ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸ ತಿರುಚಿ ವಂಚಿಸುವವರು ಬಿಜೆಪಿಯವರು: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 06: "ಇತಿಹಾಸ ತಿರುಚಿ, ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ವಂಚಿಸುವುದೇ ಬಿಜೆಪಿ ನಾಯಕರ ಇತ್ತೀಚಿನ ಸಾಧನೆಯಾಗಿದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಬಿಜೆಪಿ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

"ಎಲ್ಲಿ ಅಧಿಕಾರ ವಿಕೇಂದ್ರೀಕೃತವಾಗಿರುತ್ತದೋ‌ ಅಲ್ಲಿ ಸಮಾಜದ ಎಲ್ಲ ವರ್ಗದ, ಸಮುದಾಯದ, ಜಾತಿ ಜನಾಂಗಗಳ ಜನರು ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯ. ಬಹುದೊಡ್ಡ ದುರಂತವೆಂದರೆ ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದವರಿಗೆ ಅಧಿಕಾರದ ವಿಕೇಂದ್ರೀಕರಣ ಸಿದ್ದಾಂತದಲ್ಲಿ ನಂಬಿಕೆಯಿಲ್ಲ" ಎಂದು ಅವರು ದೂರಿದರು.

ದೇವೇಗೌಡ-ಬಿಎಸ್ ವೈ ಒಳ ಒಪ್ಪಂದ ಏನಿದೆಯೋ ಎಂದ ಸಿದ್ದುದೇವೇಗೌಡ-ಬಿಎಸ್ ವೈ ಒಳ ಒಪ್ಪಂದ ಏನಿದೆಯೋ ಎಂದ ಸಿದ್ದು

ಬಿಜೆಪಿ ದೂರಿ ಸಿದ್ದರಾಮಯ್ಯ ಮಾಡಿದ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ.

ವಿಕೇಂದ್ರೀಕರಣ ಸಿದ್ಧಾಂತದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ

ವಿಕೇಂದ್ರೀಕರಣ ಸಿದ್ಧಾಂತದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ

"ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಮಾಡಿ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿದರು. ಎಲ್ಲಿ ಅಧಿಕಾರ ವಿಕೇಂದ್ರೀಕೃತವಾಗಿರುತ್ತದೋ‌ ಅಲ್ಲಿ ಸಮಾಜದ ಎಲ್ಲ ವರ್ಗದ, ಸಮುದಾಯದ, ಜಾತಿ ಜನಾಂಗಗಳ ಜನರು ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯ. ಬಹುದೊಡ್ಡ ದುರಂತವೆಂದರೆ ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದವರಿಗೆ ಅಧಿಕಾರದ ವಿಕೇಂದ್ರೀಕರಣ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಕೈಗೆ ಅಧಿಕಾರ ಸಿಗುವುದನ್ನು ಅವರು ಒಪ್ಪುವುದಿಲ್ಲ. ಇದಕ್ಕೆ ಅವರ ನಡವಳಿಕೆಗಳೆ ಸಾಕ್ಷಿ" - ಸಿದ್ದರಾಮಯ್ಯ

ಅವಕಾಶ ವಂಚಿತರಿಗೂ ಅಧಿಕಾರ ಸಿಗಬೇಕು

ಅವಕಾಶ ವಂಚಿತರಿಗೂ ಅಧಿಕಾರ ಸಿಗಬೇಕು

"ಸುಪ್ರೀಂ ಕೋರ್ಟ್ ರಾಮ ಜೋಯಿಸ್ ಅವರ ಮನವಿಯನ್ನು ಪುರಸ್ಕರಿಸಿದ್ದರೆ ಇಂದು ದಲಿತರು, ಮಹಿಳೆಯರು, ಹಿಂದುಳಿದ ವರ್ಗದವರು ಅವಕಾಶ ವಂಚಿತರಾಗಿ, ಅಧಿಕಾರವೆಲ್ಲ ಸಮಾಜದ ಮೇಲ್ವರ್ಗದ ಜನರ ಬಳಿಯೇ ಕೇಂದ್ರೀಕೃತವಾಗಿರುತ್ತಿತ್ತು" - ಸಿದ್ದರಾಮಯ್ಯ

"ಹೇಗಾದರೂ ಮತ್ತೆ ಸಿಎಂ ಆಗೋಕೆ ಸಿದ್ದರಾಮಯ್ಯ ಸರ್ವಪ್ರಯತ್ನ"

ಬಿಜೆಪಿಯವರು ಇತಿಹಾಸವನ್ನೇ ತಿರುಚುವವರು

ಬಿಜೆಪಿಯವರು ಇತಿಹಾಸವನ್ನೇ ತಿರುಚುವವರು

"ಇತಿಹಾಸದ ಬಗ್ಗೆ ಅರಿವಿಲ್ಲದವರು ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಬಿಜೆಪಿಯವರು ಇತಿಹಾಸವನ್ನೇ ತಿರುಚುವವರು, ಅಂಥವರಿಂದ ಭವಿಷ್ಯ ನಿರ್ಮಾಣ ಸಾಧ್ಯವಿದೆಯೇ?" - ಸಿದ್ದರಾಮಯ್ಯ

ವಂಚಿಸುವುದೇ ಬಿಜೆಪಿ ನಾಯಕರ ಇತ್ತೀಚಿನ ಸಾಧನೆ

ವಂಚಿಸುವುದೇ ಬಿಜೆಪಿ ನಾಯಕರ ಇತ್ತೀಚಿನ ಸಾಧನೆ

"ಸೌಹಾರ್ದತೆಯ ಬಗ್ಗೆ ನನಗೆ ಪಾಠ ಮಾಡುವ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ರಾಜ್ಯದಲ್ಲಿ ನಾರಾಯಣ ಗುರು ಜಯಂತಿ ಆಚರಣೆಯನ್ನು ಜಾರಿಗೊಳಿಸಿದವರು ಯಾರು ಎಂದು ಗೊತ್ತಿದೆಯೇ? ಇತಿಹಾಸ ತಿರುಚಿ, ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ವಂಚಿಸುವುದೇ ಬಿಜೆಪಿ ನಾಯಕರ ಇತ್ತೀಚಿನ ಸಾಧನೆಯಾಗಿದೆ" - ಸಿದ್ದರಾಮಯ್ಯ

ಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠ: ಸಿದ್ದು ಗುಡುಗುಪಕ್ಷಕ್ಕೆ ದ್ರೋಹ ಬಗೆದು ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠ: ಸಿದ್ದು ಗುಡುಗು

English summary
Former Chief Minister Siddaramaiah Blames BJP on Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X