವಕುಮಾರ್‌ ಅವರಿಗೆ ಆಸೆಯಿತ್ತು

ಡಿ.ಕೆ.ಶಿವಕುಮಾರ್‌ ಅವರಿಗೆ ಆಸೆಯಿತ್ತು

ಡಿ.ಕೆ.ಶಿವಕುಮಾರ್ ಅವರಿಗೂ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುವ ಆಸೆ ಇತ್ತು, ಪ್ರಬಲ, ಪ್ರಭಾವಿ, ಗಟ್ಟಿ ನಿರ್ಣಯದ ರಾಜಕಾರಣಿ ಆಗಿರುವ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾಗಿಯೂ ಇದ್ದರು. ಆದರೆ ಸಿದ್ದರಾಮಯ್ಯ ಅವರು ಡಿ.ಕೆ.ಶಿ ಅವರಿಂದ ಅವಕಾಶ ಕಿತ್ತುಕೊಂಡಿದ್ದಾರೆ.

English summary
AICC decided to give KPCC president post to minister DK Shivakumar. But sources said that Siddaramaiah blocks the opertunity of DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X