ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಡೋಸ್ ವ್ಯಾಕ್ಸಿನ್‌ಗಾಗಿ ಕಾಯುತ್ತಿರುವವರಿಗೆ ಶಾಂಕಿಂಗ್ ನ್ಯೂಸ್!

|
Google Oneindia Kannada News

ಬೆಂಗಳೂರು, ಜೂ. 07: ರೂಪಾಂತರಿ ಕೊರೊನಾ ಎರಡನೇ ಅಲೆಗೆ ಯುವಕರು ಸೇರಿದಂತೆ ಸಾಕಷ್ಟು ಮಂದಿ ಉಸಿರು ನಿಲ್ಲಿಸುತ್ತಿದ್ದಾರೆ. ಕೃತಕವಾಗಿ ನಿರ್ಮಿಸಿರುವ ಸ್ಮಶಾನಗಳಲ್ಲಿ ಆಂಬ್ಯುಲೆನ್ಸ್ ಗಳು ಸಾಲುಗಟ್ಟಿ ನಿಂತಿವೆ. ಯುವರಕನ್ನೇ ಹೆಚ್ಚಾಗಿ ಬಲಿ ಪಡೆಯುತ್ತಿರುವ ಕೊರೊನಾ ಎರಡನೇ ಅಲೆಗೆ ಭಯ ಬಿದ್ದು ಜನರು ಜೀವ ರಕ್ಷಿಸಿಕೊಳ್ಳಲು ವ್ಯಾಕ್ಸಿನ್‌ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಹಗಲು- ರಾತ್ರಿ ಎನ್ನದೇ ಸರ್ಕಾರಿ ವೈದ್ಯರು ಮತ್ತು ನರ್ಸಗಳು ತಮ್ಮ ಜೀವ ಪಣಕ್ಕೆ ಇಟ್ಟು ವ್ಯಾಕ್ಸಿನ್ ಹಾಕಿದ್ದರು. ಮುಂದಾಲೋಚನೆ ಇಲ್ಲದೇ ರೂಪಿಸಿದ ವ್ಯಾಕ್ಸಿನ್ ಡ್ರೈವ್‌ನಿಂದಲೇ ಇದೀಗ ಬಹುದೊಡ್ಡ ಸಮಸ್ಯೆ ಎದುರಾಗಿದೆ.

Recommended Video

Vaccination ಎರಡನೇ ಡೋಸ್ ಸಮಯದಲ್ಲಿ ಭಾರೀ ಎಡವಟ್ಟು | Oneindia Kannada

ಕೋವ್ಯಾಕ್ಸಿನ್ ಖಾಲಿ : ರಾಜ್ಯದಲ್ಲಿ ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಮೊದಲ ಸುತ್ತಿನಲ್ಲಿ ಹಿರಿಯರಿಗೆ ಹಾಗೂ ಕೊರೊನಾ ವಾರಿಯರ್ಸ್ ಪಟ್ಟಿಯಲ್ಲಿದ್ದ ಪೊಲೀಸರು ನರ್ಸ್, ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ಕೊಡಲಾಗಿದೆ. ಇದೀಗ ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ದಿಲ್ಲದೇ ಕೋವಿಶೀಲ್ಡ್ ಬಳಕೆಗೆ ಅವಕಾಶ ನೀಡಲಾಗಿದೆ. ಕೋವ್ಯಾಕ್ಸಿನ್ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಪೂರಕೆ ಮಾಡದ ಹಿನ್ನೆಲೆಯಲ್ಲಿ ಇದೀಗ ರಾಜ್ಯದಲ್ಲಿ ಕೊರೊನಾ ಮಾರಿ ವಿರುದ್ಧ ಆರಂಭವಾಗಿದ್ದ ಲಸಿಕೆ ಅಭಿಯಾನಕ್ಕೆ ಬಹುದೊಡ್ಡ ತೊಡಕು ಎದುರಾಗಿದೆ.

 ಇದೆಂತಹ ಲಾಕ್ ಡೌನ್ ಗೈಡ್ಲೈನ್ಸ್: ಕೊರೊನಾ ಚೈನ್ ಬ್ರೇಕ್ ಮಾಡುವ ಸದುದ್ದೇಶ ಇಲ್ಲವೇ? ಇದೆಂತಹ ಲಾಕ್ ಡೌನ್ ಗೈಡ್ಲೈನ್ಸ್: ಕೊರೊನಾ ಚೈನ್ ಬ್ರೇಕ್ ಮಾಡುವ ಸದುದ್ದೇಶ ಇಲ್ಲವೇ?

ಎರಡನೇ ಡೋಸ್‌ಗೆ ಪರದಾಟ: ರಾಜ್ಯದಲ್ಲಿ ಈವರೆಗೆ 84,06, 980 ಮಂದಿ ಮೊದಲನೇ ಡೋಸ್ ವ್ಯಾಕ್ಸಿನೇಷನ್ ಪಡೆದುಕೊಂಡಿದ್ದಾರೆ. ಎರಡನೇ ಡೋಸ್ ಪಡೆದುಕೊಂಡವರು 18,45,420. ಮೊದಲನೇ ಹಂತದ ಲಸಿಕೆ ಅಭಿಯಾನದಲ್ಲಿ ಜನರು ಪಡೆದಿರುವುದು ಕೋವ್ಯಾಕ್ಸಿನ್ ಮಾತ್ರ. ಅದಾಗಲೇ 18 ಲಕ್ಷ ಮಂದಿ ಎರಡನೇ ಡೋಸ್ ಕೋವ್ಯಾಕ್ಸಿನ್ ಪಡೆದವರೂ ಸೇಫ್. ಮೊದಲೇ ಡೋಸ್ ಕೋವ್ಯಾಕ್ಸಿನ್ ಪಡೆದು ಇದೀಗ 28 ದಿನ ಮುಗಿದಿದ್ದು, ಎರಡನೇ ಡೋಸ್ ಲಸಿಕೆಗಾಗಿ ಪರದಾಡುತ್ತಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಇನ್ನೂ 60 ಲಕ್ಷ ಮಂದಿ ಮುಂದಿನ ವಾರದ ಒಳಗೆ ಎರಡನೇ ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇದರಲ್ಲಿ ಅರ್ಧದಷ್ಟು ಮಂದಿಗೆ ಆಗುವಷ್ಟು ಕೋವ್ಯಾಕ್ಸಿನ್ ಲಸಿಕೆ ರಾಜ್ಯದಲ್ಲಿ ಲಭ್ಯವಿಲ್ಲ. ಹೀಗಾಗಿ ಮೊದಲನೇ ಡೋಸ್ ಕೋವ್ಯಾಕ್ಸಿನ್ ಪಡೆದವರು 28 ದಿನದೊಳಗೆ ವ್ಯಾಕ್ಸಿನ್ ಪಡೆಯುವುದು ಅಸಾಧ್ಯ ಎಂಬಂತಾಗಿದೆ. ಹೀಗಾಗಿ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರು ಎರಡನೇ ಡೋಸ್ ಕಾಲಮಿತಿಯಲ್ಲಿ ಪಡೆಯಲಾಗದೇ ಗಾಬರಿಯಾಗಿದ್ದಾರೆ.

Shocking News For Those Waiting For Second Dose of Corona Vaccine!

ಬೆಳಕಿಗೆ ಬಂದಿದ್ದು ಹೀಗೆ : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಲಸಿಕೆ ಅಭಿಯಾನ ನಡೆಯುತ್ತಿತ್ತು. ಮೊದಲ ಸುತ್ತಿನಲ್ಲಿ ಕೋವ್ಯಾಕ್ಸಿನ್ ಪಡೆದಿದ್ದ ಮಂದಿ ಇವತ್ತು ಎರಡನೇ ಸುತ್ತಿನ ಕೋವ್ಯಾಕ್ಸಿನ್‌ಗಾಗಿ ಬಂದಿದ್ದರು. ಮೊದಲ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದವರಿಗೆ ಕೋವಿಶೀಲ್ಡ್ ನೀಡಲಾಗುತ್ತು. ಜನಜಂಗುಳಿಯಲ್ಲಿ ಕೋವ್ಯಾಕ್ಸಿನ್ ಕೊಡುವ ಬದಲಿಗೆ ನರ್ಸ್ ಕೋವಿಶೀಲ್ಡ್ ನೀಡಿದ್ದರು. ಈ ವೇಳೆ ವೈದ್ಯರು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು. ಕೋವ್ಯಾಕ್ಸಿನ್ ಲಸಿಕೆ ಖಾಲಿಯಾಗಿದೆ. ಈಗ ಕೋವ್ಯಾಕ್ಸಿನ್ ಪಡೆದವರಿಗೆ ಎರಡನೇ ಡೋಸ್ ಸಿಗುವುದೇ ಅನುಮಾನ. ಎರಡನೇ ಡೋಸ್ ವ್ಯಾಕ್ಸಿನ್ ನಿಗದಿತ ಕಾಲ ಮಿತಿಯಲ್ಲಿ ಪಡೆಯದಿದ್ದರೆ ಅವರು ವ್ಯಾಕ್ಸಿನ್ ಪಡೆದು ಏನು ಪ್ರಯೋಜನ ಎಂದು ನರ್ಸ್ ನ್ನು ಪ್ರಶ್ನಿಸುತ್ತಿದ್ದರು.

ಇದರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿದಾಗ ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈವರೆಗೂ ನಡೆಸಿದ ಲಸಿಕೆ ಅಭಿಯಾನದಲ್ಲಿ ಕೋವ್ಯಾಕ್ಸಿನ್ ನೀಡಲಾಗಿದೆ. ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ. ಹೀಗಾಗಿ ಹೊಸದಾಗಿ ವ್ಯಾಕ್ಸಿನ್ ಪಡೆದುಕೊಳ್ಳವರಿಗೆ ಕೋವಿಶೀಲ್ಡ್ ನೀಡಲಾಗುತ್ತಿದೆ. ಮೊದಲ ಡೋಸ್ ಯಾವ ವ್ಯಾಕ್ಸಿನ್ ಪಡೆಯುತ್ತೇವೆಯೋ ಎರಡನೇ ಡೋಸ್ ಕೂಡ ಅದೇ ವ್ಯಾಕ್ಸಿನ್ ಪಡೆಯಬೇಕು. ಮೊದಲ ಡೋಸ್ ಪಡೆದ ನಾಲ್ಕನೇ ವಾರ ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕು. ಕೋವಿಶೀಲ್ಡ್ ಆಗಿದ್ದಲ್ಲಿ ಎರಡನೇ ಡೋಸ್ ಐದನೇ ವಾರ ಪಡೆಯಬೇಕು. ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರು ಇದೀಗ ಎರಡನೇ ಡೋಸ್ ಕಾಲಮಿತಿಯಲ್ಲಿ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.

Shocking News For Those Waiting For Second Dose of Corona Vaccine!

ತಾಲೂಕು ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಈವರೆಗೂ ಕೋವ್ಯಾಕ್ಸಿನ್ ನೀಡಲಾಗಿದೆ. ರಾಜ್ಯದಲ್ಲಿ ಇನ್ನೂ 60 ಲಕ್ಷ ಮಂದಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಹತ್ತು ದಿನದಲ್ಲಿ ಪಡೆಯಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವ್ಯಾಕ್ಸಿನ್‌ಗಾಗಿ ಜನರು ಪರದಾಡುವಂತಾಗಿದೆ. ಖಾಸಗಿಯಾಗಿ ಕೋವ್ಯಾಕ್ಸಿನ್ ಲಭ್ಯವಿಲ್ಲದ ಕಾರಣ ಇದೀಗ ಎರಡನೇ ಡೋಸ್ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ. ಕೋವ್ಯಾಕ್ಸಿನ್ ಇಲ್ಲದ ಕಾರಣ ಇದೀಗ ಕೋವಿಶೀಲ್ಡ್ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಇದರಿಂದ ಲಕ್ಷಾಂತರ ಮಂದಿ ಎರಡನೇ ಡೋಸ್ ಪಡೆಯಲು ಆಗುತ್ತಿಲ್ಲ. ಹೀಗಾಗಿ ಅವರು ಪಡೆದ ಮೊದಲನೇ ಡೋಸ್ ಕೂಡ ನಿಷ್ಪ್ರಯೋಜಕ ಆಗಬಹುದು.

Shocking News For Those Waiting For Second Dose of Corona Vaccine!

ಸರ್ಕಾರದ ಎಡವಟ್ಟು: ಕೋವ್ಯಾಕ್ಸಿನ್ ಎರಡು ಡೋಸ್ ಕೊಡಬೇಕು. ಅದರಲ್ಲೂ ಕಾಲಮಿತಿಯಲ್ಲಿ ಕೊಡಬೇಕು ಎಂಬ ಸಾಮಾನ್ಯ ಜ್ಞಾನ ಇದಿದ್ದರೆ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರಿಗೆ ಕಾಲಮಿತಿಯಲ್ಲಿ ಎರಡನೇ ಡೋಸ್ ಕೊಡುವ ಬಗ್ಗೆ ಕೋವ್ಯಾಕ್ಸಿನ್ ಮೀಸಲಿಡಬೇಕಿತ್ತು. ಮೊದಲ ಡೋಸ್ ಯಾವ ವ್ಯಾಕ್ಸಿನ್ ಪಡೆಯುತ್ತಾರೋ ಎರಡನೇ ಡೋಸ್ ಅದೇ ಕೊಡಬೇಕಲ್ಲವೇ ? ಈ ಸೂಕ್ಷ್ಮತೆ ಮರೆತ ಕಾರಣ ಇದೀಗ ಮೊದಲ ಡೋಸ್ ಪಡೆದು, ಎರಡನೇ ಡೋಸ್ ಪಡೆಯಲಾಗದೇ ಒದ್ದಾಡುತ್ತಿದ್ದಾರೆ. ಮಾನ್ಯ ಆರೋಗ್ಯ ಸಚಿವರು ಈ ಸಮಸ್ಯೆ ಪರಿಹರಿಸಲು ಯಾವ ಮೊರೆ ಹೋಗುತ್ತಾರೋ ಕಾದು ನೋಡಬೇಕು.

English summary
Demand for Covaxin: Shocking News For Those Waiting For Second Dose Covaxin Vaccine
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X