ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಡ್ಲಘಟ್ಟದಲ್ಲಿ ಅಮರ ವಿಜ್ಞಾನಿ ಹರೀಶ್ ಸ್ಮರಣೆ

By Mahesh
|
Google Oneindia Kannada News

ಶಿಡ್ಲಘಟ್ಟ, ನವೆಂಬರ್ 19: ಇಲ್ಲಿನ ಕ್ರೆಸೆಂಟ್‌ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ದಿವಂಗತ ವಿಜ್ಞಾನಿ ಹರೀಶ್‌ ಆರ್‌ ಭಟ್‌ ಅವರ ಶ್ರದ್ಧಾಂಜಲಿ ಹಾಗೂ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖಪುಟ ವಿನ್ಯಾಸಗಳನ್ನು ಪ್ರದರ್ಶಿಸಿ ವಿನ್ಯಾಸಕ ಅಜಿತ್‌ ಕೌಂಡಿನ್ಯ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಪಕ್ಷಿಗಳ ಛಾಯಾಚಿತ್ರಗಳನ್ನು ವೀಕ್ಷಿಸಿದರು

ಐಐಎಸ್‌ಸಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ, ಸೆಕ್ಯುರಿಟಿ ಗಾರ್ಡ್ ಬಂಧನಐಐಎಸ್‌ಸಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ, ಸೆಕ್ಯುರಿಟಿ ಗಾರ್ಡ್ ಬಂಧನ

Shidlaghatta : In Memory of IISc scientist Harish R Bhat

ಮುಖಪುಟ ವಿನ್ಯಾಸವೆಂಬುದನ್ನು ಒಂದು ವಿಶಿಷ್ಟ ಕಲೆ. ಚಿತ್ರಕಲೆಯಂತೆಯೇ ಇದೂ ಕೂಡ ಕಲಾಕೃತಿಯೆಂಬಂತೆ ಒಪ್ಪಬಹುದು. ಮುಖಪುಟ ಕಲೆಯಲ್ಲಿ ಹೇರಳವಾದ ಪ್ರಯೋಗಗಳು ನಡೆಯುತ್ತಿವೆ ಎಂದು ಮುಖಪುಟ ವಿನ್ಯಾಸಕ ಅಜಿತ್‌ ಕೌಂಡಿನ್ಯ ತಿಳಿಸಿದರು.

ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ದಿವಂಗತ ವಿಜ್ಞಾನಿ ಹರೀಶ್‌ ಆರ್‌ ಭಟ್‌ ಅವರ ಶ್ರದ್ಧಾಂಜಲಿ ಹಾಗೂ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖಪುಟ ವಿನ್ಯಾಸಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.

Shidlaghatta : In Memory of IISc scientist Harish R Bhat

ಮುಖಪುಟ ವಿನ್ಯಾಸ ಮಾಡುವುದು ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ. ಕಲೆಯ ಅಭಿವ್ಯಕ್ತಿಗೆ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳಬಹುದು. ಆದರೆ ತಂತ್ರಜ್ಞಾನಕ್ಕೂ ಮಿಗಿಲಾಗಿ ಕಲಾವಿದನ ಆಲೋಚನಾ ಕ್ರಮ, ಸೃಜನಶೀಲತೆ, ಚಿಂತನೆ, ಬಣ್ಣಗಳ ಆಯ್ಕೆ, ಅಭಿವ್ಯಕ್ತಿ ಎಲ್ಲವೂ ಬಹಳ ಮುಖ್ಯ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು ಎಂದು ಹೇಳಿದರು.

ಐಐಎಸ್ಸಿ ಅಧ್ಯಯನ ತೆರೆದಿಟ್ಟ ಬೆಂಗಳೂರು ಪ್ರವಾಹದ ಹಿಂದಿನ ಕಾರಣಗಳುಐಐಎಸ್ಸಿ ಅಧ್ಯಯನ ತೆರೆದಿಟ್ಟ ಬೆಂಗಳೂರು ಪ್ರವಾಹದ ಹಿಂದಿನ ಕಾರಣಗಳು

'ಶಿಡ್ಲಘಟ್ಟ ತಾಲ್ಲೂಕಿನ ಜೀವವೈವಿಧ್ಯ' ಎಂಬ ವಿಷಯವಾಗಿ ಮಾತನಾಡಿದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಹಕ್ಕಿಗಳು, ಹಾವುಗಳು, ಕೀಟಗಳು ಮುಂತಾದ ಚಿತ್ರಗಳನ್ನು ಸ್ಲೈಡ್‌ ಶೋ ಮೂಲಕ ಪ್ರದರ್ಶಿಸಿ ವಿವರಿಸಿದರು.

Shidlaghatta : In Memory of IISc scientist Harish R Bhat

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಮಾತನಾಡಿ, ದಿವಂಗತ ವಿಜ್ಞಾನಿ ಹರೀಶ್‌ ಆರ್‌ ಭಟ್‌ ಅವರ ಸಾಧನೆ, ಕೊಡುಗೆ, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅವರು ನೀಡಿರುವ ಪ್ರೇರಣೆ ಹಾಗೂ ಅವರ ಒಡನಾಟದ ಬಗ್ಗೆ ಹೇಳಿದರು.

ಕ್ರೆಸೆಂಟ್‌ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್‌ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಹೋಟೆಲ್‌ ವ್ಯವಸ್ಥಾಪಕ ವಿ.ವೆಂಕಟರಮಣ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

English summary
Crescant School organised Dr.Harish Bhat's commemorative event. Harish Bhat was scientist in the field of habitat ecology and wildlife biology more than 16 years at IISc, Bengaluru. Highly knowledgeable on birds and plants of Western Ghats, he has authored several books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X