ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಬಂದ್?

By Gururaj
|
Google Oneindia Kannada News

Recommended Video

ಮಳೆ ಅವಾಂತರದಿಂದ 3 ರಿಂದ 4 ತಿಂಗಳುಗಳ ಕಾಲ ಶಿರಾಡಿ ಘಾಟ್ ಬಂದ್ | Oneindia Kannada

ಬೆಂಗಳೂರು, ಆಗಸ್ಟ್ 20 : ಮಳೆ ಗುಡ್ಡ ಕುಸಿತದಿಂದಾಗಿ ಶಿರಾಡಿ ಘಾಟ್‌ ರಸ್ತೆ ಹಾಳಾಗಿದೆ. ಮುಂದಿನ 3 ರಿಂದ 4 ತಿಂಗಳುಗಳ ಕಾಲ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸುವ ಸಾಧ್ಯತೆ ಇದೆ.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. 'ಹೊಸ ಕಾಂಕ್ರೀಟ್‌ ರಸ್ತೆ ನಿರ್ಮಾಣವಾದ ಬಳಿಕ ಜೋರು ಮಳೆಯಾಗಿದೆ. ಅನೇಕ ಕಡೆಗಳಲ್ಲಿ ಗುಡ್ಡ ಕುಸಿದಿದೆ. ಆದ್ದರಿಂದ, ಶಿರಾಡಿ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ಕಷ್ಟ' ಎಂದರು.

ಭಾರೀ ಮಳೆ: ರಸ್ತೆ ಮೂಲಕ ಕರಾವಳಿ ಕಡೆ ಪ್ರಯಾಣಿಸುವವರಿಗೆ ಮಹತ್ವದ ಟಿಪ್ಸ್ಭಾರೀ ಮಳೆ: ರಸ್ತೆ ಮೂಲಕ ಕರಾವಳಿ ಕಡೆ ಪ್ರಯಾಣಿಸುವವರಿಗೆ ಮಹತ್ವದ ಟಿಪ್ಸ್

'ಮುಂದಿನ 3 ರಿಂದ 4 ತಿಂಗಳ ಕಾಲ ಭಾರಿ ವಾಹನಗಳ ಸಂಚಾರ ಕಷ್ಟ. ಆದ್ದರಿಂದ, ವಾಹನ ಸಂಚಾರ ನಿಷೇಧಿಸುವ ಪ್ರಸ್ತಾಪವಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.

Shiradi Ghat may close for heavy vehicle

'ಹಾಸನ ಮತ್ತು ಕೊಡಗಿನಲ್ಲಿ ಮಳೆ ಹಾನಿ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 150 ಕೋಟಿ ನಷ್ಟವಾಗಿದೆ. 139 ಕೋಟಿ ರೂ. ರಸ್ತೆ ಹಾನಿಯಾಗಿದೆ. 8 ಕೋಟಿ ವೆಚ್ಚದ ಸೇತುವೆ ಹಾನಿಯಾಗಿದೆ' ಎಂದು ಮಾಹಿತಿ ನೀಡಿದರು.

ಶಿರಾಡಿ ಒತ್ತಡ ಚಾರ್ಮಾಡಿ ಘಾಟ್ ರಸ್ತೆ ಮೇಲೆ, ವಿಪರೀತ ಸಂಚಾರ ದಟ್ಟಣೆಶಿರಾಡಿ ಒತ್ತಡ ಚಾರ್ಮಾಡಿ ಘಾಟ್ ರಸ್ತೆ ಮೇಲೆ, ವಿಪರೀತ ಸಂಚಾರ ದಟ್ಟಣೆ

'ಮಳೆ ಹೀಗೆ ಮುಂದುವರೆದರೆ ಮತ್ತಷ್ಟು ಹಾನಿಯಾಗುವ ಸಂಭವವಿದೆ. ಮಳೆ ನಿಂತ ಬಳಿಕ ರಸ್ತೆ ದುರಸ್ಥಿ ಕಾರ್ಯವನ್ನು ಆರಂಭಿಸಲಾಗುತ್ತದೆ' ಎಂದು ಎಚ್.ಡಿ.ರೇವಣ್ಣ ತಿಳಿಸಿದರು.

English summary
After heavy rain and Landslide Shiradi Ghat may close for heavy vehicle. Karnataka PWD minister H.D.Revanna said that, decision will take soon on vehicle ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X