ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರೂರು ಶ್ರೀ ನಿಧನ: ಆರು ಮಠಗಳ ವಿರುದ್ಧದ ಕೇವಿಯಟ್ ಅನೂರ್ಜಿತ

|
Google Oneindia Kannada News

ಬೆಂಗಳೂರು, ಜುಲೈ 23: ಪಟ್ಟದ ದೇವರನ್ನು ತಮಗೆ ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿ ಶಿರೂರು ಲಕ್ಷ್ಮೀವರ ತೀರ್ಥರು ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತವಾಗಲಿದೆ.

ಅರ್ಜಿ ಸಲ್ಲಿಸಿದ್ದ ಲಕ್ಷ್ಮೀವರ ತೀರ್ಥರು ನಿಧನರಾಗಿರುವುದರಿಂದ ಕೇವಿಯಟ್ ಪರಿಗಣನೆಗೆ ಬರುವುದಿಲ್ಲ.

ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್

ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಲಕ್ಷ್ಮೀವರ ತೀರ್ಥರು, ನಿತ್ಯವೂ ಪೂಜೆ ನಡೆಸಲು ಸಾಧ್ಯವಾಗದ ಕಾರಣಕ್ಕೆ ಮಠದ ಪಟ್ಟದ ದೇವರು ವಿಠ್ಠಲ ಮೂರ್ತಿ ಹಾಗೂ ಇನ್ನಿತರೆ ವಿಗ್ರಹಗಳನ್ನು ಉಡುಪಿಯ ಕೃಷ್ಣ ದೇವಸ್ಥಾನಕ್ಕೆ ಒಪ್ಪಿಸಿದ್ದರು.

ಬಳಿಕ ಪಟ್ಟದ ದೇವರನ್ನು ತಮಗೆ ವಾಪಸ್ ನೀಡದ ಕಾರಣ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪುತ್ತಿಗೆ ಮಠದ ಶ್ರೀಗಳನ್ನು ಹೊರತುಪಡಿಸಿ ಅಷ್ಟ ಮಠದ ಉಳಿದೆಲ್ಲ ಮಠಗಳ ವಿರುದ್ಧ ಅವರು ಕೇವಿಯಟ್ ಸಲ್ಲಿಸಿದ್ದರು.

Shiruru sri caveat void temporary postmortem report

ವಿಗ್ರಹಗಳನ್ನು ವಾಪಸ್ ನೀಡಲು ಒಪ್ಪದ ಮಠಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೂಡ ಅವರು ಸಿದ್ಧತೆ ನಡೆಸಿದ್ದರು.

ಶಿರೂರು ಶ್ರೀಗಳು ಬ್ರಹಮ್ಚರ್ಯ ಪಾಲಿಸಿಲ್ಲ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಅವರು ಯತಿಯಲ್ಲ. ಯತಿಗಳಲ್ಲದವರು ಪೀಠಾಧೀಶರಾಗಿ ಮುಂದುವರಿಯಬಾರದು.

ಶಿರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಿ ಪೀಠವನ್ನು ತ್ಯಾಗ ಮಾಡಬೇಕು. ಯತಿಗಳಲ್ಲದವರು ಪಟ್ಟದ ದೇವರ ಪೂಜೆ ಮಾಡುವಂತಿಲ್ಲ. ಹೀಗಾಗಿ ಅವುಗಳನ್ನು ಅವರು ವಾಪಸ್ ಕೇಳಬಾರದು ಎಂದು ಆರು ಮಠಗಳು ವಾದಿಸಿದ್ದವು.

ಶೀರೂರು ಶ್ರೀಗಳ ಮನೆಯಲ್ಲಿ ತಂಗುತ್ತಿದ್ದ ಆ ಮಹಿಳೆ ಯಾರು?ಶೀರೂರು ಶ್ರೀಗಳ ಮನೆಯಲ್ಲಿ ತಂಗುತ್ತಿದ್ದ ಆ ಮಹಿಳೆ ಯಾರು?

ಎರಡು ದಿನದಲ್ಲಿ ಮರಣೋತ್ತರ ಪರೀಕ್ಷೆ
ಅಸಹಜವಾಗಿ ಮೃತಪಟ್ಟ ಶಿರೂರು ಲಕ್ಷ್ಮೀವರ ತೀರ್ಥರ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಎರಡು ದಿನಗಳಲ್ಲಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಶಿರೂರು ಶ್ರೀಗಳ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮರಣೋತ್ತರ ಪರೀಕ್ಷೆ ವಿಭಾಗದಲ್ಲಿ ನಡೆಸಲಾಗಿತ್ತು.

ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಅದರ ವಿಸ್ತೃತವಾದ ವರದಿಯು ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರಬೇಕಿದ್ದು, ಎರಡು ವಾರ ಬೇಕಾಗಬಹುದು ಎನ್ನಲಾಗಿದೆ.

ಈ ವರದಿಯಲ್ಲಿ ಶ್ರೀಗಳ ಸಾವಿಗೆ ಕಾರಣವಾದ ವಿಷ, ಅದರ ಪ್ರಮಾಣ ಮುಂತಾದವುಗಳ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

English summary
Shiruru Seer Lakshmivara tirtha swami's temporary postmortem report might be available in two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X