ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಜೈನಕಾಶಿಯಲ್ಲಿ ಸಮ್ಮೇಳನದ ಸಿದ್ಧತೆ

|
Google Oneindia Kannada News

ಹಾಸನ, ಜ.31 : 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಸಿಂಗಾರಗೊಂಡಿದೆ. ಇಂದು ಸಂಜೆ ಸಮ್ಮೇಳನಕ್ಕೆ ಪೂರ್ವ­ಭಾವಿಯಾಗಿ, ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರ ಮೆರವಣಿಗೆ ನಡೆಯಲಿದೆ. ಭಾನುವಾರ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಅವರು ಶುಕ್ರವಾರ ಶ್ರಮವಣಬೆಳಗೊಳಕ್ಕೆ ಆಗಮಿಸಿ, ವಾಸ್ತವ್ಯ ಹೂಡಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನ ಫೆ.1ರಿಂದ ಮೂರು ದಿನಗಳ ಕಾಲ ನಡೆಯಲಿದೆ. [ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಬಸ್ ವ್ಯವಸ್ಥೆ]

ಶ್ರವಣಬೆಳಗೊಳದ ವಿಂದ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ, ಡಾ.ಅ.ನ. ಕೃಷ್ಣರಾಯರ ಮಹಾಮಂಟಪ, ಭಗವಾನ್ ಬಾಹುಬಲಿ ಮಹಾದ್ವಾರಗಳು ಸಮ್ಮೇಳನಕ್ಕಾಗಿ ಸಿದ್ಧಗೊಂಡಿವೆ. [ಅಕ್ಷರ ಜಾತ್ರೆಗೆ ಸಾಕ್ಷಿಯಾಗಲಿದೆ ಹಾಸನ]

ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರ ಮೆರವಣಿಗೆ ಶನಿವಾರ ಸಂಜೆ 4 ಗಂಟೆಗೆ ಆರಂಭವಾಗಲಿದೆ. ಪಟ್ಟಣದ ಯಾತ್ರಿ ನಿವಾಸ್ ಮುಂಭಾಗದಿಂದ ಬಸ್ ನಿಲ್ದಾಣ, ಶ್ರೀಕಂಠನಗರದ ಮೂಲಕ ಪ್ರಧಾನ ವೇದಿಕೆಯನ್ನು ಮೆರವಣಿಗೆ ತಲುಪಲಿದೆ. ಸಮ್ಮೇಳನದ ಸಿದ್ಧತೆಯ ಚಿತ್ರಗಳು ಇಲ್ಲಿದೆ

ಶ್ರವಣಬೆಳಗೊಳಕ್ಕೆ ಬಂದ ಡಾ.ಸಿದ್ದಲಿಂಗಯ್ಯ

ಶ್ರವಣಬೆಳಗೊಳಕ್ಕೆ ಬಂದ ಡಾ.ಸಿದ್ದಲಿಂಗಯ್ಯ

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರು ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ್ದಾರೆ. ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳು ಸಿದ್ದಲಿಂಗಯ್ಯ ಅವರನ್ನು ಶ್ರವಣಬೆಳಗೊಳದಲ್ಲಿ ಬರಮಾಡಿಕೊಂಡರು.

ಜೈನಕಾಶಿಯಲ್ಲಿ ಸಿದ್ಧತೆ ಜೋರು

ಜೈನಕಾಶಿಯಲ್ಲಿ ಸಿದ್ಧತೆ ಜೋರು

ಫೆ.1ರಂದು ಸಿಎಂ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರ ಮೆರವಣಿಗೆ ಶನಿವಾರ ಸಂಜೆ 4 ಗಂಟೆಗೆ ಆರಂಭವಾಗಲಿದೆ. ವಿಂದ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಗಳು ಸಮ್ಮೇಳನಕ್ಕಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ

ಸಮ್ಮೇಳನದ ಮುಖ್ಯ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ಇಲ್ಲಿ ಮಾಡಲಾಗಿದೆ. ಅತ್ಯಾಧುನಿಕ ಧ್ವನಿವರ್ಧಕ, ದೂರದಲ್ಲಿ ಇರುವವರೂ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಶಾಲೆ, ಕಾಲೇಜುಗಳಿಗೆ ಮೂರು ದಿನಗಳ ರಜೆ

ಶಾಲೆ, ಕಾಲೇಜುಗಳಿಗೆ ಮೂರು ದಿನಗಳ ರಜೆ

ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಲು ಅನುಕೂಲವಾಗುವಂತೆ ಜ. 31ರಿಂದ ಫೆ. 3ರವರಗೆ ಹಾಸನ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸಾಹಿತ್ಯ ಸಮ್ಮೇಳನದ ಅಂಗವಾಗಿ ಪುಸ್ತಕ ಪ್ರಕಟಣಾ ಸಮಿತಿ ಜಿಲ್ಲೆಯ ವಿವಿಧ 20 ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಿದೆ.

ಶನಿವಾರ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ

ಶನಿವಾರ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಅವರ ಮೆರವಣಿಗೆ ಶನಿವಾರ ಸಂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಯಾತ್ರಿ ನಿವಾಸ್ ಮುಂಭಾಗದಿಂದ ಬಸ್ ನಿಲ್ದಾಣ, ಶ್ರೀಕಂಠನಗರದ ಮೂಲಕ ಪ್ರಧಾನ ವೇದಿಕೆಯನ್ನು ಮೆರವಣಿಗೆ ತಲುಪಲಿದೆ.

ಒಡೆಯರ್ ಪ್ರಧಾನ ವೇದಿಕೆ

ಒಡೆಯರ್ ಪ್ರಧಾನ ವೇದಿಕೆ

ಸಾಹಿತ್ಯ ಸಮ್ಮೇಳ­ನಕ್ಕಾಗಿ ನಿರ್ಮಿಸಿರುವ ವೇದಿಕೆಗೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. 40X80 ಅಡಿಯ ಭವ್ಯ ವೇದಿಕೆಯಲ್ಲಿ ಸಭಾಂಗಣ ಸಿದ್ಧವಾಗಿದೆ. ದೂಳು ಏಳ­ದಂತೆ ನೆಲಕ್ಕೆ ಹಸಿರು ಹಾಸು ಹಾಕಲಾ­ಗಿದೆ. ಸಭಾಂಗಣದ ಹೊರಭಾಗದಲ್ಲೂ ಟ್ರ್ಯಾಕ್ಟರ್‌ಗಳಲ್ಲಿ ನೀರು ತಂದು ಸುರಿಯ­ಲಾಗುತ್ತಿದೆ.

English summary
Preparations are in full swing for the 81st Kannada Sahitya Sammelana in Shravanabelagola, Hassan district. CM Siddaramaiah will inaugurate Sammelana on February 1, Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X