ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮಿಶ್ರ ಸರ್ಕಾರ ಅಸ್ಥಿರ: ಸಿದ್ದು ತಲೆ ಮೇಲೆ ಜವಾಬ್ದಾರಿಯ ಮಣಭಾರ!

|
Google Oneindia Kannada News

Recommended Video

ಸಿದ್ದರಾಮಯ್ಯ ಕೆ ಸಿ ವೇಣುಗೋಪಾಲ್ ಮಹತ್ವದ ಭೇಟಿ | ಈ ಭೇಟಿಯ ಮುಖ್ಯಾಂಶಗಳು ಇಲ್ಲಿವೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಭೇಟಿಯ ಮುಖ್ಯಾಂಶವೇನು? ಅವರು ಚರ್ಚಿಸಿದ ವಿಷಯಗಳು ಯಾವವು?

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ, ಸಿದ್ದರಾಮಯ್ಯ ಕಾಂಗ್ರೆಸ್ ನ ಪ್ರಶ್ನಾತೀತ ನಾಯಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆಗಲೋ, ಈಗಲೋ ಎಂಬಂತೆ ಅಲ್ಲಾಡುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಸರಿದಾರಿಗೆ ತರುವುದಕ್ಕೆ ಸಿದ್ದರಾಮಯ್ಯ ಅವರಿಗೆ ಮಾತ್ರ ಸಾಧ್ಯ ಎಂಬ ನಿರ್ಧಾರಕ್ಕೂ ಕಾಂಗ್ರೆಸ್ ಹೈಕಮಾಂಡ್ ಬಂದಿದೆ.

ಅದರ ಫಲವೇ ಅವರು ಯುರೋಪಿನಿಂದ ಬರುವುದನ್ನೇ ಕಾಯುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಮತ್ತು ಅವರೊಂದಿಗೆ ಬಹು ಸಮಯ ಚರ್ಚೆ ನಡೆಸಿದ್ದು. ಸದ್ಯಕ್ಕೆ ಸಿದ್ದರಾಮಯ್ಯ ತಲೆಮೇಲೆ ಮಣಭಾರದ ಜವಾಬ್ದಾರಿಗಳಿವೆ.

ಹಠಾತ್ತನೆ ಬೆಂಗಳೂರಿಗೆ ಕೆ.ಸಿ.ವೇಣುಗೋಪಾಲ, ನಾಳೆ ಬಹು ಮಹತ್ವದ ಸಭೆ ಹಠಾತ್ತನೆ ಬೆಂಗಳೂರಿಗೆ ಕೆ.ಸಿ.ವೇಣುಗೋಪಾಲ, ನಾಳೆ ಬಹು ಮಹತ್ವದ ಸಭೆ

ಕಾಂಗ್ರೆಸ್ ನಿಂದ ಬಂಡಾಯ ಎದ್ದಿರುವ ಬಹುತೇಕ ಶಾಸಕರು ಸಿದ್ದರಾಮಯ್ಯ ಬಣದಲ್ಲೇ ಗುರಿತಿಸಿಕೊಂಡಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಿದ್ದರಾಮಯ್ಯ ಅವರಿಗಿಂತ ಸೂಕ್ತ ವ್ಯಕ್ತಿ ಬೇರೆ ಇಲ್ಲ ಎಂಬುದು ಹೈಕಮಾಂಡ್ ಭಾವನೆ.

ಅಷ್ಟಕ್ಕೂ ಸೆ.16 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ವಿಷಯಗಳೇನು? ಇಲ್ಲಿದೆ ಮುಖ್ಯಾಂಶ.

ಜಾರಕಿಹೊಳಿ ಸಹೋದರರನ್ನು ಸುಮ್ಮನಾಗಿಸಿ!

ಜಾರಕಿಹೊಳಿ ಸಹೋದರರನ್ನು ಸುಮ್ಮನಾಗಿಸಿ!

ಕಾಂಗ್ರೆಸ್ ಮುಖಂಡರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗವುವಂಥ ಯಾವುದೇ ನಡೆ ಇಡದಂತೆ ಎಚ್ಚರಿಕೆ ವಹಿಸುವಂತೆ ಸಿದ್ದರಾಮಯ್ಯ ಅವರಿಗೆ ವೇಣುಗೋಪಾಲ್ ಸೂಚಿಸಿದ್ದಾರೆ. 'ಜಾರಕಿಹೊಳಿ ಸಹೋದರರು ನಿಮ್ಮ (ಸಿದ್ದರಾಮಯ್ಯ) ಬಗ್ಗೆ ಸಾಕಷ್ಟು ಗೌರವ ಹೊಂದಿದ್ದು, ನಿಮ್ಮ ಮಾತಿಗೆ ಅವರು ಎದುರು ಮಾತನಾಡುವುದಿಲ್ಲ. ಆದ್ದರಿಂದ ನೀವೇ ಅವರನ್ನು ಸುಮ್ಮನಾಗಿಸಬೇಕು' ಎಂದು ವೇಣುಗೋಪಾಲ್ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆಯೂ ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಇಂಥ ಬೆಳವಣಿಗೆಗಳು ಪದೇ ಪದೇ ನಡೆಯದಂತೆ ನೋಡಿಕೊಳ್ಳಿ ಎಂದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರಿಗೆ ವೇಣುಗೋಪಾಲ್ ಸೂಚಿಸಿದ್ದಾರೆ.

ಸಿದ್ದು 'ಆಟ'ಕ್ಕೆ ಕೈ ಹಿಸುಕಿಕೊಳ್ಳುತ್ತಿವೆ ಜೆಡಿಎಸ್-ಕಾಂಗ್ರೆಸ್, ಸರಕಾರ ಬೀಳಿಸುತ್ತಾ ಬಿಜೆಪಿ?ಸಿದ್ದು 'ಆಟ'ಕ್ಕೆ ಕೈ ಹಿಸುಕಿಕೊಳ್ಳುತ್ತಿವೆ ಜೆಡಿಎಸ್-ಕಾಂಗ್ರೆಸ್, ಸರಕಾರ ಬೀಳಿಸುತ್ತಾ ಬಿಜೆಪಿ?

ಅಭಯ ನೀಡಿದ ಸಿದ್ದರಾಮಯ್ಯ

ಅಭಯ ನೀಡಿದ ಸಿದ್ದರಾಮಯ್ಯ

ವೇಣುಗೋಪಾಲ್ ಅವರ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಅತೃಪ್ತರನ್ನು ಸಮಾಧಾನ ಪಡಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ತಾವು ಜಾರಕಿಹೊಳಿ ಸಹೋದರರೊಂದಿಗೆ ಮಾತನಾಡಿ ಅವರ ಮನವೊಲಿಸುವುದಾಗಿ ಅವರು ಹೇಳಿದ್ದು, ಇಂದು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳುವ ಆತಂಕವಿಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ ಅವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ವಾಪಸ್, ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ!ಸಿದ್ದರಾಮಯ್ಯ ವಾಪಸ್, ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ!

ಸಿದ್ದರಾಮಯ್ಯ-ರಾಹುಲ್ ಗಾಂಧಿ ಭೇಟಿ?

ಸಿದ್ದರಾಮಯ್ಯ-ರಾಹುಲ್ ಗಾಂಧಿ ಭೇಟಿ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದಕ್ಕೆ ಸಮಯ ನಿಗದಿ ಮಾಡುವಂತೆ ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇಣುಗೋಪಾಲ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ರಾಹುಲ್ ಭೇಟಿಗೆ ಅವಕಾಶ ಮಾಡಿಕೊಡುವುದಾಗಿ ವೇಣುಗೋಪಾಲ್ ಅವರೂ ಭರವಸೆ ನೀಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.

ಮುನಿಸಿಕೊಂಡರಾ ಜಿ.ಪರಮೇಶ್ವರ್?

ಮುನಿಸಿಕೊಂಡರಾ ಜಿ.ಪರಮೇಶ್ವರ್?

ಸೆ.16 ರಂದು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಮಾಡಿ, ಪರಿಸ್ಥಿತಿ ತಣ್ಣಗಾಗಿಸುವಂತೆ ಮನವಿ ಮಾಡಿದರು. ಆದರೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಉಪಸ್ಥಿತರಿಲ್ಲದಿದ್ದುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಮೂವರೂ ಕಾಂಗ್ರೆಸ್ ಪಕ್ಷದ ಕಡೆಯಿಂದ ತೆರಳಿದ್ದರೆ, ಜಿ.ಪರಮೇಶ್ವರ್ ಅವರು ಸರ್ಕಾರದ ಕಡೆಯಿಂದ ನಂತರ ತೆರಳಿದ್ದರು ಎನ್ನಲಾಗುತ್ತಿದೆ.

ಆದರೆ ಕೆಲವು ಮಾಹಿತಿ ಪ್ರಕಾರ ಪರಮೇಶ್ವರ್ ಅವರ ಅನುಪಸ್ಥಿತಿಯಿಂದ ಇರಿಸುಮುರಿಸುಂಟಾಗಿ, ಸ್ವತಃ ವೇಣುಗೋಪಾಲ್ ಅವರೇ ಪರಮೇಶ್ವರ್ ಅವರಿಗೆ ಫೊನ್ ಮಾಡಿ ಸಿದ್ದರಾಮಯ್ಯ ಭೇಟಿಗೆ ಬರುವಂತೆ ಸೂಚಿಸಿದ್ದರು ಎನ್ನಲಾಗುತ್ತಿದೆ. ವೇಣುಗೋಪಾಲ್ ಸೂಚನೆಯ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಪರಮೇಶ್ವರ್ ಬಂದರು.

ಈ ಎಲ್ಲ ಪ್ರಹಸನಕ್ಕೂ ಮುಲಕಾರಣ ಸಿದ್ದರಾಮಯ್ಯ ಅವರೇ ಎಂಬ ಭಾವನೆ ಜಿ ಪರಮೇಶ್ವರ್ ಅವರಿಗಿದ್ದು, ಆದ್ದರಿಂದಲೇ ಅವರು ಸಿದ್ದು ಭೇಟಿಗೆ ಒಲವು ತೋರಿರಲಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.

ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ!

ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ!

ನಾವು ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ಅಕಸ್ಮಾತ್ ಸರ್ಕಾರ ಬಿದ್ದರೆ ಅದಕ್ಕೆ ನಮ್ಮನ್ನು ದೂರುವುದು ಬೇಡ. ಸರ್ಕಾರ ಬಿದ್ದರೆ ಅದಕ್ಕೆ ನಾವು ಹೊಣೆಯಲ್ಲ ಎಂದಿದ್ದಾರೆ. ಸಮ್ಮಿಶಸ್ರ ಸರ್ಕಾರ ಸುಭದ್ರವಾಗಿದೆ. ನಾವಂತೂ ಕಾಂಗ್ರೆಸ್ ಬಿಡೋಲ್ಲ. ಆದರೆ ಬೇರೆ ಯಾರಾದರೂ ಕಾಂಗ್ರೆಸ್ ತೊರೆದರೆ ಅದು ಅವರ ವೈಯಕ್ತಿಕ ವಿಚಾರ. ಅದಕ್ಕೆ ನಾವು ಹೊಣೆಯಲ್ಲ ಎಂದು ಅವರು ಹೇಳಿದ್ದಾರೆ.

English summary
Congress general secretary KC Venugopal instructs Former Chief miniter Siddaramaiah to pacify rebel leaders as well as Jarkiholy brothers. Here are highlights of their visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X