• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿರಾಡಿ ಘಾಟ್: ತಜ್ಞ ಇಂಜಿನಿಯರ್ಸ್ ಸಿಎಂಗೆ ನೀಡಿದ ವರದಿಯಲ್ಲೇನಿದೆ?

|
   ಶಿರಾಡಿ ಘಾಟ್ ಬಗ್ಗೆ ಪುತ್ತೂರು ತಜ್ಞ ಇಂಜಿನಿಯರ್ಸ್ ತಂಡ ಸಿಎಂಗೆ ಕೊಟ್ಟ ವರದಿಯಲ್ಲೇನಿದೆ? | Oneindia Kannada

   ಭಾರೀ ಮಳೆ ಮತ್ತು ಭೂಕುಸಿತದಿಂದ ಬಂದ್ ಆಗಿರುವ ಶಿರಾಡಿ ಘಾಟ್ ಮತ್ತೆ ಸಂಚಾರಕ್ಕೆ ಮುಕ್ತವಾಗುವುದು ಯಾವಾಗ ಎನ್ನುವ ಗೊಂದಲಕ್ಕೆ ಶನಿವಾರ (ಸೆ 1) ರಾಜ್ಯ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ತೆರೆಯೆಳೆದಿದ್ದರು. ಮುಂದಿನ ಹತ್ತು ದಿನದೊಳಗೆ ಸ್ಥಳೀಯ ತಜ್ಞರ ವರದಿಯನ್ನು ಆಧರಿಸಿ ಭಾರೀ ವಾಹನಗಳನ್ನು ಹೊರತು ಪಡಿಸಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದರು.

   ಆದರೆ, ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೆಪ್ಟಂಬರ್ ಮೂರರಿಂದಲೇ ಸಂಚಾರಕ್ಕೆ ಶಿರಾಡಿ ಮುಕ್ತಗೊಳಿಸಬಹುದು ಎಂದು ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

   ಶಿರಾಡಿ ಘಾಟ್ ನಲ್ಲಿ ಕಾಸಿದ್ದವನೇ ಬಾಸ್, ಡಿಸಿ ಅಲ್ಲ ಅವ್ನ ಅಪ್ಪನಿಗೆ ಹೇಳು

   ಈ ನಡುವೆ, ಗುಂಡ್ಯ ಮತ್ತು ಶಿರಾಡಿ ಪರಿಸರದಲ್ಲಿರುವ ಜನರ ವಿನಂತಿಯ ಮೇರೆಗೆ, ಪುತ್ತೂರು ಅಸೋಸಿಯೇಶನ್ಸ್ ಆಫ್ ಸಿವಿಲ್ ಇಂಜಿನಿಯರ್ಸಿನ ಹನ್ನೆರಡು ಜನರ ತಂಡ ದಿನಾಂಕ ಆಗಸ್ಟ್ 27ರಂದು, ಶಾಸಕಿ ತೇಜಸ್ವಿನಿ ರಮೇಶ್ ಅವರೊಂದಿಗೆ ಶಿರಾಡಿ ಘಾಟ್ ಸಂಚರಿಸಿ, ವಿಸ್ಕೃತ ವರದಿ ಮತ್ತು ತೆಗೆದುಕೊಳ್ಳಬಹುದಾದ ಪರಿಹಾರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.

   ರಾಜಧಾನಿಯಿಂದ ಕರಾವಳಿ ತಲುಪಲು ಅತ್ಯಂತ ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟ್ ಶೀಘ್ರ ಸಂಚಾರಕ್ಕೆ ಮತ್ತು ಶಾಶ್ವತ ಪರಿಹಾರಕ್ಕೆ ಖುದ್ದಾಗಿ ಘಾಟ್ ನಲ್ಲಿ ಸಂಚರಿಸಿ ವರದಿ ನೀಡಿದ, ಪುತ್ತೂರು ಅಸೋಸಿಯೇಶನ್ಸ್ ಆಫ್ ಸಿವಿಲ್ ಇಂಜಿನಿಯರ್ಸಿನ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಾ, ಸಿಎಂಗೆ ತಂಡ ನೀಡಿದ ವರದಿಯ ಯಥಾವತ್ ಕಾಪಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ

   ಹನ್ನೆರಡು ಭಾಗಗಳಲ್ಲಿ ಭೂಕುಸಿತ ಕಂಡುಬರುತ್ತಿದೆ,

   ಹನ್ನೆರಡು ಭಾಗಗಳಲ್ಲಿ ಭೂಕುಸಿತ ಕಂಡುಬರುತ್ತಿದೆ,

   1. ನದಿಯ ಬದಿಗೆ ತಾಗಿಕೊಂಡಿರುವ ರಸ್ತೆಯು ಸುಮಾರು ಹನ್ನೆರಡು ಭಾಗಗಳಲ್ಲಿ ಭೂಕುಸಿತ ಕಂಡುಬರುತ್ತಿದೆ, ಇದೊಂದು ಗಂಭೀರ ಸಮಸ್ಯೆ. ನದಿಯ ಅಂಚಿನಲ್ಲಿರುವ ರಸ್ತೆ ಭಾಗಗಳ ಕುಸಿತ ಎಷ್ಟು ಭೀಕರವಾಗಿದೆಯೆಂದರೆ ಸದರಿ ರಸ್ತೆಯು ಈ ಭಾಗಗಳಲ್ಲಿ ಘನ ಮತ್ತು ಮಧ್ಯಮ ಸಾಮರ್ಥ್ಯದ ಸರಕು ಸಾಗಾಟ ವಾಹನಗಳು ಸಂಚರಿಸಿದರೆ, ಅನಾಹುತಗಳನ್ನು ಆಹ್ವಾನಿಸಿದಂತೆ ಆಗಬಹುದು.

   2. ಹೆಚ್ಚಿನ ಎಲ್ಲಾ ತಿರುವುಗಳಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಗುಡ್ಡಗಳು ಸಹ ಕೆಲವು ಕಡೆ ಕುಸಿದಿರುವುದು ಕಂಡುಬಂದಿದ್ದು, ಮುಂದೆಯೂ ಕುಸಿಯುವ ಸಂಭವ ಕಂಡುಬರುತ್ತಿದೆ.

   ಒರತೆ ನೀರನ್ನು ಒಯ್ಯಲು ಬೇಕಾದಷ್ಟು ಪಾತ್ರವನ್ನು ಹೊಂದಿರುವುದಿಲ್ಲ

   ಒರತೆ ನೀರನ್ನು ಒಯ್ಯಲು ಬೇಕಾದಷ್ಟು ಪಾತ್ರವನ್ನು ಹೊಂದಿರುವುದಿಲ್ಲ

   3. ರಸ್ತೆಯ ಬದಿಯ ಬಸಿಕಾಲುವೆಗಳು ಸಮರ್ಪಕವಾಗಿಲ್ಲ. ಈ ಕಾಲುವೆಗಳು ಮಳೆನೀರು ಮತ್ತು ಒರತೆ ನೀರನ್ನು (scapage water) ಒಯ್ಯಲು ಬೇಕಾದಷ್ಟು ಪಾತ್ರವನ್ನು ಹೊಂದಿರುವುದಿಲ್ಲ. ಇದರಿಂದಾಗಿ, ಗುಡ್ಡೆಯ ಬದಿಯ ನೀರು ರಸ್ತೆಯ ಮೇಲೆ ಬಂದು ನಂತರ ಇನ್ನೊಂದು ಮಗ್ಗುಲಿಗೆ ಅಂದರೆ ಹೊಳೆಯ ಬದಿ ಹರಿದುಬರುತ್ತಿರುವುದು ಕಂಡುಬಂದಿದೆ.

   ಶಿರಾಡಿ ಘಾಟ್‌ನಲ್ಲಿ 10 ದಿನದೊಳಗೆ ಲಘು ವಾಹನ ಸಂಚಾರಕ್ಕೆ ಅವಕಾಶ: ರೇವಣ್ಣ

   ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಮಣ್ಣು ಕರಗಿರುವುದು ಕಂಡು ಬರುತ್ತಿದೆ

   ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಮಣ್ಣು ಕರಗಿರುವುದು ಕಂಡು ಬರುತ್ತಿದೆ

   4. ಮೋರಿಗಳಿಂದ ನೀರು ಹರಿದು ಹೋಗುವಲ್ಲಿ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಮಣ್ಣು ಕರಗಿರುವುದು ಕಂಡು ಬರುತ್ತಿದೆ.

   5. ಶಿರಾಡಿ ಘಾಟಿನ ಹೊಸ ಕಾಂಕ್ರೀಟ್ ರಸ್ತೆ ಮತ್ತು ಈ ಹಿಂದಿನ ಕಾಂಕ್ರೀಟ್ ರಸ್ತೆಗಳಲ್ಲಿ ಒಂದು ಕಡೆ ಮಾತ್ರ ಸಣ್ಣ ಪ್ರಮಾಣದ (ಭೂಕುಸಿತದ ಪ್ರದೇಶಗಳಲ್ಲಿ) ಹಾನಿಯಾಗಿರುವುದು ಕಂಡುಬರುತ್ತಿದೆ.

   (ಇದಕ್ಕೆ ಸೂಚಿಸಿರುವ ಪ್ರಮುಖ ಪರಿಹಾರಗಳನ್ನು ಮುಂದಿನ ಸ್ಲೈಡುಗಳಲ್ಲಿ)

   ಚರಂಡಿ ವ್ಯವಸ್ಥೆಯೊಂದಿಗೆ ರಸ್ತೆ ನಿರ್ಮಿಸುವುದು

   ಚರಂಡಿ ವ್ಯವಸ್ಥೆಯೊಂದಿಗೆ ರಸ್ತೆ ನಿರ್ಮಿಸುವುದು

   ರಸ್ತೆಬದಿಯ ಬಸಿಕಾಲುವೆಗಳ ಗಾತ್ರವನ್ನು ದೊಡ್ಡದು ಮಾಡುವುದು ಮತ್ತು ಕಾಲುವೆಯ ತಳಭಾಗದಲ್ಲಿ ಒರತೆ ನೀರು ಹಾದು ಹೋಗಲು ಸಮರ್ಪಕವಾದ ತೂತುಗಳನ್ನು ಒದಗಿಸುವುದು. ಭೂಕುಸಿತ ಉಂಟಾದ ಪ್ರದೇಶಗಳಲ್ಲಿರುವ ನದಿಪಾತ್ರದ ಭೂಮಿ ಭಾಗವು ಕಡಿದಾಗಿದೆ. ನದಿಪಾತ್ರವು 50-100 ಅಡಿ ಆಳದಲ್ಲಿರುತ್ತದೆ ಮತ್ತು ಅಂದಾಜು ನಾಲ್ಕು ನೂರು ಅಡಿ ಉದ್ದವಿರುತ್ತದೆ. ಇಲ್ಲಿ ತಡೆಗೋಡೆ ನಿರ್ಮಿಸುವುದು ಕಷ್ಟ. ಹಾಗಾಗಿ, ಈ ಪ್ರದೇಶಗಳಲ್ಲಿ ರಸ್ತೆಯ ಇನ್ನೊಂದು ಬದಿಯನ್ನು ಅಗಲಗೊಳಿಸಿ ಸರಿಯಾದ, ಚರಂಡಿ ವ್ಯವಸ್ಥೆಯೊಂದಿಗೆ ರಸ್ತೆ ನಿರ್ಮಿಸುವುದು.

   ಶಿರಾಡಿ ಘಾಟ್ 'ಬಂದ್' ಹಿಂದೆ ಭಾರೀ ಗುಮಾನಿ: ತುರ್ತಾಗಿ ಆಗಬೇಕಿದೆ 'ಸತ್ಯ ಶೋಧನೆ'

   ಸೂಕ್ತ ಪೊಲೀಸ್ ಬಂದೋಬಸ್ತ್ ಮುಖಾಂತರ ವಾಹನ ಸಂಚಾರಕ್ಕೆ ಅನುವು

   ಸೂಕ್ತ ಪೊಲೀಸ್ ಬಂದೋಬಸ್ತ್ ಮುಖಾಂತರ ವಾಹನ ಸಂಚಾರಕ್ಕೆ ಅನುವು

   ಭೂಕುಸಿತ ಉಂಟಾದ ಅರ್ಧಭಾಗದಲ್ಲಿ ವಾಹನ ಸಂಚರಿಸಿದರೆ ತೊಂದರೆಗಳಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮುಖಾಂತರ ಘನ ಮತ್ತು ಮಧ್ಯಮ ಸಾಮರ್ಥ್ಯದ ಸರಕು ಸಾಗಟು ವಾಹನಗಳನ್ನು ಹೊರತು ಪಡಿಸಿ ಇತರ ಎಲ್ಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದು.

   ಭೂಕುಸಿತದ ಪ್ರದೇಶಗಳಲ್ಲಿ ರಸ್ತೆ ಬದಿಗಳಿಗೆ ಸಮರ್ಪಕವಾದ ಸೇಫ್ ಗಾರ್ಡ್ ವಾಲ್ ಮಾಡುವುದು. ಈ ಸೇಫ್ ಗಾರ್ಡ್ ಮಾಡಿದ ಭಾಗಗಳಲ್ಲಿ ರಸ್ತೆ ಮತ್ತು ಸೇಫ್ ಗಾರ್ಡ್ ಮಾಡಿದ ಎಲ್ಲಾ ಪ್ರದೇಶಗಳಲ್ಲಿ ನೀರು ಇಂಗಿ ಹೋಗದಂತೆ ಸುದೃಢವಾದ ಇಂಟರ್ ಲಾಕ್ ಅಳವಡಿಸಿವುದು. ನಂತರವಷ್ಟೇ ಘನ ಮತ್ತು ಮಧ್ಯಮ ಸಾಮರ್ಥ್ಯದ ಸರಕು ಸಾಗಾಟ ವಾಹನಗಳನ್ನು ಸಂಚರಿಸುವಂತೆ ಅನುವು ಮಾಡಿಕೊಡುವುದು.

   ಘನ, ಮಧ್ಯಮ ಸರಕು ಸಾಗಾಟ ವಾಹನಗಳನ್ನು ಪಾರ್ಕ್ ಮಾಡದಂತೆ ನಿರ್ಬಂಧಿಸುವುದು

   ಘನ, ಮಧ್ಯಮ ಸರಕು ಸಾಗಾಟ ವಾಹನಗಳನ್ನು ಪಾರ್ಕ್ ಮಾಡದಂತೆ ನಿರ್ಬಂಧಿಸುವುದು

   ಶಿರಾಡಿ ಘಾಟ್ ಆರಂಭದಿಂದ ಅಂತ್ಯದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ಘನ ಮತ್ತು ಮಧ್ಯಮ ಸಾಮರ್ಥ್ಯದ ಸರಕು ಸಾಗಾಟ ವಾಹನಗಳನ್ನು ಪಾರ್ಕ್ ಮಾಡದಂತೆ ನಿರ್ಬಂಧಿಸುವುದು. ಮೋರಿಗಳಿಂದ ನೀರು ಹೋಗುವಲ್ಲಿ ಎಲ್ಲಾ ಕಡೆ ಕಪ್ಪುಕಲ್ಲು ಹಾಸುವುದು. ಯಾವುದೇ ರಸ್ತೆಗಳ ನಕ್ಷೆ ಸಿದ್ದಪಡಿಸುವಾಗ ಸ್ಥಳೀಯ ಜನರ ಮತ್ತು ಇಂಜಿನಿಯರುಗಳ ಅಭಿಪ್ರಾಯ ಮತ್ತು ಸಲಹೆ ಸಂಗ್ರಹಿಸುವುದು ಸೂಕ್ತ. ಶಿರಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಆರಂಭ ಮಾಡಿದ ನಂತರದ ಒಂದು ತಿಂಗಳಲ್ಲಿ ತಜ್ಞ ಇಂಜಿನಿಯರುಗಳು ರಸ್ತೆಯ ದೃಢತೆಯ ಬಗ್ಗೆ ಪ್ರತೀದಿನವೂ ಪರಿಶೀಲಿಸಿ ವರದಿ ನೀಡುವುದು ಉತ್ತಮ.

   ನೋಡಿ ಸ್ವಾಮೀ ಚಾರ್ಮಾಡಿ ಘಾಟ್ ಅವಸ್ಥೆ: ನಾವೇನು ಊರಿಗೆ ಹೋಗೋದು ಬೇಡ್ವಾ?

   English summary
   Shiradi Ghat, Putturu Engineers (in Dakshina Kannada district) submitted detailed report to CM of Karnataka HD Kumaraswamy. Twelve members of team personally visited the ghat and given detailed report in that, what should be done, what precautionery we need to take points also mentioned.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X