ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೆ ಮಹಾದೇವಿ ನಾಲಾಯಕ್ ಎಂದ ಕೊಳದ ಮಠದ ಸ್ವಾಮೀಜಿ

|
Google Oneindia Kannada News

Recommended Video

Kolada mata Shantaveera swamiji abuses Mate Mahadevi in Bagalkot on Monday | Oneindia Kannada

ಬಾಗಲಕೋಟೆ, ಸೆಪ್ಟೆಂಬರ್ 4: "ಆಕೆ ಮಾತಿನ ದೆವ್ವ, ಮಾತೆ ಮಹಾದೇವಿಯಲ್ಲ. ಗುರು ದ್ರೋಹಿ ಹಾಗೂ ನಾಲಾಯಕ್" ಎಂದು ಮಾತೆ ಮಹಾದೇವಿ ವಿರುದ್ಧ ಕೊಳದ ಮಠದ ಶಾಂತವೀರ ಸ್ವಾಮೀಜಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಪ್ರತೇಕ ಲಿಂಗಾಯತ ಧರ್ಮಕ್ಕೆ ಶಿವಕುಮಾರ ಸ್ವಾಮಿಜಿ ಹೇಳಿದ್ದೇನು?ಪ್ರತೇಕ ಲಿಂಗಾಯತ ಧರ್ಮಕ್ಕೆ ಶಿವಕುಮಾರ ಸ್ವಾಮಿಜಿ ಹೇಳಿದ್ದೇನು?

ಇಲ್ಲಿ ನಡೆಯುತ್ತಿರುವ ವಿವಿಧ ಮಠಾಧೀಶರ ಸಭೆಯಲ್ಲಿ ಭಾಗವಹಿಸಿರುವ ಅವರು ಮಾಧ್ಯಮಗಳ ಜತೆ ಮಾತನಾಡಿ, "ಬಸವಣ್ಣನವರ ವಚನಗಳ ಅಂಕಿತ ಕೂಡಲ ಸಂಗಮದೇವ ಎಂಬುದನ್ನು ಲಿಂಗದೇವ ಎಂದು ಬದಲಾಯಿಸಿದ್ದಾರೆ. ಯಾರು ಆ ಲಿಂಗದೇವ? ಮಾತೆ ಮಹಾದೇವಿಗೂ ಆ ಲಿಂಗದೇವನಿಗೂ ಏನು ಸಂಬಂಧ? ಆತ ಬದುಕಿದ್ದಾನೋ ಅಥವಾ ಸತ್ತಿದ್ದಾನೋ" ಎಂದು ಪ್ರಶ್ನಿಸಿದ್ದಾರೆ.

Shantaveera seer abuses Mate Mahadevi

"ಲಿಂಗದೇವ ಹಾಗೂ ಮಹಾದೇವಿ ಮಧ್ಯೆ ಅದೆಂಥ ಸಂಬಂಧ? ತಾಯಿ-ಮಗನದೋ, ತಾಯಿ-ಮಗಳದೋ? ಅದೇನು ಅಂತ ಅವರೇ ತಿಳಿಸಬೇಕು" ಎಂದು ಕೂಡ ಹೇಳಿದ್ದಾರೆ. ತಮ್ಮ ಮಾತಿನ ಉದ್ದಕ್ಕೂ ಮಾತೆ ಮಹಾದೇವಿ ಅವರನ್ನು ಶಾಂತವೀರ ಸ್ವಾಮೀಜಿ ಏಕವಚನದಲ್ಲಿ ಸಂಬೋಧಿಸಿದ್ದಾರೆ.

ವೀರಶೈವ ಲಿಂಗಾಯತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನವೀರಶೈವ ಲಿಂಗಾಯತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಾತೆ ಮಹಾದೇವಿ, ನಮ್ಮ ಗುರುಗಳ ಹೆಸರು ಲಿಂಗಾನಂದ ಸ್ವಾಮೀಜಿ. ಅವರ ಹೆಸರನ್ನು ವಚನಗಳಿಗೆ ಇಟ್ಟಿದ್ದೇನೆ. ಇನ್ನು ಪರಮಾತ್ಮನನ್ನು ಲಿಂಗದೇವ ಎನ್ನುತ್ತಾರೆ. ಸಾತ್ವಿಕ ಹಾದಿಯಲ್ಲಿ ಪ್ರಶ್ನಿಸುವವರಿಗೆ ಉತ್ತರಿಸಬಹುದು. ಈ ರೀತಿಯ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬ ಹೋರಾಟದಲ್ಲಿ ಇರುವ ಸ್ವಾಮೀಜಿಗಳ ಗುಂಪಿನಲ್ಲಿ ಮಾತೆ ಮಹಾದೇವಿ ಅವರು ಕೂಡ ಇದ್ದಾರೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿ ಎಂಬುದು ಪಂಚಪೀಠ ಸೇರಿದಂತೆ ಕೆಲವು ಸ್ವಾಮೀಜಿಗಳ ಅಭಿಪ್ರಾಯ ಆಗಿದೆ.

'ಒನ್ ಇಂಡಿಯಾ'ಕ್ಕಾಗಿ ಮಾತೆ ಮಹದೇವಿ ನೀಡಿದ ವಿಶೇಷ ಸಂದರ್ಶನ'ಒನ್ ಇಂಡಿಯಾ'ಕ್ಕಾಗಿ ಮಾತೆ ಮಹದೇವಿ ನೀಡಿದ ವಿಶೇಷ ಸಂದರ್ಶನ

ಈ ಹೋರಾಟದ ವಿಚಾರವಾಗಿಯೇ ಮಾತೆ ಮಹಾದೇವಿ ಅವರ ವಿರುದ್ಧ ಈ ಹಿಂದೆ ರಂಭಾಪುರಿ ಶ್ರೀಗಳು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕೊಳದ ಮಠದ ಸ್ವಾಮೀಜಿ ಕೂಡ ಆಕ್ಷೇಪಾರ್ಹ ಅನಿಸುವಂಥ ಹೇಳಿಕೆ ನೀಡಿದ್ದಾರೆ.

English summary
Kolada mata Shantaveera seer abuses Mate Mahadevi in Bagalkot on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X