ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಮುಖಂಡರ ರಾಜಕಾರಣಕ್ಕೆ ಬ್ರೇಕ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಸ್ತ್ರೀ ಶಕ್ತಿ ಸಂಘಟನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.

ಲೇಡೀಸ್ ಫೇವರಿಟ್ ಸಿದ್ದರಾಮಯ್ಯ, ಸೆಲ್ಫಿಗಾಗಿ ಮುಗಿಬಿದ್ದ ಮಹಿಳೆಯರು ಲೇಡೀಸ್ ಫೇವರಿಟ್ ಸಿದ್ದರಾಮಯ್ಯ, ಸೆಲ್ಫಿಗಾಗಿ ಮುಗಿಬಿದ್ದ ಮಹಿಳೆಯರು

ಸ್ತ್ರೀ ಶಕ್ತಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಇರಲು ಬಯಸುವ ಯಾವುದೇ ವ್ಯಕ್ತಿ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿ ಆಗುವಂತಿಲ್ಲ. ಅಂದರೆ ಸಕ್ರಿಯ ಸದಸ್ಯ ಆಗುವಂತಿಲ್ಲ. ಒಂದು ವೇಳೆ ರಾಜಕೀಯ ಪಕ್ಷದಲ್ಲಿ ಸಕ್ರಿಯನಾಗಿದ್ದರೆ ಸ್ತ್ರೀ ಶಕ್ತಿ ಸಂಘಟನೆಗಳಲ್ಲಿ ಪ್ರತಿನಿಧಿ ಆಗುವಂತಿಲ್ಲ.

ಶಬರಿಮಲೆಗೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ: ವೈರಲ್ ಆದ ಪ್ರಕಟಣೆ ಶಬರಿಮಲೆಗೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ: ವೈರಲ್ ಆದ ಪ್ರಕಟಣೆ

ಮಹಿಳಾ ಸಬಲೀಕರಣದ ಉದ್ದೇಶದಿಂದ ಸ್ಥಾಪನೆಯಾಗಿರುವ ಸ್ತ್ರೀಶಕ್ತಿ ಒಕ್ಕೂಟಗಳನ್ನು ರಾಜಕೀಯ ಸಹವಾಸದಿಂದ ದೂರವಿಡಲು ಪಂಚಸೂತ್ರಗಳನ್ನು ಹೆಣೆಯಲಾಗಿದೆ.

SHG representatives cant involve in political parties

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ನೋಂದಾಯಿತವಾಗಿರುವ ಒಕ್ಕೂಟಗಳ ಕಾರ್ಯನಿರ್ವಹಣೆ ಬೈಲಾಗೆ ಹೊಸ ನಿಬಂಧನೆ ಸೇರಿಸಲು ಇಲಾಖೆ ಆದೇಶ ನೀಡಿದೆ. ಈ ಕುರಿತು ಎಲ್ಲಾ ಡಿಡಿಗಳಿಗೂ ಲಿಖಿತ ಪತ್ರ ರವಾನಿಸಲಾಗಿದೆ.

ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದುಕೊಂಡೇ ಹಲವು ಕಡೆಗಳಲ್ಲಿ ಒಕ್ಕೂಟಗಳನ್ನು ಮುನ್ನಡೆಸಿದ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೂ ಕಡಿವಾಣ ಹಾಕಲಾಗುತ್ತಿದ್ದು, ಏಕಕಾಲದಲ್ಲಿ ಒಂದು ಹುದ್ದೆಯನ್ನು ನಿರ್ವಹಿಸಬೇಕೆಂಬ ನಿಯಮ ತರಲಾಗಿದೆ.

English summary
Representatives of women self help group now onwards couldn't be involved in any political party activities since the organization should be non political, new law was imposed by department of women and child development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X