ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿದೆ ನೋಡಿ ಬಿದರಿ ಜನಶಕ್ತಿ ಪಕ್ಷದ ಭರವಸೆಗಳು

|
Google Oneindia Kannada News

ಬೆಂಗಳೂರು, ಜ.24 : ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ತಮ್ಮ ಹೊಸ ಪಕ್ಷ ಜನಶಕ್ತಿಯೊಂದಿಗೆ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿರುವ ಅವರು, ಬಾಗಲಕೋಟೆಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಬಿದರಿ ಹೊಸ ಪಕ್ಷದ ಹೆಸರನ್ನು ಪ್ರಕಟಿಸಿದ್ದಾರೆ. ತಮ್ಮ ಜನಶಕ್ತಿ ಪಕ್ಷದಿಂದ ಬಿದರಿ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ತಮ್ಮ ಪಕ್ಷದ ಕಾರ್ಯಕ್ರಮಗಳನ್ನೂ ಚುನಾವಣಾ ಪ್ರಣಾಳಿಕೆ ಮಾದರಿಯಲ್ಲಿ ಬಿದರಿ ಬಿಡುಗಡೆಗೊಳಿಸಿದ್ದಾರೆ. [ಶಂಕರ ಬಿದರಿ ಹೊಸ ಪಕ್ಷ ಸ್ಥಾಪನೆ]

Shankar Bidari

ಜನಶಕ್ತಿ ಪಕ್ಷಕ್ಕೆ ಶಂಕರ ಬಿದರಿ ಅಧ್ಯಕ್ಷರಾಗಿದ್ದು, ನಾಲ್ವರು ಉಪಾಧ್ಯಕ್ಷರು, ಹತ್ತು ಮಂದಿ ಪ್ರಧಾನ ಕಾರ್ಯದರ್ಶಿಗಳು, ನಾಲ್ವರು ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಬಗ್ಗೆ ಜನರಲ್ಲಿ ಪ್ರಚಾರ ನಡೆಸಲಾಗುವುದು ಎಂದು ಶಂಕರ ಬಿದರಿ ಹೇಳಿದ್ದಾರೆ.

ಜನಶಕ್ತಿ ಪಕ್ಷದ ಪ್ರಮುಖ ಭರವಸೆಗಳು
* ಸಮಾಜದ ಎಲ್ಲ ವರ್ಗಗಳಿಗೂ ರಾಜಕೀಯ ಪ್ರಾತಿನಿಧಿತ್ವ. ಹಿಂದುಳಿದ ವರ್ಗಗಳಿಗೆ ಶೇ.25ರಷ್ಟು, ಅಲ್ಪಸಂಖ್ಯಾತರಿಗೆ ಶೇ.12 ಮತ್ತು ಮಹಿಳೆಯರಿಗೆ ಕನಿಷ್ಠ ಶೇ.20ರಷ್ಟು ಸ್ಥಾನ ಮೀಸಲು.
* ರಾಜ್ಯ ಮಟ್ಟದಲ್ಲಿ ಸೂಕ್ತ ಕಾನೂನು ಮಾರ್ಪಾಡು ಮಾಡಿ ಯಾವುದೇ ಅಪರಾಧ ಅಥವಾ ದಿವಾಣಿ ಮೊಕದ್ದಮೆಗಳು ಆರಂಭಿಕ ನ್ಯಾಯಾಲಯದಲ್ಲಿ ಎರಡು ವರ್ಷಗಳಲ್ಲಿ ಮತ್ತು ಮೇಲ್ಮನವಿಗಳು ಒಂದು ವರ್ಷದಲ್ಲಿ ಇತ್ಯರ್ಥವಾಗುವಂತೆ ವ್ಯವಸ್ಥೆ. ಐದು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಂಚನೆ, ಹಣ ದುರುಪಯೋಗ, ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ.
* ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲ ಪ್ರಕರಣಗಳನ್ನು ಎರಡು ವರ್ಷಗಳ ಅವಧಿಯಲ್ಲಿ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು.
* ಅನ್ನಭಾಗ್ಯ ಯೋಜನೆ ಸಮಾಜದ ಎಲ್ಲ ನಾಗರಿಕರಿಗೂ ವಿಸ್ತರಣೆ. ರಾಜ್ಯದ ಪ್ರತಿ ವ್ಯಕ್ತಿಗೂ ಕೆ.ಜಿ.ಗೆ ಒಂದು ರೂ.ಗಳಂತೆ ಪ್ರತಿ ತಿಂಗಳು ನಾಲ್ಕು ಕೆ.ಜಿ. ರಾಗಿ ಅಥವಾ ಜೋಳ ಅಥವಾ ಗೋಧಿ ಮತ್ತು ಎರಡು ಕೆ.ಜಿ. ಅಕ್ಕಿ ಪೂರೈಕೆ.
* 18 ವರ್ಷ ಪೂರೈಸಿದ ಯುವಕ-ಯುವತಿಯರಿಗಾಗಿ ಕರ್ನಾಟಕ ಅಭಿವೃದ್ಧಿ ಸೇನೆ ಸ್ಥಾಪನೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿವರ್ಷ 500 ಯುವಕ-ಯುವತಿಯರ ಸೇರ್ಪಡೆ. ಈ ಸೇನೆಯಲ್ಲಿ 6 ತಿಂಗಳ ಕಾಲ ಮಿಲಿಟರಿ ರೀತಿ ತರಬೇತಿ. 18 ತಿಂಗಳು ಕಾಲ ಅವರು ಇಷ್ಟಪಡುವ ವೃತ್ತಿಶಿಕ್ಷಣಕ್ಕೆ ಅವಕಾಶ. ಎರಡು ವರ್ಷ ಕಾಲ ಈ ಸೇನೆಗೆ ಸೇರುವವವರಿಗೆ ಪ್ರತಿ ತಿಂಗಳು 6,000 ರೂ.ಗಳ ಭತ್ಯೆ.
* ಏಕಕಾಲಕ್ಕೆ ಒಂದೇ ಸ್ಥಳದಲ್ಲಿ 25ಕ್ಕೂ ಹೆಚ್ಚು ಸಾಮೂಹಿಕ ವಿವಾಹ ಏರ್ಪಡಿಸಿದರೆ ಪ್ರತಿ ದಂಪತಿಗೆ 50 ಸಾವಿರ ರೂ. ಪ್ರೋತ್ಸಾಹ ಧನ.
* ಎಲ್ಲ ನಿವೃತ್ತ ಪೊಲೀಸ್‌ ಅಧಿಕಾರಿಗಳಿಗೂ ಆರೋಗ್ಯ ಭಾಗ್ಯ ಯೋಜನೆ ವಿಸ್ತರಣೆ

English summary
Former IPS officer Shankar M Bidari announced the launch of a new political party called Jana Shakti. Shankar Bidari said, he would contest the Lok Sabha elections from his new party. Bidari also released party manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X