• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನಲ್ಲಿ ಶಿವರಾಜಕುಮಾರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ

|
Google Oneindia Kannada News

ಮೈಸೂರು, ಮಾರ್ಚ್ 17: ಇವತ್ತು ದೊಡ್ಮನೆ ಮಗ ಹಾಗೂ ಕನ್ನಡಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 'ಜೇಮ್ಸ್' ಚಿತ್ರ ತೆರೆಕಂಡಿದೆ. ಪುನೀತ್ ರಾಜಕುಮಾರ್ ಅಗಲಿ ಕೆಲ ತಿಂಗಳು ಕಳೆದರೂ ಅವರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದ್ದಾರೆ.

ಇದಕ್ಕೆ ಸಾಕ್ಷಿಯಾಗಿದ್ದು ಇಂದು ಸಿನಿಮಾ ನೋಡಲು ಬಂದ ಜನ ಸಾಗರ. ಸಿನಿಮಾ ಮಂದಿರಗಳ ಮುಂದೆ ನೃತ್ಯ ಮಾಡುವ ಮೂಲಕ, ಸಿಹಿ ಹಂಚಿ ಪುನೀತ್ ರಾಜುಕುಮಾರ್ ಮತ್ತೆ ಹುಟ್ಟಿ ಬಂದರು ಎನ್ನುವಷ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಲು ಕಾತುರರಾಗಿ ಕಾಯುತ್ತಿದ್ದಾರೆ. ಜೊತೆಗೆ ಮೈಸೂರಿನ ಗಾಯತ್ರಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದ ಶಿವರಾಜುಕುಮಾರ್ ಅಪ್ಪು ಫೋಟೋಗೆ ಮುತ್ತಿಟ್ಟು ಅಭಿಮಾನಿಗಳ ಅಭಿಮಾನಕ್ಕೆ ಅಭಿನಂದನೆ ತಿಳಿಸಿದ್ದಾರೆ. ಮೈಸೂರಿನಲ್ಲಿ ಶಿವಣ್ಣನಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ತಮತ್ತ ಕೈಬೀಸಿದ ಶಿವಣ್ಣನ್ನು ಕಂಡು ಅಭಿಮಾನಿಗಳು ಸಂತಸಗೊಂಡರು. ಮಾತ್ರವಲ್ಲದೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿ ಬಳಗ ಥಿಯೇಟರ್ ಮುಂದೆ ಸೇರಿದೆ.

Video; ಲೈಫ್ ಬಾಯ್ ಸೋಪ್‌ನಲ್ಲಿ ಮೂಡಿದ ಪುನೀತ್ ಚಿತ್ರ Video; ಲೈಫ್ ಬಾಯ್ ಸೋಪ್‌ನಲ್ಲಿ ಮೂಡಿದ ಪುನೀತ್ ಚಿತ್ರ

ಇನ್ನೂ ಈ ಬಗ್ಗೆ ಬಸವರಾಜ ಬೊಮ್ಮಾಯಿ ಸುದ್ದಿಗಾರರ ಮುಂದೆ ಮಾತನಾಡಿದರು. ಪುನೀತ್ ಸೇವೆ ಬಣ್ಣಸಲು ಪದಗಳೇ ಸಾಲದು. ಬಾಲ ನಟನಾಗಿ ನಟಿಸಿ ಜನ ಮನದಲ್ಲಿ ಸ್ಥಾನ ಪಡೆದ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯಗಳು. ಅತೀ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಬಡವರಿಗೆ ಸಹಾಯ ಮಾಡಿದ್ದಾರೆ. ಅಂಗಾಂಗ ದಾನ ಮಾಡಿದ್ದಾರೆ. ಅವರ ಕೆಲಸಗಳನ್ನು ನೆನಪು ಮಾಡಿಕೊಳ್ಳುತ್ತಾ, ಜೇಮ್ಸ್ ಚಿತ್ರಕ್ಕೆ ನಾನು ಶುಭಾಶಯ ಕೋರುತ್ತೇನೆ.

ಪುನೀತ್ ರಾಜಕುಮಾರ್ ಅವರಿಗೆ 'ಕರ್ನಾಟಕ ರತ್ನ' ಕೊಡುವ ವಿಚಾರವನ್ನು ನಿರ್ಧಾರ ಮಾಡಿದ್ದೇವೆ. ಕುಟುಂಬಸ್ಥರೊಂದಿಗೆ ಮಾತನಾಡಿ ದಿನಾಂಕ ಫಿಕ್ಸ್ ಮಾಡುತ್ತೇವೆ. ಯಾವ ರೀತಿ ಮಾಡಬೇಕು ಎಂದು ಚರ್ಚಿಸಿ, ಅದಕ್ಕೊಂದು ಸಮಿತಿ ಮಾಡಿ ಆದಷ್ಟು ಬೇಗ ಅವರಿಗೆ ಪ್ರಶಸ್ತಿಯನ್ನು ನೀಡಲುವಂತ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

 ಪುನೀತ್ ಜನ್ಮದಿನದಂದು 'ಅಪ್ಪು ಸ್ಮರಣೆ' ಮಾಡಿದ ರಾಜಕೀಯ ನಾಯಕರುಗಳು ಪುನೀತ್ ಜನ್ಮದಿನದಂದು 'ಅಪ್ಪು ಸ್ಮರಣೆ' ಮಾಡಿದ ರಾಜಕೀಯ ನಾಯಕರುಗಳು

ಥಿಯೇಟರ್ ಮುಂದೆ ಇಂದು ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆ ಸಿನಿಮಾ ಮಂದಿರಗಳ ಮುಂದೆ ರಕ್ತದಾನ, ಅನ್ನದಾನ, ಹಾಲಿನ ಅಭಿ‍ಷೇಕ ಎಲ್ಲವನ್ನೂ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಜೊತೆಗೆ ಜೇಮ್ಸ್ ಚಿತ್ರಕ್ಕೆ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ರಾಜ್ಯಾದ್ಯಂತ ಥೀಯೇಟರ್ ಹೌಸ್ ಫುಲ್ ಆದ ಬೆನ್ನಲ್ಲೆ ಜೇಮ್ಸ್ ಸಿನಿಮಾ ನೋಡಲು ಸಿನಿಮಾ ಮಂದಿರಗಳ ಮುಂದೆ ಸಾಲುಗಟ್ಟಿ ನಿಂತು ಕಾಯುತ್ತಿದ್ದಾರೆ. ಇನ್ನೂ ಥಿಯೇಟರ್ ಮುಂದೆ ಯುವಕ-ಯುವತಿಯರು, ಮಕ್ಕಳು, ಹಿರಿಯರು ಎಲ್ಲಾ ವರ್ಗದ ಜನ ಡೊಲ್ಲು ಕುಣಿತ, ನೃತ್ಯ ಮಾಡುತ್ತಾ ಥಿಯೇಟರ್ ಮುಂದೆ ಕಿಕ್ಕಿರಿದು ನೆರೆದಿದ್ದಾರೆ. ನೃತ್ಯ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಬೆಳ್ಳಿತೆರೆ ಮೇಲೆ ಅಪ್ಪು ಚಿತ್ರ ನೋಡುತ್ತಿದ್ದ ಂತೆ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದ ದೊಡ್ಮನೆ ಮಗನನನ್ನು ತೆರೆ ಮೇಲೆ ನೋಡಲು ಕಾತರರಾಗಿದ್ದಾರೆ. ನಟ ಪುನೀತ್ ಹೆಸರು ಎಲ್ಲರ ಅಭಿಮಾನದಲ್ಲೂ ಇದೆ ಎಂದು ಮೈಸೂರಿನಲ್ಲಿ ಶಿವಣ್ಣ ಹೇಳಿಕೆ ನೀಡಿದ್ದಾರೆ.

'ಜೇಮ್ಸ್' ಸಿನಿಮಾ ನಾಲ್ಕು ಸಾವಿರ ಸ್ಕ್ರೀನ್‌ ಗಳಲ್ಲಿ ರಿಲೀಸ್ ಆಗಿದೆ. ಹುಟ್ಟುಹಬ್ಬದ ಜೊತೆಗ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಬಾನಂಗಳದಲ್ಲಿ ಅಪ್ಪು ರಾರಾಜಿಸಿದ್ದಾರೆ. ಹ್ಯಾಪಿ ಬರ್ಥಡೆ ಪುನೀತ್ ರಾಜುಕುಮಾರ್ ಎನ್ನುವ ಬ್ಯಾನರ್, ಜಕ್ಕೂರು ಏರೋ ಮಿನಿ ಜೆಟ್ ಮೂಲಕ ಹಾರಿಸಲಾಗಿದೆ. ರಾಜ್ಯಾದ್ಯಾಂತ ಅರವತ್ತು ನಿಮಿಷ ಹಾರಾಡಿದೆ. ಈ ಮೂಲಕ ಅಭಿಮಾನಿಗಳು ಅಭಿಮಾನ ತೋರಿದ್ದಾರೆ.

   Puneeth RajKumar ಹಳ್ಳಿಯಿಂದ ದಿಲ್ಲಿಯವರೆಗೂ ಟ್ರೆಂಡಿಂಗ್ | Oneindia Kannada
   English summary
   Puneeth Rajakumar's birthday film 'James' has been launched today. Shivarajakumar kisses 'Appu photo'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X