ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಚಿನ್ ಯೋಧರ ಕುಟುಂಬಕ್ಕೆ ಉಚಿತ ಬಸ್ ಪಾಸ್

|
Google Oneindia Kannada News

ಬೆಂಗಳೂರು, ಮಾರ್ಚ್ 05 : ಸಿಯಾಚಿನ್‌ನಲ್ಲಿ ಹುತಾತ್ಮರಾದ ಕನ್ನಡಿಗ ಯೋಧರ ಕುಟುಂಬಕ್ಕೆ ಕೆಎಸ್ಆರ್ ಟಿಸಿ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಸಿಯಾಚಿನ್ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದರು.

'ಮಾರ್ಚ್ 8ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಯೋಧರ ಕುಟುಂಬಗಳಿಗೆ ಬೆಂಗಳೂರಲ್ಲಿ ಗೌರವ ಸಲ್ಲಿಸಲಾಗುತ್ತದೆ. ಅಂದು ಯೋಧರ ಕುಟುಂಬದವರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ. [ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]

ramalinga reddy

ಕನ್ನಡ ನಾಡಿನ ಹೆಮ್ಮಯ ವೀರಪುತ್ರರಾದ ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ, ಹಾಸನ ಜಿಲ್ಲೆಯ ನಾಗೇಶ್ ಮತ್ತು ಎಚ್.ಡಿ.ಕೋಟೆಯ ಮಹೇಶ್ ಹಿಮಪಾತದಲ್ಲಿ ಹುತಾತ್ಮರಾಗಿದ್ದರು. [ಹುತಾತ್ಮರಾದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ]

ಯೋಧರ ಪತ್ನಿ, ಮಕ್ಕಳು ಹಾಗೂ ತಂದೆ-ತಾಯಿಗಳಿಗೆ ಕೆಎಸ್ಆರ್‌ಟಿಸಿ ಉಚಿತ ಪಾಸ್ ನೀಡುತ್ತಿದೆ, ಅವರು ಜೀವನ ಪರ್ಯಂತ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. [ಹಾಸನದ ನಾಗೇಶ್ ಗೆ ದುಃಖತಪ್ತ ವಿದಾಯ]

ಅಂದಹಾಗೆ ಕರ್ನಾಟಕ ಸರ್ಕಾರ ಮೂವರು ಯೋಧರ ಕುಟುಂಬಕ್ಕೆ ಕುಟುಂಬಕ್ಕೆ 25 ಲಕ್ಷ ನಗದು ಪರಿಹಾರ ನೀಡಿದೆ. ಅವರ ಸ್ವಂತ ಊರಿನಲ್ಲಿ ಒಂದು ನಿವೇಶನ ನೀಡುವುದಾಗಿ ಘೋಷಿಸಿದೆ.

English summary
Karnataka State Road Transport Corporation (KSRTC) will issue free bus pass for the family members of the soldiers who died in Siachen. Lance Hanamanthappa Naik, Mahesh from Mysuru, Nagesh from Hassan died in Siachen on February 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X