ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾಡಿ ಮತ್ತೆ ಬಂದ್: ಸುರಂಗ ಮಾರ್ಗ ನಿರ್ಮಾಣದ ಆಶ್ವಾಸನೆ ಏನಾಯಿತು?

By ಕೆ.ರಾಧಾಕೃಷ್ಣ ಹೊಳ್ಳ
|
Google Oneindia Kannada News

ಬೆಂಗಳೂರು ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆ ಮತ್ತೊಮ್ಮೆ ಬಂದ್‌ ಆಗಿದೆ. ಆ ಮೂಲಕ, ಪ್ರತೀ ಮಳೆಗಾಲದ ವೇಳೆ ಈ ಭಾಗದ ಜನರು ರಾಜಧಾನಿ ತಲುಪಲು ಹರಸಾಹಸ ಪಡುವುದು ಮುಂದುವರಿದಿದೆ.

ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ಭೂಕುಸಿತ ಉಂಟಾಗಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಕರಾವಳಿ ಹಾಗೂ ರಾಜಧಾನಿಗೆ ಇದ್ದ ಸಂಪರ್ಕ ಕೊಂಡಿ ಕಳಚಿದೆ.

ಶಿರಾಡಿ ಘಾಟ್ ಬಂದ್ ಮಾಡಲ್ಲ: ಸಚಿವ ಸಿ. ಸಿ. ಪಾಟೀಲ್‌ ಶಿರಾಡಿ ಘಾಟ್ ಬಂದ್ ಮಾಡಲ್ಲ: ಸಚಿವ ಸಿ. ಸಿ. ಪಾಟೀಲ್‌

ಈ ನಡುವೆ ಪ್ರತಿವರ್ಷ ಮಳೆಗಾಲದಲ್ಲಿ ಸಾರಿಗೆ ವಾಹನ ಚಾಲಕರು, ಪ್ರಯಾಣಿಕರು ತಮ್ಮ ಎಲ್ಲಾ ವಹಿವಾಟುಗಳ ವ್ಯವಸ್ಥೆಯನ್ನು ಬದಲಾವಣೆ ಮಾಡುವಂತಹ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಶಿರಾಡಿ ವಿಚಾರದಲ್ಲಿ ಕೊಟ್ಟಂತಹ ಆಶ್ವಾಸನೆಗಳನ್ನು ಜನ ಯಾಕೆ ಮರೆಯುತ್ತಾರೆ?

Shiradi Ghat Again Bandh: Promise Of Tunnel Construction Also Not Shaping Up

ಕಳೆದ ಹಲವಾರು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಂದ ಆಶ್ವಾಸನೆ ಸುರಿಮಳೆಯನ್ನೇ ಕೇಳಿದ್ದಾಗಿದೆ, ಆದರೆ, ಪ್ರಕೃತಿಗೆ ಹೊಂದಾಣಿಕೆಯಾಗುವ ಮತ್ತು ಎಲ್ಲಾ ಹವಾಮಾನಗಳಿಗೆ ಒಪ್ಪುವ ರಸ್ತೆ ಮಾಡುವಲ್ಲಿ ಕೇಂದ್ರ ಸರ್ಕಾರ ಹಿಂದೆ ಬಿದ್ದಿದೆ.

ವಾಣಿಜ್ಯ ನಗರಿ, ಹಾರ್ಬರ್ ನಗರ, ವಿದ್ಯಾವಂತರ ನಗರ ಅಂತ ಹೆಸರು ಗಳಿಸಿರುವ ದಕ್ಷಿಣ ಕನ್ನಡದಿಂದ ಆಯ್ಕೆ ಆಗಿ ಸಾಲು ಸಾಲು ಕೇಂದ್ರ ಮಂತ್ರಿಗಳು ಇದ್ದರೂ ಮತ್ತು ಆದರೂ, ಮತ್ತು ಮಾಜಿ ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣನವರು ಗುಂಡ್ಯದಲ್ಲಿ ಸಮಾವೇಶ ಮಾಡಿದರೂ ರಸ್ತೆ ಮಾತ್ರ ಬದಲಾವಣೆ ಆಗಲಿಲ್ಲ.

Shiradi Ghat Again Bandh: Promise Of Tunnel Construction Also Not Shaping Up

ಜ್ಯೆಕೊ ಸಂಸ್ಥೆಯಿಂದ ಸುರಂಗ ಮಾರ್ಗ ನಿರ್ಮಾಣದ ಆಶ್ವಾಸನೆಗಳೂ ಗಾಳಿಯಲ್ಲಿ ಗುಂಡು ಆಗಿದೆ. ಹಾಗಾಗಿ, ಮಂಗಳೂರು ಮತ್ತು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣ ಬಹಳ ಪ್ರಯಾಸ. ಸರ್ವಖುತು ರಸ್ತೆ ನಿರ್ಮಾಣ ಅದ್ಯಾವಾಗ ಆಗುತ್ತೋ? ಇನ್ನೆಷ್ಟು ದಿನ ರಾಜಕೀಯ ಇದರಲ್ಲಿ ಮೆರೆಯುತ್ತಾ?

ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳಿಗೆ ಸದ್ಯವಿರುವ ಬದಲಿ ಮಾರ್ಗ

1. ಮೈಸೂರು - ಮಡಿಕೇರಿ - ಸಂಪಾಜೆ ಘಾಟ್
2. ತೀರ್ಥಹಳ್ಳಿ - ಹುಲಿಕಲ್ - ಬಾಳೇಬಾರಿ ಘಾಟ್
3. ಹಾಸನ - ಅರಕಲಗೂಡು - ಚಾರ್ಮಾಡಿ ಘಾಟ್

English summary
Shiradi Ghat Again Bandh: Promise Of Tunnel Construction Also Not Shaping Up. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X