ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಗಿಲಿಗೆ ಬರಲಿದೆ ಮೇಕೆ, ಕುರಿ ಮಾಂಸ, ಬೆಲೆಯೂ ಕಡಿಮೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಮನೆ ಬಾಗಿಲಿಗೆ ಆಹಾರ ತಲುಪಿಸುವ ಅನೇಕ ಅಪ್ಲಿಕೇಶನ್‌ಗಳಿವೆ. ಆದರೆ ರಾಜ್ಯದ ಸಂಘವೊಂದು ಮನೆ ಬಾಗಿಲಿಗೆ ಮಾಂಸವನ್ನು ತಲುಪಿಸುವ ಯೋಚನೆ ಮಾಡಿದೆ.

ಗ್ರಾಹಕರ ಮನೆ ಬಾಗಿಲಿಗೆ ಕುರಿ ಮತ್ತು ಮೇಕೆಯ ಉತ್ಕೃಷ್ಟ ಗುಣಮಟ್ಟದ ಮಾಂಸವನ್ನು ಪೂರೈಸುವ 'ಡಯಲ್ ಫಾರ್ ಮಟನ್' ಎಂಬ ಆಪ್ ಅನ್ನು ಅಭಿವೃದ್ಧಿ ಪಡಿಸುವ ನಿರ್ಣಯವನ್ನು ರಾಜ್ಯ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಸಂಘ ಮಾಡಿದೆ.

ಬೈರತಿ ಬಸವರಾಜು ಇಂದ ಭರ್ಜರಿ ಬಾಡೂಟ, ಮುಗಿಬಿದ್ದ ಮತದಾರರುಬೈರತಿ ಬಸವರಾಜು ಇಂದ ಭರ್ಜರಿ ಬಾಡೂಟ, ಮುಗಿಬಿದ್ದ ಮತದಾರರು

ನಗರದ ಕೆಲವು ಭಾಗಗಳಲ್ಲಿ ಮುಂದಿನ ವಾರದಿಂದ ಗ್ರಾಹಕರ ಮನೆ ಬಾಗಿಲಿಗೆ ಮಾಂಸ ಪೂರೈಕೆ ಮಾಡಲಾಗುತ್ತದೆ. ಸ್ಥಳೀಯ ಪಶುವೈದ್ಯರು ಪ್ರಮಾಣೀಕರಿಸಿದ ಮಾಂಸವನ್ನು ಮಾರುಕಟ್ಟೆ ದರದಲ್ಲೇ ಒದಗಿಸಲು ನಿರ್ಧರಿಸಲಾಗಿದ್ದು, ಕನಿಷ್ಟ ಅರ್ಧ ಕೆಜಿ ಮಾಂಸ ಆರ್ಡರ್‌ ಮಾಡಬೇಕಾಗಿದೆ.

Shepherd Organization Mutton And Goat Meat Home Delivery

ಬೆಂಗಳೂರು ಮಾತ್ರವಲ್ಲದೆ ಇನ್ನೂ ಕೆಲವು ಜಿಲ್ಲೆಗಳಲ್ಲಿಯೂ ಈ ಆಪ್ ಮೂಲಕ ಕುರಿ ಮತ್ತು ಮೇಕೆಯ ಮಾಂಸವನ್ನು ತಿನ್ನುವವರ ಮನೆ ಬಾಗಿಲಿಗೆ ತಲುಪಿಸುವ ಯೋಚನೆ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಸಂಘಕ್ಕೆ ಇದೆ. ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರದಲ್ಲಿ ಈ ವಧಾಗಾರಗಳನ್ನು ತೆರೆಯಲಾಗುವುದು ಎಂದರು.

ದನ, ಹಂದಿ ಮಾಂಸಾಹಾರ ಡೆಲಿವೆರಿ ಮಾಡುವುದಿಲ್ಲ: ಜೊಮ್ಯಾಟೊ ಸಿಬ್ಬಂದಿ ಪ್ರತಿಭಟನೆದನ, ಹಂದಿ ಮಾಂಸಾಹಾರ ಡೆಲಿವೆರಿ ಮಾಡುವುದಿಲ್ಲ: ಜೊಮ್ಯಾಟೊ ಸಿಬ್ಬಂದಿ ಪ್ರತಿಭಟನೆ

ಸಾಕಿದ ಕುರಿ-ಮೇಕೆಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದೆವು, ಇದರಲ್ಲಿ ಬಹುತೇಕ ಹಣ ದಲ್ಲಾಳಿಗಳಿಗೆ ಸೇರುತ್ತಿದ್ದು ಸಾಗಾಣಿಕೆದಾರರಿಗೆ ಹೆಚ್ಚಿನ ಹಣ ದೊರೆಯುತ್ತಿಲ್ಲ ಹಾಗಾಗಿ ನಾವೇ ಗ್ರಾಹಕರಿಗೆ ಮಾಂಸವನ್ನು ತಲುಪಿಸುತ್ತೇವೆ ಎಂದು ರಾಜ್ಯ ಕುರಿ-ಮೇಕೆ ಸಾಗಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‌ಗೌಡ ಹೇಳಿದ್ದಾರೆ.

ಇನ್ಮುಂದೆ ಸರ್ಕಾರದ ವತಿಯಿಂದಲೇ ಚಿಕನ್, ಮಟನ್ ಭಾಗ್ಯ!ಇನ್ಮುಂದೆ ಸರ್ಕಾರದ ವತಿಯಿಂದಲೇ ಚಿಕನ್, ಮಟನ್ ಭಾಗ್ಯ!

ರಾಜ್ಯದ 24 ಜಿಲ್ಲೆಗಳಲ್ಲಿ ಕುರಿ-ಮೇಕೆ ಸಾಕಾಣಿಕೆ ಮಾಡಲಾಗುತ್ತಿದ್ದು, 15 ಲಕ್ಷ ಸಾಕಾಣಿಕೆದಾರರಿದ್ದು, 97 ಲಕ್ಷ ಕುರಿ ಹಾಗೂ 47 ಲಕ್ಷ ಮೇಕೆಗಳಿವೆ. ಆರೋಗ್ಯವಂತ ವ್ಯಕ್ತಿಗೆ ವಾರ್ಷಿಕ 11 ಕೆಜಿ ಮಾಂಸ ಬೇಕಾಗಿದ್ದು, ಈಗ ಆರು ಕೆಜಿ ಮಾತ್ರ ಬಳಕೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

English summary
Karnataka Sheep and Goat breeders organization decided ti deliver mutton and goat meat to home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X