ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ಜನರನ್ನು ತಲುಪಲಿರುವ ಶೆಲ್ ಡ್ರೈವ್‌ ಸೇಫ್‌ ಇಂಡಿಯಾ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 14: ಎರಡು ವರ್ಷಗಳ ಹಿಂದೆ ದೇಶಾದ್ಯಂತ ಸುರಕ್ಷಿತ ಚಾಲನೆಗಾಗಿ ಅಭಿಯಾನ ಆರಂಭಿಸಿದ್ದ ಶೆಲ್‌ ಇಂಡಿಯಾ, ಅದರ ಅಭೂತಪೂರ್ವ ಯಶಸ್ಸು ಕಂಡಿತ್ತು. ಈಗ ಮತ್ತೊಂದು ಹಂತದ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ಶೆಲ್‌ ಇಂಡಿಯಾ, ವಿಷನ್‌ ಇನ್‌ಸ್ಟಿಟ್ಯೂಟ್‌ (ಐವಿಐ)ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಶೆಲ್‌ ಇಂಡಿಯಾ, 2019ರ ಫೆಬ್ರವರಿಯಲ್ಲಿ ಆರಂಭಿಸಿದ್ದ #DriveSafeIndia ಕಾರ್ಯಕ್ರಮಕ್ಕೆ ದೇಶಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯಡಿ 2.6 ಲಕ್ಷ ಚಾಲಕರ ತಪಾಸಣೆ ನಡೆಸಿದ್ದು, ಸುಮಾರು 1.75 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 2019ನೇ ಸಾಲಿನ ರಸ್ತೆ ಸುರಕ್ಷತೆಯ ಕೊಡುಗೆಗಾಗಿ ಈ ಕಾರ್ಯಕ್ರಮಕ್ಕೆ ಕೋವೆಟೆಡ್‌ ಪ್ರಿನ್ಸ್‌ ಮೈಕೆಲ್‌ ಇಂಟರ್‌ನ್ಯಾಷನಲ್‌ ರೋಡ್‌ ಸೇಫ್ಟಿ ಪ್ರಶಸ್ತಿ ಕೂಡ ಲಭಿಸಿದೆ.

ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ, ಸರ್ಕಾರದ ನಿಯಮಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ , ಶೆಲ್ ಡ್ರೈವ್ ಸೇಫ್ ಇಂಡಿಯಾ ಕಾರ್ಯಕ್ರಮ ಮುಂದುವರಿದಿತ್ತು. ಭಾರತೀಯ ರಸ್ತೆಗಳನ್ನು ಸುರಕ್ಷಿತವಾಗಿರಿಸುವ ಮುಂದುವರಿದ ಪ್ರಯತ್ನದ ಭಾಗವಾಗಿ, ಶೆಲ್ ಈಗ ಮತ್ತೊಂದು ಪಾಲುದಾರರೊಂದಿಗೆ ಕೈಜೋಡಿಸಿದೆ. ಇಂಡಿಯಾ ವಿಷನ್ ಇನ್‌ಸ್ಟಿಟ್ಯೂಟ್ (ಭಾರತದ ದೂರದ ಭಾಗಗಳಲ್ಲಿ ಹಿಂದುಳಿದವರಿಗೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ಒದಗಿಸುವ ಸ್ವಯಂ ಸೇವಾಸಂಸ್ಥೆ) ಈ ಉಪಕ್ರಮದ ಹೊಸ ಭಾಗವಾಗಿರಲಿದ್ದು, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ದೃಷ್ಟಿ ಪರೀಕ್ಷಾ ಶಿಬಿರಗಳನ್ನು ವಿಸ್ತರಿಸುವ ಗುರಿ ಹೊಂದಿದೆ.

Shell launches next phase of DriveSafeIndia program covering one lakh drivers by March 2022

ವಿಶ್ವ ದೃಷ್ಟಿ ದಿನಕ್ಕಿಂತ ಮುಂಚಿತವಾಗಿ ಚೆನ್ನೈನಲ್ಲಿ ಈ ವರ್ಷದ ಡ್ರೈವ್ ಸೇಫ್ ಇಂಡಿಯಾ ಕಾರ್ಯಕ್ರಮವನ್ನು ಅಧಿಕೃತವಾಗಿ ಆರಂಭಿಸಲಾಗಿದ್ದು, 1 ಲಕ್ಷ ಹೆಚ್ಚುವರಿ ಚಾಲಕರನ್ನು ತಲುಪುವ ಗುರಿ ಹೊಂದಲಾಗಿದೆ. ಇದರಲ್ಲಿ 50,000 ವಾಣಿಜ್ಯ ವಾಹನಗಳು ಮತ್ತು ಟ್ರಕ್ ಚಾಲಕರ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು.

ಪಾಲುದಾರಿಕೆ ಬಗ್ಗೆ ಮಾತನಾಡಿದ ಶೆಲ್‌ ಇಂಡಿಯಾ, ಮೊಬಿಲಿಟಿಯ ನಿರ್ದೇಶಕ ಸಂಜಯ್‌ ವಾರ್ಕೆ, ''ಶೆಲ್‌ನಲ್ಲಿ ನಾವು ಎಲ್ಲರ ರಸ್ತೆ ಸುರಕ್ಷತೆ ಅತ್ಯಗತ್ಯ ಎಂಬುದನ್ನು ನಂಬುತ್ತೇವೆ ಮತ್ತು #DriveSafeIndia ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಯಾಗಿದೆ. ದೇಶದ 3 ಅತಿ ಹೆಚ್ಚು ಅಪಘಾತ ವರದಿಯಾಗುವ ರಾಜ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕ ಕೂಡ ಸೇರಿವೆ. ಈ ಕಾರ್ಯಕ್ರಮದ ಮೂಲಕ ನಾವು ಚಾಲಕರ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆಯಿಂದ ಸುರಕ್ಷಿತ ಚಾಲನೆ ಹಾಗೂ ಅಪಘಾತ ಪ್ರಮಾಣ ಕಡಿಮೆಗೊಳಿಸಲು ಕೊಡುಗೆ ನೀಡುತ್ತಿದ್ದೇವೆ,'' ಎಂದರು.

ಐವಿಐ ಸಿಇಓ ವಿನೋದ್‌ ಡೇನಿಯಲ್‌ ಮಾತನಾಡಿ, ''ಐವಿಐ ಈಗಾಗಲೇ ವಾಣಿಜ್ಯ ವಾಹನಗಳು ಹಾಗೂ ಟ್ರಕ್‌ಗಳ ಚಾಲಕರು ಸೇರಿದಂತೆ ಶಾಲಾ ಮಕ್ಕಳು ಮತ್ತು ವಯಸ್ಕರ ನೇತ್ರ ತಪಾಸಣೆ ನಡೆಸಿದ ಅನುಭವ ಹೊಂದಿದೆ. ಈ ಎರಡು ಸಂಸ್ಥೆಗಳ ನಡುವಿನ ಪಾಲುದಾರಿಕೆ ಟ್ರಕ್‌ ಚಾಲಕರ ಕಣ್ಣಿನ ಸಮಸ್ಯೆ ಪರಿಹರಿಸಲು ನೆರವಾಗುವ ಭರವಸೆಯಿದೆ,'' ಎಂದರು.

"ಐವಿಐ ಭಾರತದಾದ್ಯಂತ 22 ರಾಜ್ಯಗಳಲ್ಲಿ ಶಾಲಾ ಮಕ್ಕಳು ಮತ್ತು ವಯಸ್ಕರು, ಚಾಲಕರು ಮತ್ತು ಸಂಬಂಧಿತ ಸಾರಿಗೆ ಕೆಲಸಗಾರರ ಯೋಗಕ್ಷೇಮಕ್ಕಾಗಿ ಕೆಲಸ ಮಾಡುತ್ತಿದೆ. #DriveSafeIndia ಕಾರ್ಯಕ್ರಮವನ್ನು ರಸ್ತೆ ಸುರಕ್ಷತೆಯ ಸಮಸ್ಯೆ ಪರಿಹರಿಸುವಲ್ಲಿ ಒಂದು ಪ್ರಮುಖ ಉತ್ತಮ ದೃಷ್ಟಿ ಹೊಂದಿರುವ ಚಾಲಕರಿಂದ ಕಡಿಮೆ ರಸ್ತೆ ಅಪಘಾತಗಳು, ಸಾವುನೋವುಗಳು ಮತ್ತು ಅನಗತ್ಯ ಗಾಯಗಳು ಉಂಟಾಗುತ್ತವೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Recommended Video

IPL ಟ್ರೋಫಿ ಗೆಲ್ಲೋದಕ್ಕೆ ಅರ್ಹವಾಗಿರೋರು ನಾವಲ್ಲ ಎಂದ ಧೋನಿ!ಮತ್ಯಾರು? | Oneindia Kannada

ದೇಶಾದ್ಯಂತ ಪ್ರತಿವರ್ಷ ಸುಮಾರು 1,51,000 ರಸ್ತೆ ಅಪಘಾತ -ಸಾವುಗಳು ವರದಿಯಾಗುತ್ತಿದ್ದು, ವಾಹನಗಳ ಸಂರಕ್ಷಣೆ ಮಾತ್ರವಲ್ಲ, ಮುಖ್ಯವಾಗಿ ಚಾಲಕರ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಾಗಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಒಂದು 2019 ರ ಅಧ್ಯಯನ ವರದಿಯು ತಮಿಳುನಾಡಿನಲ್ಲಿ ವರದಿಯಾದ ರಸ್ತೆ ಅಪಘಾತಗಳ ಸಂಖ್ಯೆ 59,499. ಇದು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು. 40,666 ಪ್ರಕರಣಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

English summary
Shell’s #DriveSafeIndia Program, launched in February 2019, has screened more than 2.6 lakh drivers and has been able to address vision issues of approx.1.75 lakh by providing them free pairs of spectacles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X