• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೃಹ ಸಚಿವ ಶಿಂದೆ ಫರ್ಮಾನಿಗೆ ಸಿಟಿ ರವಿ ಕಿಡಿಕಿಡಿ

By Srinath
|

ಬೆಂಗಳೂರು, ಅ.4: ಭಯೋತ್ಪಾದನೆಯ ಹೆಸರಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಬೇಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ಪಕ್ಷದ ವಕ್ತಾರ ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

'ಕೇಂದ್ರ ಗೃಹ ಸಚಿವ ಶಿಂದೆ ಪತ್ರ ಬರೆದಿರುವುದು ಅಸಂವಿಧಾನಿಕ ಮತ್ತು ಖಂಡನೀಯ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಶಿಂದೆ ಇಂಥ ಪತ್ರ ಬರೆದಿದ್ದಾರೆ' ಎಂದು ಇಬ್ಬರೂ ನಾಯಕರು ಅಭಿಪ್ರಾಪಟ್ಟಿದ್ದಾರೆ.

'ಮತೀಯ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪ್ರಯತ್ನ ಇದಾಗಿದೆ. ನಾವು ಜಾತ್ಯತೀತವಾದಿಗಳು ಎಂದು ಹೇಳುವ ಕಾಂಗ್ರೆಸ್ ನಾಯಕರು ಕೇವಲ ಒಂದು ಧರ್ಮದ ಯುವಕರ ಕುರಿತು ಕಾಳಜಿ ತೋರಿಸುವುದು ಸರಿಯಲ್ಲ. ನಿರಪರಾಧಿಗಳನ್ನು ಬಂಧಿಸಬಾರದು ಎಂದು ಸೂಚನೆ ನೀಡಿದ್ದರೆ ಒಪ್ಪಬಹುದಿತ್ತು. ಕೇಂದ್ರ ಗೃಹ ಸಚಿವರು ತಮ್ಮ ಹುದ್ದೆಗೆ ಘನತೆ ತರುವಂತೆ ನಡೆದುಕೊಂಡಿಲ್ಲ. ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು' ಎಂದೂ ಅವರು ಒತ್ತಾಯಿಸಿದ್ದಾರೆ.

'ದೇವಸ್ಥಾನದ ಚಿನ್ನದ ಮೇಲೆ ಆರ್‌ ಬಿಐ ಕಣ್ಣು ಹಾಕಿದೆ. ಭಕ್ತರು ಕೊಟ್ಟಿರುವ ಕಾಣಿಕೆಯನ್ನು ಯಾವ ಸರಕಾರಗಳೂ ವಾಪಸ್ ಪಡೆಯಬಾರದು. ಒಂದು ವೇಳೆ ವಶಕ್ಕೆ ಪಡೆದರೆ ಸರಕಾರ ಅಧಿಕಾರದಲ್ಲಿ ಉಳಿಯುವುದಿಲ್ಲ. ಕೇಂದ್ರದ ಯುಪಿಎ ಸರಕಾರದ ಮಂತ್ರಿಗಳು ಕೋಟಿ ಕೋಟಿ ಲೂಟಿ ಹೊಡೆದು ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿ ಈಗ ಪರಿಸ್ಥಿತಿ ನಿಭಾಯಿಸಲು ದೇವಸ್ಥಾನಗಳ ಚಿನ್ನದ ಮೇಲೆ ಕಣ್ಣು ಹಾಕಿದ್ದಾರೆ' ಎಂದು ಸಿಟಿ ರವಿ ಕಟಕಿಯಾಡಿದರು.

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ:

'ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿ ಹಲ್ಲೆ ನಡೆಸಿ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದಾರೆ. ಗದಗದ ಲಕ್ಷ್ಮೇಶ್ವರದಲ್ಲಿ ಮತ್ತು ಚಿಕ್ಕಮಗಳೂರಿನ ಹಲ್ದೂರಿನಲ್ಲಿ ಗಣಪತಿ ಮೆರವಣಿಗೆ ನಡೆಸುತ್ತಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಹಲ್ಲೆ ನಡೆಸಲಾಗಿದೆ. ಶಿರಾದಲ್ಲೂ ಹೀಗೇ ಆಗಿದೆ. ಅನ್ಯ ಧರ್ಮೀಯರ ಭಾವನೆಗೆ ಯಾವುದೇ ಧಕ್ಕೆಯಾಗದಂತೆ ಮೆರವಣಿಗೆ ನಡೆಸಿದರೂ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ' ಎಂದು ರವಿ ಟೀಕಿಸಿದ್ದಾರೆ.

'ದೇಶದ ಎಲ್ಲ ಮುಸ್ಲಿಮರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಭಾರತ ವಿಭಜನೆಯಾದ ಕಾಲಕ್ಕೆ ಕೋಟ್ಯಂತರ ಮುಸ್ಲಿಮರು ಇಲ್ಲೇ ಉಳಿದರು. ಅವರನ್ನೂ ಅನುಮಾನದಿಂದ ನೋಡಲಾದೀತೆ? ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
''Shinde is trying to divide the people and the nation on communal lines,” State BJP General Secretary C T Ravi and BJP Spokesperson Ashwathanarayana said and criticized the Union Home Minister for allegedly trying to disturb communal harmony in the country. Ravi demanded that Shinde should be sacked with immediately and the letter written by him to the Chief Ministers should be withdrawn forthwith.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more