ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಏಕೆ ಸೇರಿಕೊಂಡ್ರಿ? ಡಿವಿಎಸ್‌ಗೆ ಸಿದ್ದರಾಮಯ್ಯ ಮತ್ತೆ ಗುದ್ದು

|
Google Oneindia Kannada News

ಬೆಂಗಳೂರು, ಜನವರಿ 1: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಡಿ.ವಿ. ಸದಾನಂದಗೌಡ ನಡುವಿನ ಟ್ವಿಟ್ಟರ್ ವಾಗ್ವಾದ ಮುಂದುವರಿದಿದೆ.

'ಸಿದ್ದರಾಮಯ್ಯ ಅವರ ಗಮನಕ್ಕೆ' ಎಂದು ಡಿ.ವಿ. ಸದಾನಂದಗೌಡ ಐದು ಸಂಗತಿಗಳನ್ನು ಟ್ವಿಟ್ಟರ್‌ನಲ್ಲಿ ಮುಂದಿಟ್ಟಿದ್ದರು. ಈ ಮೂಲಕ ಸೋತರೂ ಕಾಂಗ್ರೆಸ್ ಅಧಿಕಾರ ನಡೆಸಲು ಪ್ರಯತ್ನಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದು ವ್ಯಂಗ್ಯವಾಡಿದ್ದರು.

11 ತಿಂಗಳಲ್ಲೇ ಓಡಿಹೋದವರು ನೀವು: ಡಿವಿಎಸ್‌ಗೆ ಸಿದ್ದರಾಮಯ್ಯ ಟಾಂಗ್11 ತಿಂಗಳಲ್ಲೇ ಓಡಿಹೋದವರು ನೀವು: ಡಿವಿಎಸ್‌ಗೆ ಸಿದ್ದರಾಮಯ್ಯ ಟಾಂಗ್

ಇದಕ್ಕೆ ಕೆರಳಿರುವ ಸಿದ್ದರಾಮಯ್ಯ, ಸದಾನಂದಗೌಡರಿಗೆ ತಿರುಗೇಟು ನೀಡಿದ್ದಾರೆ. ಗೌಡರು ಪ್ರಸ್ತಾಪಿಸಿದ ಒಂಬತ್ತು ವಿಚಾರಗಳಿಗೆ ಪ್ರತಿಕ್ರಿಯೆ ಎಂಬಂತೆ ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅಲ್ಲದೆ, 'ಕೊಟ್ಟು ಕುದುರೆಯನು ಏರಲಾರದವನು' ಎಂಬ ಪ್ರಶ್ನೆಯನ್ನು ನಿಮಗೇ ಕೇಳುತ್ತಿದ್ದೇನೆ. ಕೊಟ್ಟ ಕುದುರೆಯನ್ನು ಯಾಕೆ ಏರಿಲ್ಲ ಹೇಳಿ? ಎಂದು 11 ತಿಂಗಳಿಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿದ ಸದಾನಂದ ಗೌಡರನ್ನು ಕೆಣಕಿದ್ದಾರೆ.

ಮುಂಡಾಸು ಮೂವತ್ತು ಮೊಳ

ಪ್ರಿಯ ಸದಾನಂದಗೌಡ ಅವರೇ, ಊಟ ಮಾಡಿದ್ದೀರಾ? ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದನಂತೆ ಹಳೆಯ ಕಾಲದ ಜಾಣನೊಬ್ಬ. ಹಂಗಾಯ್ತು ನಿಮ್ ಕತೆ. ನಿಮ್ಮದೇ ಪ್ರಶ್ನೆ ನಿಮಗೆ: ಕೊಟ್ಟ ಕುದುರೆ ಯಾಕೆ ಏರಿಲ್ಲ ಹೇಳಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸ್ಥಾನ ಏಕೆ ಕಿತ್ತುಕೊಂಡ್ರು?

1. ಹನ್ನೊಂದು ತಿಂಗಳಿಗೆ ಮುಖ್ಯಮಂತ್ರಿ ಸ್ಥಾನವನ್ನು ನಿಮ್ಮಿಂದ ಯಾಕೆ ಕಿತ್ತುಕೊಂಡ್ರು? 2. ಒಂದೇ ವರ್ಷಕ್ಕೆ ರೈಲ್ವೆ ಖಾತೆ ಯಾಕೆ ಕಿತ್ತುಕೊಂಡ್ರು? 3.ಇನ್ನೊಂದು ವರ್ಷಕ್ಕೆ ಕಾನೂನು ಖಾತೆಯನ್ನು ನಿಮ್ಮಿಂದ ಯಾಕೆ ಕಿತ್ತುಕೊಂಡ್ರು? ಎಂದು ಒಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಾಸಕರಿಗೆ ಕೋಟ್ಯಂತರ ಹಣದ ಆಮೀಷ ಒಡ್ಡುತ್ತಿದೆ ಬಿಜೆಪಿ: ಸಿದ್ದರಾಮಯ್ಯಶಾಸಕರಿಗೆ ಕೋಟ್ಯಂತರ ಹಣದ ಆಮೀಷ ಒಡ್ಡುತ್ತಿದೆ ಬಿಜೆಪಿ: ಸಿದ್ದರಾಮಯ್ಯ

ಬೆಂಗಳೂರು ಏಕೆ ಸೇರಿಕೊಂಡ್ರಿ?

4. ಮೊದಲು ಹುಟ್ಟೂರು ಪುತ್ತೂರು ಬಿಟ್ಟು, ನಂತರ ಉಡುಪಿ-ಚಿಕ್ಕಮಗಳೂರು ಬಿಟ್ಟು ಯಾಕೆ ಬೆಂಗಳೂರು ಸೇರಿಕೊಂಡ್ರಿ? ಕೊಟ್ಟ ಕುದುರೆ ಏರಲಾರದವರು.....?? ಎಂದು ಸದಾನಂದಗೌಡರು ತಮ್ಮ ಲೋಕಸಭಾ ಕ್ಷೇತ್ರಗಳನ್ನು ಬದಲಿಸಿದ್ದಕ್ಕೆ ಕೆಣಕಿದ್ದಾರೆ.

ಕೊಟ್ಟ ಕುದುರೆಯನ್ನು ಏರಲಾರದವ

ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ . ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕೊಳ್ಳಲು ಇದೊಂದು ಹೊಸ ಪ್ರಹಸನ ಮುಲಾಜಿನ ಸರಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿ , ಕನ್ನಡಿಗರು ಮುಗ್ಧರು, ಮೂರ್ಖರಲ್ಲ ನಿಮ್ಮ ಗಿಲೀಟು ಮಾತು ನಂಬಲು ಎಂದು ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸದಾನಂದ ಗೌಡ ತಿರುಗೇಟು ನೀಡಿದ್ದರು.

ಮುನಿಸು ಬದಿಗಿಟ್ಟು ಮಾಜಿ ಗೃಹ ಸಚಿವ-ಹಾಲಿ ಗೃಹ ಸಚಿವ ಭೇಟಿಮುನಿಸು ಬದಿಗಿಟ್ಟು ಮಾಜಿ ಗೃಹ ಸಚಿವ-ಹಾಲಿ ಗೃಹ ಸಚಿವ ಭೇಟಿ

English summary
Former Siddaramaiah again slammed Union Minister DV Sadananda Gowda in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X