ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಪಕ್ಷೀಯರಿಂದಲೇ ಭಾರೀ ಟೀಕೆಗೆ ಒಳಗಾಗುತ್ತಿರುವ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಅ 24: ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಿದ ಮಾತಿಗೆ, ಕಾಂಗ್ರೆಸ್ ನಲ್ಲಿ ಭಾರೀ ಅಸಮಾಧಾನವೇ ಹೊರಬೀಳುತ್ತಿದೆ. ತನ್ನ ಮಾತು ತಿರುಗುಬಾಣವಾಗುತ್ತಿರುವುದನ್ನು ಅರಿತ ಸಿದ್ದರಾಮಯ್ಯ, ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಸಿದ್ದರಾಮಯ್ಯ ಹೇಳಿಕೆಗೆ ಬೇಸರ ವ್ಯಕ್ತ ಪಡಿಸಿದ್ದರು. "ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವುದಕ್ಕೆ ಶಾಸಕಾಂಗ ಪಕ್ಷದ ನಾಯಕರು ಉತ್ತರಿಸುತ್ತಾರೆ. ಬಹುಷಃ ಸೋನಿಯಾ ಗಾಂಧಿಯವರೇ ಅವರಿಗೆ (ಸಿದ್ದರಾಮಯ್ಯ) ಹೇಳಿರಬಹುದೇನೋ"ಎಂದು ಡಿಕೆಶಿ ಉತ್ತರಿಸಿದ್ದರು.

ಜಮೀರ್ ಅಹ್ಮದ್ ಆಡಿದ ಒಂದೇ ಮಾತಿಗೆ ಡಿ.ಕೆ.ಶಿವಕುಮಾರ್ ತಲ್ಲಣ!ಜಮೀರ್ ಅಹ್ಮದ್ ಆಡಿದ ಒಂದೇ ಮಾತಿಗೆ ಡಿ.ಕೆ.ಶಿವಕುಮಾರ್ ತಲ್ಲಣ!

ಡಿಕೆಶಿ ನಂತರ ಈಗ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರದಿ. "ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸಿಎಂ ಯಾರಾಗಬೇಕು ಎನ್ನುವುದರ ಬಗ್ಗೆ ಶಾಸಕರು ಮತ್ತು ಹೈಕಮಾಂಡ್ ನಿರ್ಧರಿಸುತ್ತಾರೆ. ಈ ವಿಚಾರ ಈಗ ಯಾಕೆ"ಎಂದು ಪ್ರಶ್ನಿಸಿದ್ದಾರೆ.

Siddaramaiah Again Becoming CM Statement, Senior Leader HK Patil Unhappy

"ಸಿದ್ದರಾಮಯ್ಯನವರು ತಮ್ಮನ್ನು ತಾನೇ ಹೈಕಮಾಂಡ್ ಅಂದುಕೊಂಡಿದ್ದಾರೆ. ಅದಕ್ಕೆ ತಾನು ಮುಖ್ಯಮಂತ್ರಿಯಾದರೆ ಹತ್ತು ಕೆಜಿ ಅಕ್ಕಿ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ನಾವು ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕಿದೆ"ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.

"ಯಾರೂ ಹಸಿವಿನಿಂದ ಮಲಗಬಾರದು, ಹೊಟ್ಟೆ ತುಂಬ ಊಟ ಮಾಡಬೇಕು.ಬರಗಾಲ, ಪ್ರವಾಹ ಏನೇ ಬರಲಿ, ಜನ ಹೊಟ್ಟೆ ತುಂಬ ಊಟ ಮಾಡಿ ನೆಮ್ಮದಿಯಿಂದ ಇರಬೇಕು. ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದು, ನಾನು ಸಿಎಂ ಆದರೆ 10 ಕಿಲೋ ಅಕ್ಕಿ ಕೊಡುತ್ತೇನೆ" ಎನ್ನುವ ಮಾತನ್ನು ಸಿದ್ದರಾಮಯ್ಯ ಬಾದಾಮಿಯಲ್ಲಿ ಆಡಿದ್ದರು.

ಸಿಎಂ ಬಿಎಸ್ವೈ ವಿರುದ್ದ ಲೆಕ್ಕಕ್ಕೂ, ಜಮೆಗೂ ಎರಡಕ್ಕೂ ಇಲ್ಲದ ಯತ್ನಾಳ್ ಹೇಳಿಕೆಯ ಹಿಂದಿನ ಅಘೋರ ಶಕ್ತಿ?ಸಿಎಂ ಬಿಎಸ್ವೈ ವಿರುದ್ದ ಲೆಕ್ಕಕ್ಕೂ, ಜಮೆಗೂ ಎರಡಕ್ಕೂ ಇಲ್ಲದ ಯತ್ನಾಳ್ ಹೇಳಿಕೆಯ ಹಿಂದಿನ ಅಘೋರ ಶಕ್ತಿ?

Recommended Video

Grama Panchayat ಚುನಾವಣೆಗೆ Green ಸಿಗ್ನಲ್!! | Oneindia Kannada

ಸಿದ್ದರಾಮಯ್ಯ ಮಾತಿಗೆ ಅವರ ಆಪ್ತರಾದ ಜಮೀರ್ ಅಹ್ಮದ್ ಖಾನ್ ಕೂಡಾ ಧ್ವನಿಗೂಡಿಸಿದ್ದರು. ಇದು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ, ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ"ಎಂದು ಹೇಳಿದ್ದಾರೆ.

English summary
Siddaramaiah Again Becoming CM Statement, Senior Leader HK Patil Unhappy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X