ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವರ್ಕರ್ ಬಿಟ್ಟು 'ಸಗಣಿ' ಹಿಂದೆ ಬಿದ್ದ ಸಿದ್ದರಾಮಯ್ಯ, ಬಿಜೆಪಿ

|
Google Oneindia Kannada News

Recommended Video

Siddaramaiah And BJP Leaders Tweet War Continues Over Veer Savarka

ಅಧಿಕಾರಕ್ಕೆ ಬಂದರೆ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದು ಬಿಜೆಪಿ, ಮಹಾರಾಷ್ಟ್ರ ಅಸೆಂಬ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು.

ಅಲ್ಲಿಂದ ಆರಂಭವಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ, ಟ್ವೀಟ್ ಪ್ರವಾಹ ದಿನದಿಂದ ದಿನಕ್ಕೆ ಒಂದೊಂದು ಆಯಾಮಕ್ಕೆ ಸಾಗುತ್ತಲೇ ಇದೆ.

ಕೊನೆಗೂ, ಜ್ಯೋತಿಷ್ಯ, ಭವಿಷ್ಯದ ಮೊರೆ ಹೋದ ಸಿದ್ದರಾಮಯ್ಯ?ಕೊನೆಗೂ, ಜ್ಯೋತಿಷ್ಯ, ಭವಿಷ್ಯದ ಮೊರೆ ಹೋದ ಸಿದ್ದರಾಮಯ್ಯ?

ಇವೆಲ್ಲದರ ನಡುವೆ ಸಿದ್ದರಾಮಯ್ಯ, ವೀರ ಸಾವರ್ಕರ್ ವಿಚಾರವನ್ನು ಬಿಟ್ಟು, ಸಗಣಿಯ ವಿಷಯವನ್ನು ಕೆದಕಿ, ಬಿಜೆಪಿ ಮುಖಂಡರನ್ನು ಟೀಕಿಸಿದ್ದರು.

ಸಿದ್ದರಾಮಯ್ಯನವರ ಎಲ್ಲಾ ಟ್ವೀಟಿಗೆ ಉತ್ತರ ನೀಡುತ್ತಲೇ ಬರುತ್ತಿದ್ದ ಬಿಜೆಪಿ ಮುಖಂಡರು, ಸಗಣಿ ಟ್ವೀಟಿಗೂ ತಿರುಗೇಟು ನೀಡಿದ್ದಾರೆ.

ಆರ್ ಎಸ್ ಎಸ್ ನವರು ಸಗಣಿ ಎತ್ತಿ, ಬೆರಣಿ ತಟ್ಟಿದ್ದಾರಾ?

ಆರ್ ಎಸ್ ಎಸ್ ನವರು ಸಗಣಿ ಎತ್ತಿ, ಬೆರಣಿ ತಟ್ಟಿದ್ದಾರಾ?

"ಗೋ ಸಂರಕ್ಷಣೆಯ ಹೆಸರಿನಲ್ಲಿ ಇಂದು ಗುಂಪು ಹತ್ಯೆಗಳು ನಡೆಯುತ್ತಿವೆ. ಎಂದಾದರೂ ಆರ್ ಎಸ್ ಎಸ್ ನವರು ಸಗಣಿ ಎತ್ತಿ, ಬೆರಣಿ ತಟ್ಟಿದ್ದಾರಾ? ಅವರೆಲ್ಲಾ ಗೋವಿನ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಸಿದ್ದರಾಮಯ್ಯ, ಬಿಜೆಪಿಯವರನ್ನು ಲೇವಡಿ ಮಾಡಿದ್ದರು.

ಸಿದ್ದರಾಮಯ್ಯ ಟ್ವೀಟಿಗೆ ಸಿ ಟಿ ರವಿ ತಿರುಗೇಟು

ಸಿದ್ದರಾಮಯ್ಯ ಟ್ವೀಟಿಗೆ ಸಿ ಟಿ ರವಿ ತಿರುಗೇಟು

ಸಿದ್ದರಾಮಯ್ಯ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ ಟಿ ರವಿ, "ಸಿದ್ದರಾಮಯ್ಯನವರು ಸಗಣಿ ಎತ್ತಿದವರು. ನಾನೂ ಸಗಣಿ ಎತ್ತಿದ್ದೇನೆ. ನನ್ನ ಮನಸ್ಸು ಗೋರಕ್ಷಣೆಯ ಕಡೆಗಿದೆ. ಆದರೆ, ಅವರ ಮನಸ್ಸು ಗೋಹತ್ಯೆ ಕಡೆಗಿದೆ. ಸಗಣಿ ಎತ್ತಿದಾಗ ಗೋವಿನ ಮೇಲಿರುವ ಪ್ರೀತಿ, ಅಧಿಕಾರ ಸಿಕ್ಕಾಗ ಬದಲಾಯಿತಾ? ಸಿದ್ದರಾಮಯ್ಯ ಗೋಮುಖ ವ್ಯಾಘ್ರರಾಗಬಾರದು" ಎಂದು ರವಿ ತಿರುಗೇಟು ನೀಡಿದ್ದಾರೆ.

ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್

ನೇಮಕಕ್ಕೆ ಸಂಘ ಪರಿವಾರದ ಹಿನ್ನೆಲೆ

ನೇಮಕಕ್ಕೆ ಸಂಘ ಪರಿವಾರದ ಹಿನ್ನೆಲೆ

ಇದಕ್ಕೂ ಮೊದಲು ಕೆಪಿಸಿಸಿ, "ರಾಜ್ಯ ಸರ್ಕಾರದ ಅಕಾಡೆಮಿಗಳ ನೇಮಕಾತಿ ನೋಡಿದರೆ ಬಹುತೇಕರ ಆಯ್ಕೆಯು ಭಟ್ಟಂಗಿಗಳಿಗೆ ನೀಡಿದ ಸಮಾಧಾನಕರ ಬಹುಮಾನದಂತಿದೆ. ಸಾಮಾಜಿಕ ನ್ಯಾಯ, ಭೌಗೋಳಿಕ ನ್ಯಾಯ ಪಾಲಿಸಲಾಗಿಲ್ಲ. ನೇಮಕಕ್ಕೆ ಸಂಘ ಪರಿವಾರದ ಹಿನ್ನೆಲೆಯನ್ನು ಮಾತ್ರ ಪರಿಗಣಿಸಿದಂತಿದ್ದು; ಜ್ಞಾನ, ಅನುಭವ, ಕ್ಷಮತೆ, ಕೌಶಲ್ಯತೆ & ಹಿರಿತನವನ್ನು ಕಡೆಗಣಿಸಿದಂತಿದೆ" ಎಂದು ಟ್ವೀಟ್ ಮಾಡಿತ್ತು.

ಸಚಿವ ರವಿ ತಿರುಗೇಟು

ಸಚಿವ ರವಿ ತಿರುಗೇಟು

ಇದಕ್ಕೂ ಸಚಿವ ರವಿ ತಿರುಗೇಟು ನೀಡಿದ್ದು ಹೀಗೆ, " ದಯಾನಂದ ಕತ್ತಲಸಾರ್, ಮಂಜಮ್ಮ ಬಿ. ಜೋಗತಿ, ಟಿ. ಎಸ್. ನಾಗಾಭರಣ, ಪ್ರೊ. ಎಂ.ಎ. ಹೆಗಡೆ, ಡಾ. ಟಿ.ಬಿ. ಸೊಲಬಕ್ಕನವರ ಇವರೆಲ್ಲಾ ಏನು ಭಟ್ಟಂಗಿಗಳೇ?"

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಸಾಯಿಸಿದವರ ಬಗ್ಗೆ ಹೇಳಿದರೆ @CTRavi_BJP ಯಾಕೆ ಹೆಗಲು ಮುಟ್ಟಿನೋಡಿಕೊಳ್ತಿದ್ದಾರೆ ಎಂದು ಅರ್ಥವಾಗಿಲ್ಲ. ನಾನು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು.

English summary
Karnataka Opposition Leader Siddaramaiah And BJP Leaders Tweet War Continues Over Veer Savarkar Now Going Other Direction, Cow And RSS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X