ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಶಕ್ತಿ ಪಕ್ಷ ಸ್ಥಾಪಿಸಿದ ಶಂಕರ ಬಿದರಿ

|
Google Oneindia Kannada News

Shankar Bidari
ಬೆಂಗಳೂರು, ಜ.23 : ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಕೊನೆಗೂ ಅಂತಿಮ ರಾಜಕೀಯ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಜನಶಕ್ತಿ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಫೆಬ್ರವರಿ ತಿಂಗಳಿನಿಂದ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಅವರು ಘೋಷಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಬಿದರಿ, ರಾಜ್ಯದ ಯಾವ ಪಕ್ಷವೂ ಸರಿಯಿಲ್ಲ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೊಸ ಪಕ್ಷ ಸ್ಥಾಪಿಸಿದ್ದೇನೆ ಎಂದು ಹೇಳಿದರು. ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ತೊರೆದ ಮೇಲೆ ಬಿಜೆಪಿ, ಜೆಡಿಎಸ್, ಬಿಎಸ್ಪಿ ಪಕ್ಷದಿಂದ ನನಗೆ ಆಹ್ವಾನ ಬಂದಿತ್ತು. ಆದರೆ, ನಾನು ನಂಬಿದ ತತ್ವ ಸಿದ್ಧಾಂತಗಳಿಗೆ ಯಾವ ಪಕ್ಷವೂ ಪೂರಕವಾದ ಕಾರಣ ಜನಶಕ್ತಿ ಎಂಬ ಪಕ್ಷ ಸ್ಥಾಪಿಸಿದ್ದೇನೆ ಎಂದು ಶಂಕರ ಬಿದರಿ ಹೇಳಿದರು.ಪಕ್ಷದ ಕಾರ್ಯಕಾರಿ ಸಮಿತಿಯ 15 ಸದಸ್ಯರ ಹೆಸರನ್ನು ಈ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು. [ಬಿದರಿ ಕೈ ತಪ್ಪಿದ ರಾಜ್ಯಾಧ್ಯಕ್ಷ ಸ್ಥಾನ]

ಜನಶಕ್ತಿ ಎಂಬುದು ಶಂಕರ ಬಿದರಿ ಅವರ ನೂತನ ಪಕ್ಷದ ಹೆಸರಾಗಿದ್ದು, ಜಸಾಮಾನ್ಯ ಜನರಿಗೆ ಶಕ್ತಿ ಎಂಬುದು ಪಕ್ಷದ ಅಡಿ ಬರಹವಾಗಿದೆ. ಫೆಬ್ರವರಿ ತಿಂಗಳಿನಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ಆರಂಭಿಸಲಾಗುವುದು ಎಂದು ಶಂಕರ ಬಿದರಿ ತಿಳಿಸಿದರು. ಪಕ್ಷದ ಚಿಹ್ನೆ ನೀಡುವ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು ಪಕ್ಷಗಳನ್ನು ತೊರೆದು ಸೂಕ್ತ ಪಕ್ಷದ ಹುಡುಕಾಟದಲ್ಲಿದ್ದ ಶಂಕರ ಬಿದರಿ ಕೊನೆಗೂ ಯಾವ ಪಕ್ಷವನ್ನು ಸೇರದೆ ತಮ್ಮ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾದ ಉದಾಹರಣೆಗಳು ಶಂಕರ ಬಿದರಿ ಅವರ ಮುಂದಿದೆ. ಆದರೆ, ತಮ್ಮ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಜನಶಕ್ತಿ ಪಕ್ಷದ ಮೂಲಕ ಬಿದರಿ ಹೊಸ ರಾಜಕೀಯ ಹೆಜ್ಜೆ ಆರಂಭಿಸಿದ್ದಾರೆ.

English summary
Former IGP Shankar Bidari launched the new Janashkthi party in Bangalore on Thursday, Jan 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X